ಭಾರತದಿಂದ ದಿಢೀರ್‌ ಪಾಕ್‌ಗೆ ವಾಪಾಸಾಗಿದ್ದ ನಿರೂಪಕಿ ಝೈನಾಬ್‌ ಕೊಟ್ಟ ಜವಾಬ್‌ ಏನು?

masthmagaa.com:

ಭಾರತದಲ್ಲಿ ನಡಿತಿರುವ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ಪಂದ್ಯಗಳ ವರದಿಗಾಗಿ ಬಂದಿದ್ದ ಪಾಕಿಸ್ತಾನದ ಸ್ಪೋರ್ಟ್ಸ್‌ ನಿರೂಪಕಿ ಝೈನಬ್‌ ಅಬ್ಬಾಸ್‌ ಇತ್ತೀಚೆಗೆ ಭಾರತದಿಂದ ವಾಪಾಸ್‌ ಆಗಿದ್ರು. ಇದೀಗ ಈ ಬಗ್ಗೆ ಝೈನಬ್‌ ಪ್ರತಿಕ್ರಿಯೆ ನೀಡಿದ್ದು, ನನ್ನನ್ನ ಭಾರತದಿಂದ ಗಡಿಪಾರು ಮಾಡಿಲ್ಲ. ಭಾರತದಿಂದ ತೆರಳುವಂತೆಯೂ ಯಾರು ಕೂಡ ಹೇಳಿಲ್ಲ. ಆದ್ರೆ ನನ್ನ ಹಳೆಯ ಪೋಸ್ಟ್‌ಗಳಿಗೆ ಸೋಷಿಯಲ್‌ ಮೀಡಿಯಾಗಳಲ್ಲಿ ಬಂದ ಪ್ರತಿಕ್ರಿಯೆಗಳಿಗೆ ಹೆದರಿ ನಾನೇ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಇದೇ ವೇಳೆ ನನ್ನ ಸುರಕ್ಷತೆಗೆ ಯಾವುದೇ ಬೆದರಿಕೆ ಇಲ್ಲ, ಆದ್ರೆ ಎರಡೂ ಕಡೆಯಲ್ಲಿ ನನ್ನ ಕುಟುಂಬ ಮತ್ತು ಸ್ನೇಹಿತರು ಆತಂಕಕ್ಕೊಳಗಾಗಿದ್ದಾರೆ. ಅಲ್ದೆ ಈ ಹಿಂದೆ ಮಾಡಲಾದ ಪೋಸ್ಟ್‌ಗಳಿಂದ ಉಂಟಾದ ನೋವಿನ ಬಗ್ಗೆ ನನಗೆ ಅರ್ಥವಾಗಿದೆ. ಇದಕ್ಕಾಗಿ ನಾನು ತೀವ್ರವಾಗಿ ವಿಷಾದಿಸುತ್ತೇನೆ. ಅದ್ರಿಂದ ಯಾರಿಗಾದ್ರು ನೋವಾಗಿದ್ರೆ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ಆದ್ರೆ ಆಗಿನ ನನ್ನ ಪೋಸ್ಟ್‌ಗಳು ಈಗಿನ ನನ್ನ ಅಭಿಪ್ರಾಯಗಳನ್ನ ಪ್ರತಿನಿಧಿಸೋದಿಲ್ಲ ಅಂತ ಝೈನಾಬ್ ಸ್ಪಷ್ಟನೆ ಕೊಟ್ಟಿದ್ದಾರೆ.

-masthmagaa.com

Contact Us for Advertisement

Leave a Reply