ಟೀಂ ಇಂಡಿಯಾ ಆಟಗಾರ ಪೃಥ್ವಿ ಶಾ ಮೇಲೆ ಹಲ್ಲೆ! ಕಾರಣವೇನು?

masthmagaa.com:

ಅಭಿಮಾನಿಗಳಿಗೆ ಸೆಲ್ಫಿ ನೀಡೋಕೆ ನಿರಾಕರಿಸಿದ್ದಕ್ಕೆ ಭಾರತೀಯ ಕ್ರಿಕೆಟ್‌ ಟೀಂನ ಬ್ಯಾಟರ್‌ ಪೃಥ್ವಿ ಶಾ ಅವ್ರ ಮೇಲೆ ಹಲ್ಲೆ ನಡೆದಿರೊ ಘಟನೆ ಮುಂಬೈನಲ್ಲಿ ನಡೆದಿದೆ. ಮುಂಬೈನ ಹೋಟೆಲ್‌ ಒಂದರಲ್ಲಿ ಓರ್ವ ಯುವತಿ ಮತ್ತು ಓರ್ವ ಯುವಕ ಪೃಥ್ವಿ ಬಳಿ ಸೆಲ್ಫಿ ಕೇಳಿದ್ದಾರೆ. ಒಂದೆರಡು ಫೋಟೋ ವಿಡಿಯೋ ನಂತ್ರ ಪೃಥ್ವಿ ನಿಲ್ಲಿಸೋಕೆ ಹೇಳಿದ್ದಾರೆ. ಆದ್ರೆ ಅವ್ರು ಹೆಚ್ಚಿನ ಫೋಟೋ ಕೇಳಿದಾಗ ಪೃಥ್ವಿ ಹೋಟೆಲ್‌ ಮ್ಯಾನೇಜರ್‌ಗೆ ಹೇಳಿ ಅವ್ರನ್ನ ಹೊರಗೆ ಕಳುಹಿಸಿದ್ದಾರೆ. ಬಳಿಕ ಈ ಇಬ್ಬರು ಒಂದಷ್ಟು ಜನರನ್ನ ಕರೆದುಕೊಂಡು ಬಂದು ಪೃಥ್ವಿ ಅವ್ರು ಹೊರಡೋದನ್ನೆ ಕಾದು ಅವ್ರ ಸ್ನೇಹಿತನ ಕಾರಿನ ಮೇಲೆ ದಾಳಿ ಮಾಡಿದ್ದಾರೆ. ಜೊತೆಗೆ 50 ಸಾವಿರ ನೀಡ್ಬೇಕು ಇಲ್ಲಾ ಅಂದ್ರೆ ನಿಮ್ಮ ಮೇಲೆ ಸುಳ್ಳು ಕಂಪ್ಲೇಂಟ್‌ ನೀಡ್ಬೇಕಾಗುತ್ತೆ ಅಂತ ಬೆದರಿಕೆ ಹಾಕಿದ್ರು ಅಂತ ಪೃಥ್ವಿ ಅವ್ರ ಸ್ನೇಹಿತ ನೀಡಿರೋ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇನ್ನು 8 ಜನ ಆರೋಪಿಗಳ ವಿರುದ್ಧ ಕೇಸ್‌ ದಾಖಲಾಗಿದ್ದು, ಆರೋಪಿಗಳನ್ನ ಅರೆಸ್ಟ್‌ ಮಾಡಲಾಗಿದೆ ಅಂತ ಪೊಲೀಸರು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply