ಕ್ರೇಜಿಸ್ಟಾರ್‌ಗೆ 62ರ ಸಂಭ್ರಮ !

masthmagaa.com:

ಕ್ರೇಜಿ ಸ್ಟಾರ್‌ ರವಿಚಂದ್ರನ್‌ ಅಂದ್ರೆ ನಮಗೆಲ್ಲಾ ನೆನಪಾಗೋದು ಅವರ ಕ್ರಿಯೇಟಿವಿಟಿ, ಅದ್ದೂರಿ ಮೇಕಿಂಗ್‌, ಚಂದ ಚಂದದ ಹುಡುಗಿಯರು ಮತ್ತು ಕಣ್‌ ಮನತಣಿಸುವ ಹಾಡುಗಳು. ಯಾವುದಾದರೂ ಕೆಲಸ ನಿನ್ನ ಹತ್ರ ಮಾಡೋಕೆ ಆಗೋದಿಲ್ಲ ಅಂತ ಹೇಳ್ದಾಗ ಅದನ್ನ ಮಾಡಿ ತೋರಿಸುವ ಹಠವಾದಿ ಇವರು. ಹಾಗೇ ಹೆಣ್ಣು ಅಂದ್ರೆನೇ ಒಂದು ಅದ್ಭುತವಾದ ಕಲ್ಪನೆ. ಆ ಕಲ್ಪನೆಯನ್ನ ಇಷ್ಟು ಅದ್ಭುತವಾಗಿ ತೋರಿಸಬಹುದಾ ಅನ್ನುವಷ್ಟು ಅದ್ಭುತವಾಗಿ ತೋರಿಸಿ ಎಲ್ಲರೂ ಶಾಕ್‌ ಆಗುವಂತೆ ಮಾಡಿದವ್ರು ಕ್ರೇಜಿ ಸ್ಟಾರ್‌. ಪ್ರೀತಿ, ಪ್ರೇಮ, ಹೂವುಗಳು, ನವಿಲು ಗರಿ, ದ್ರಾಕ್ಷೀ, ಪೇಂಟಿಂಗ್‌ ಅನ್ನೋ ಕಾನ್ಸೆಪ್ಟ್‌ ಇಟ್ಟುಕೊಂಡು ಸಿನಿಮಾ ಮಾಡಿ ಹಿಸ್ಟರಿ ಕ್ರೀಯೆಟ್‌ ಮಾಡಿದವ್ರು. ಅದಕ್ಕೆ ತಕ್ಕ ಸಾಥ್‌ ಕೊಟ್ಟಿದ್ದು ಹಂಸಲೇಖ ಅವರ ಅದ್ಭುತವಾದ ಹಾಡುಗಳು. ಇವರಿಬ್ಬರ ಕಾಂಬಿನೇಷನ್‌ ಒಂದಿಡಿ ಜನರೇಷನ್‌ ಅನ್ನೇ ಮಂತ್ರಮುಗ್ಧಗೊಳಿಸಿತ್ತು. ಭಾರತೀಯ ಚಿತ್ರರಂಗದ ಟ್ರೆಂಡ್‌ ಸೆಟ್ಟಿಂಗ್‌ ಕಾಂಬಿನೇಷನ್‌ನಲ್ಲಿ ಹಂಸಲೇಖ ರವಿಚಂದ್ರನ್‌ ಜೋಡಿ ಕೂಡ ಒಂದು. ಇನ್ನೂ ಯಾವುದೇ ಇಂಟರ್‌ವ್ಯೂ ನೋಡಿ ಅಥ್ವಾ ಯಾವುದೇ ಅವಾರ್ಡ್‌ ಫಂಕ್ಷನ್‌ ನೋಡಿದ್ರೂ ಕೂಡ ರವಿಚಂದ್ರನ್‌ ಅವರು ಮೊದಲು ಮಾತಾಡೋದು ಸಿನಿಮಾ ಬಗ್ಗೆ, ಸಿನಿಮಾವನ್ನ ಅಮಲಿನ ರೀತಿ ತಮ್ಮ ಜೀವನದಲ್ಲಿ ತುಂಬಿಸಿಕೊಂಡವ್ರು ರವಿಚಂದ್ರನ್‌.

