ಡ್ಯಾನ್ಸ್‌ ಡೇ – ಅಪ್ಪು ಡ್ಯಾನ್ಸ್‌ ನೆನಪಿಸಿಕೊಂಡ ಅಭಿಮಾನಿಗಳು !

masthmagaa.com:

ಕನ್ನಡ ಇಂಡಸ್ಟ್ರಿಯ ಮೈಕಲ್ ಜ್ಯಾಕ್ಸನ್ ಎಂದು ಹೆಸರು ಪಡೆದಿರುವ ಪುನೀತ್‌ ರಾಜ್‌ಕುಮಾರ್‌ ಅವರನ್ನ ಫ್ಯಾನ್ಸ್‌ಗಳೆಲ್ಲಾ ತುಂಬಾನೇ ನೆನಪು ಮಾಡಿಕೊಳ್ತಾ ಇದಾರೆ. ಯಾಕಂದ್ರೆ ಇವತ್ತು ಇವತ್ತು ಅಂತರಾಷ್ಟ್ರೀಯ ಡ್ಯಾನ್ಸ್‌ ಡೇ. ಡ್ಯಾನ್ಸ್‌ಗೆ ಎತ್ತಿ ಕೈ ಅಂದ್ರೆ ಅದು ಪವರ್‌ ಸ್ಟಾರ್‌. ತಾವು ಮೊದಲು ಹೀರೋ ಆಗಿ ಅಭಿನಯಿಸಿದ ಅಪ್ಪು ಚಿತ್ರದ ಮೂಲಕ ಅಭಿಮಾನಿಗಳಲ್ಲಿ ಡ್ಯಾನ್ಸ್‌ ಅಂದ್ರೆ ಅಪ್ಪು, ಅಪ್ಪು ಅಂದ್ರೆ ಡ್ಯಾನ್ಸ್‌ ಎನ್ನುವಷ್ಟು ಅದ್ಭುತ ಡ್ಯಾನ್ಸ್ ಮಾಡಿದ್ರು. ಡ್ಯಾನ್ಸ್‌ ವಿಷಯದಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರನ್ನ ಬೀಟ್‌ ಮಾಡೋಕೆ ಯಾರಿಂದಲೂ ಸಾಧ್ಯ ಇಲ್ಲ ಅಂತ ಅವರ ಅಭಿಮಾನಿಗಳು ಫಿಕ್ಸ್‌ ಆಗಿಬಿಟ್ರು. ಅದರಲ್ಲೂ ಪುನೀತ್‌ ಅವರ ಸ್ಟೆಪ್‌ಗಳನ್ನ ಕಾಪಿ ಮಾಡೋದು ಕೂಡ ಅಷ್ಟೇ ಕಷ್ಟ ಆಗಿತ್ತು. ಅಷ್ಟು ಈಸಿಯಾಗಿ ಅವರ ಸ್ಟೆಪ್‌ಗಳನ್ನ ಕಾಪಿ ಮಾಡೋಕೆ ಆಗ್ತಾ ಇರಲಿಲ್ಲ. ಹೊಸ ಹೊಸ ರೀತಿಯ ಸ್ಟೆಪ್‌ಗಳನ್ನ ಟ್ರೈ ಮಾಡ್ತಿದ್ರು. ಡ್ಯಾನ್ಸ್‌ನಲ್ಲೇ ಹೊಸತನವನ್ನ ಹುಡುಕ್ತಿದ್ರು.

ತಮಿಳು ನಟ ವಿಶಾಲ್ ತಾಯಿ ಕೂಡ ಪುನೀತ್ ನೃತ್ಯವನ್ನ ಮೆಚ್ಚುತ್ತಿದ್ದರು. ಪುತ್ರ ವಿಶಾಲ್​ಗೆ ನೃತ್ಯ ಮಾಡಿದ್ರೆ, ಪುನೀತ್ ರೀತಿ ಮಾಡ್ಬೇಕು ಅಂತಲೂ ಸಲಹೆ ಕೊಡ್ತಿದ್ದರು. ವಿಶಾಲ್ ಈ ವಿಷಯವನ್ನ ಬೆಂಗಳೂರಿಗೆ ಬಂದಾಗ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದರು.

ಅಲ್ಲದೇ ಡ್ಯಾನ್ಸ್‌ ಶೋ ಒಂದರಲ್ಲಿ ಕಂಟೆಸ್ಟೆಂಟ್‌ ಮಾಡಿದ ಒಂದು ಸ್ಟೆಪ್‌ ಅಪ್ಪುಗೆ ತುಂಬಾನೇ ಇಷ್ಟ ಆಗಿತ್ತು, ಆ ಸ್ಟೆಪ್‌ನ್ನ ತಮ್ಮ ಯಾವುದಾದರೂ ಒಂದು ಸಿನಿಮಾದಲ್ಲಿ ಮಾಡೇ ಮಾಡ್ತೀನಿ ಅಂತ ಮಾತು ಕೊಟ್ಟಿದ್ರು. ಅದರಂತೆ ನಟ ಸಾರ್ವಭೌಮ ಚಿತ್ರದಲ್ಲಿ ಒಪನ್‌ ದ ಬಾಟಲ್‌ ಹಾಡಿಗೆ ಮಾತು ಕೊಟ್ಟಂತೆ ಸ್ಟೆಪ್‌ನ್ನ ಮಾಡೋ ಮೂಲಕ ಅಭಿಮಾನಿಗೆ ಕೊಟ್ಟ ಮಾತನ್ನ ಉಳಿಸಿಕೊಂಡಿದ್ದರು. ಅದರಲ್ಲೂ ಪುನೀತ್‌ ನಮ್ಮನ್ನೇಲ್ಲಾ ಅಗಲುವ ಕೆಲವೇ ಕೆಲವು ದಿನಗಳ ಹಿಂದೆ ಭಜರಂಗಿ-2 ಚಿತ್ರದ ಪ್ರೀ- ರಿಲೀಸ್‌ ಇವೆಂಟ್‌ನಲ್ಲಿ ಶಿವಣ್ಣನ ಜೊತೆ ಹೆಜ್ಜೆ ಹಾಕಿ ಎಂಜಾಯ್‌ ಮಾಡಿದ್ರು.

ಪುನೀತ್‌ ನಮ್ಮನ್ನೇಲ್ಲಾ ದೈಹಿಕವಾಗಿ ಅಷ್ಟೇ ಅಗಲಿದ್ದಾರೆ, ಆದರೆ ಅವರ ಸಮಾಜಮುಖಿ ಕೆಲಸಗಳು, ಅವರ ನಗು, ಅವರ ಡ್ಯಾನ್ಸ್‌ ಎಲ್ಲವೂ ಕೂಡ ನಮ್ಮೊಂದಿಗೆ ಯಾವಗಲೂ ಮಾಸದೇ ಹಾಗೇ ಇರತ್ತೆ ಅನ್ನೋದು ಅಭಿಮಾನಿಗಳ ಅಭಿಪ್ರಾಯ.

-masthmagaa.com

Contact Us for Advertisement

Leave a Reply