ಅಷ್ಟೇ ಅಲ್ಲ ಬೇರೆ ಸಿನಿಮಾಗಳಲ್ಲಿ ಹೀರೋಯಿನ್‌ಗಳು ಒಂದು ಲೆವೆಲ್‌ಗೆ ಒಕೆ ಪರವಾಗಿಲ್ಲ ಅನ್ನೋ ರೀತಿ ಕಾಣಿಸಿಕೊಂಡಿದ್ರು ಕೂಡ ರವಿಚಂದ್ರನ್‌ ಮೂವಿ ಅಂತ ಬಂದಾಗ ಮಾತ್ರ ನೆಕ್ಸ್ಟ್‌ ಲೆವೆಲ್‌ ಅಲ್ಲಿ ಕಾಣಿಸಿಕೋಳ್ತಾ ಇದ್ರು. ಈ ಮಾತನ್ನ ಎಷ್ಟೋ ಹಿರೋಯಿನ್ಸ್‌ಗಳು ಸಹ ಹೇಳಿಕೊಂಡಿದ್ದಾರೆ. ಇನ್ನೂ ಇವರ ಪ್ರೇಮಲೋಕ ಚಿತ್ರ ಅಂತೂ ದೊಡ್ಡ ಹಿಸ್ಟರಿಯನ್ನೇ ಕ್ರಿಯೇಟ್‌ ಮಾಡಿಬಿಟ್ಟಿತ್ತು. ಅಷ್ಟು ದಿನ ಆ ರೀತಿಯ ಗ್ಲಾಮರ್‌ ಆಂಡ್‌ ಬೋಲ್ಡ್‌ ಸಿನಿಮಾಗಳನ್ನೇ ನೋಡಿರದ ಕನ್ನಡ ಸಿನಿ ಪ್ರಿಯರು, ಪ್ರೇಮ ಲೋಕ ಸಿನಿಮಾ ನೋಡಿ ಶಾಕ್‌ ಆಗಿ ಬಿಟ್ಟಿದ್ರು. ಆ ಮ್ಯೂಸಿಕ್‌, ಡ್ರೆಸ್‌ ಸೆನ್ಸ್‌, ಕಾಲೇಜ್‌ ಲವ್‌ ಸ್ಟೋರಿ ಇದೆಲ್ಲವನ್ನ ಆಡಿಯನ್ಸ್‌ ಈಗಲೂ ಕೂಡ ನೆನಪಿಟ್ಟು ಕೊಂಡಿದ್ದಾರೆ. ಇವಾಗಲೂ ಕೂಡ ಕಾಲೇಜ್‌ಗೆ ಸೇರೋರಿಗೆ ನಮ್ಮ ಕಾಲೇಜ್‌ಲ್ಲೂ ಇದೇ ರೀತಿ ಇದ್ರೆ ಮಸ್ತ್‌ ಇರತ್ತೆ ಅಂತ ಅಂದ್ಕೊಳ್ತಾರೆ.

ಸಿನಿಮಾ ವಿಷಯ ಅಂತ ಬಂದ್ರೆ ರವಿಚಂದ್ರನ್‌ ಅವರಿಗೆ ತಮ್ಮ ಇಮ್ಯಾಜಿನೇಷನ್‌ ಅಲ್ಲಿ ಯಾವ ರೀತಿ ಸಿನಿಮಾ ಬರ್ಬೇಕು ಅಂತ ಇರತ್ತೋ ಆ ರೀತಿ ಸೀನ್‌ಗಳು ಬರೋ ತನಕ ಬಿಡ್ತಾ ಇರಲಿಲ್ಲ ಅಂತೆ. ಇದಕ್ಕೆ ಸಾಕ್ಷಿ ಎಂಬಂತೆ ಒಂದ್‌ ಸಲ ಜೂಹಿ ಚಾವ್ಲಾ ಮತ್ತೆ ಖುಷ್ಬೂ ರವಿಚಂದ್ರನ್‌ ಸಿನಿಮಾ ಸಹವಾಸವೇ ಬೇಡ, ಯಾಕೆ ಅವರು ಅಷ್ಟೆಲ್ಲಾ ಕಷ್ಟ ಕೊಡ್ತಾರೆ ಅಂತ ಅಂದಕೊಂಡ್‌ ಬಿಟ್ಟಿದ್ರಂತೆ. ಅಷ್ಟೇ ಅಲ್ಲ ಖುಷ್ಬೂ ಮತ್ತೆ ರವಿಚಂದ್ರನ್‌ ಅವರಿಗೆ ಸೆಟ್‌ ಅಲ್ಲಿ ತುಂಬಾ ಸಲ ಜಗಳ ಕೂಡ ಆಗಿತ್ತು. ಜಗಳ ಅಗೋದು ಕೇವಲ ಸಿನಿಮಾ ವಿಷಯಕ್ಕೆ ಮಾತ್ರ, ಅಂದ್ರೆ ಸೀನ್‌ ಈ ರೀತಿ ಬರಬೇಕು ಅಂದ್ರೆ ಅದು ಅದೇ ರೀತಿ ಬರಬೇಕು ಅನ್ನೋ ಹಠ ರವಿಚಂದ್ರನ್‌ ಅವರಿಗೆ.

ಅಷ್ಟೇ ಅಲ್ಲ 80ರ ದಶಕದಲ್ಲಿ ದೊಡ್ಡ ದೊಡ್ಡ ಹಿಟ್‌ ಕೊಟ್ಟ ನಟರೇ ಕೈ ಹಾಕಿರದ ಹೈ ಬಜೆಟ್‌ ಸಿನಿಮಾಗಳಿಗೆ ರವಿಚಂದ್ರನ್‌ ಕೈ ಹಾಕಿ ಸೈ ಎನಿಸಿಕೊಂಡಿದ್ರು. ದುಡ್ಡಿನ ಹೊಳೆಯನ್ನೇ ಹರಿಸಿ ಸಿನಿಮಾ ಮಾಡೋ ಧೈರ್ಯ ಇದ್ದಿದ್ದು ರವಿಚಂದ್ರನ್‌ ಅವರಿಗೆ ಮಾತ್ರ ಅಂತ ಅನ್ಸತ್ತೆ. ಯಾಕಂದ್ರೆ ಆ ಕಾಲದಲ್ಲೇ ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಶಾಂತಿ ಕ್ರಾಂತಿ ಸಿನಿಮಾ ಮಡಿದ್ರು, ರಜನಿಕಾಂತ್‌, ನಾಗಾರ್ಜುನ್‌ ಅವರಂತಹ ದಿಗ್ಗಜ ನಟರನ್ನ ಹಾಕೊಂಡು ಬೆಂಗಳೂರಿನ ಎಮ್‌,ಜಿ ರೋಡ್‌ನ ರಸ್ತೆಯಲ್ಲಿ ಸಿನಿಮಾ ಶೂಟಿಂಗ್‌ ಮಾಡಿದ್ರು. ಇನ್ನೂ ಏಕಾಂಗಿ ಸಿನಿಮಾದ ಲಾಸ್ಟ್‌ ಸೀನ್‌ ನೀವು ನೋಡಿರಬಹುದು. ಕೇವಲ ಒಂದು ಸೀನ್‌ ಮಾಡೋಕೋಸ್ಕರ ಸುಮಾರು 80ಲಕ್ಷ ಖರ್ಚು ಮಾಡಿ ಸೆಟ್‌ ಹಾಕಿಸಿದ್ದಷ್ಟೇ ಅಲ್ಲದೇ ಸೀನ್‌ ಡಿಮ್ಯಾಂಡ್‌ ಮಾಡ್ತಾ ಇದೆ ಅನ್ನೋ ಕಾರಣಕ್ಕೆ ಇಡೀ ಸೆಟ್‌ ಅನ್ನ ಡಿಸ್ಟ್ರಾಯ್‌ ಮಾಡಿದ್ರು. ಇದೆಲ್ಲಾ ಕೇಳಿದ್ರೆ ನಿಮಗೂ ಅನ್ಬಹುದು ಸಿನಿಮಾಗಾಗಿ ರವಿಚಂದ್ರನ್‌ ಅವರು ಎಂತ ರಿಸ್ಕ್‌ ಬೇಕಿದ್ರೂ ತಗೋಳೊಕೆ ರೆಡಿ ಇರ್ತಾರೆ ಅಂತ. ಅದಕ್ಕೆ ಅವರನ್ನ ಕ್ರೇಜಿ ಸ್ಟಾರ್‌ ಅಂತ ಕರಿಯೋದು. ಆದರೆ ದೊಡ್ಡ ಬಜೆಟ್‌ನಲ್ಲಿ ರೆಡಿ ಆದಂತ ಅದೇ ಏಕಾಂಗಿ, ಶಾಂತಿ ಕ್ರಾಂತಿ ಸಿನಿಮಾಗಳು ಇವರಿಗೆ ಕೈ ಸುಟ್ಟು ಕೊಳ್ಳುವಂತೆ ಮಾಡಿತ್ತು. ಇವಾಗ್ಲೂ ಕೂಡ ರವಿಚಂದ್ರನ್‌ ಎಷ್ಟೋ ಇಂಟರ್‌ವ್ಯೂಗಳಲ್ಲಿ ಹೇಳ್ತಾ ಇರ್ತಾರೆ. ನಾನು ಸೋತಿರಬಹುದು, ಆದ್ರೆ ನನ್ನ ಕನಸು ಯಾವತ್ತೂ ಸೋತಿಲ್ಲ, ಸೋಲೋಕೂ ನಾನು ಬಿಡೋದಿಲ್ಲ ಅಂತ. ಸತತ ಸೋಲುಗಳನ್ನ ಅನುಭವಿಸಿದ ನಂತರ ಒಂದು ಪಾಂಯ್ಟ್‌ಅಲ್ಲಿ ಮಲ್ಲ ಅನ್ನೋ ತಮ್ಮ ಟೈಪ್‌ನ ಸಿನಿಮಾ ಮಾಡಿ ತನಗೆ ಗೆಲ್ಲೋ ತಾಕತ್‌ ಇನ್ನೂ ಕೂಡ ಕಡಿಮೆ ಆಗಿಲ್ಲ ಅಂತ ಪ್ರೂವ್‌ ಮಾಡಿದ್ರು. ಸಂಗೀತ, ಸಾಹಿತ್ಯ, ಸಂಕಲನ, ನಿರ್ದೇಶನ, ನಿರ್ಮಾಣ ಇದೆಲ್ಲದರಲ್ಲೂ ಸೈ ಎನಿಸಿಕೊಂಡಿರುವ ರವಿಚಂದ್ರನ್‌ ಮತ್ತೆ ಎದ್ದು ನಿಲ್ಲೋ ಕೆಪಾಸಿಟಿ ಇರುವ ಹಠವಾದಿ. ಸದ್ಯಕ್ಕೆ ಪೋಷಕ ಪಾತ್ರಗಳಲ್ಲಿ ಬ್ಯುಸಿ ಆಗಿರುವ ರವಿಚಂದ್ರನ್‌ ಅವರಿಗೆ 62ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ.

-masthmagaa.com

Contact Us for Advertisement

Leave a Reply