ದರ್ಶನ್​​​​​​ ನಿರ್ದೇಶಕರಿಗೆ ಪುಡಂಗು ಅಂದಿದ್ದಕ್ಕೆ ಬೇಜಾರಾಯ್ತು: ಪ್ರೇಮ್

masthmagaa.com:

ದರ್ಶನ್ ವಿವಾದ ಶುರುವಾಗಿ ಇವತ್ತಿಗೆ ಒಂದು ವಾರವೇ ಕಳೆದು ಹೋಯ್ತು. ದಿನಕ್ಕೊಂದು ವಿವಾದಗಳು ಹೊರಗೆ ಬರುತ್ತಲೇ ಇವೆ. ಇದೀಗ ನಿನ್ನೆ ನಿರ್ದೇಶಕರ ಬಗ್ಗೆ ಮಾತಾಡ್ತಾ ದರ್ಶನ್​​​, ನಟ. ನಿರ್ಮಾಪಕ ಪ್ರೇಮ್​​​ರನ್ನು ಪುಡಂಗು ಎಂದಿದ್ದಕ್ಕೆ ಪ್ರೇಮ್ ಬೇಜಾರ್ ಮಾಡ್ಕೊಂಡಿದ್ದಾರೆ. ಇವತ್ತು ಸುದ್ದಿಗೋಷ್ಠಿ ನಡೆಸಿದ ಅವರು, ದರ್ಶನ್ ನಾನು ಕ್ಲೋಸ್ ಫ್ರೆಂಡ್ಸ್​​.. ಒಂದೇ ಫ್ಯಾಮಿಲಿ ಇದ್ದಂಗೆ..ದರ್ಶನ್ ಅವರ ಅಮ್ಮ ನನಗೂ ಅಮ್ಮ ಇದ್ದಂತೆ.. ನನಗೂ ಕೈತುತ್ತು ಕೊಟ್ಟಿದ್ದಾರೆ. ಅವರು ನನ್ನ ಬಗ್ಗೆ ಹಾಗೆಲ್ಲಾ ಮಾತಾಡಿದ್ದು ಸ್ವಲ್ಪ ಬೇಜಾರಾಗಿದೆ ಅಂತ ಹೇಳಿದ್ದಾರೆ. ಈ ನಡುವೆ ಇವತ್ತು ದರ್ಶನ್ ಮೈಸೂರಿಂದ ಬೆಂಗಳೂರಿಗೆ ಬಂದಿದ್ರೂ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಘಟನೆಗಳ ಬಗ್ಗೆ ತಮ್ಮ ಫೇಸ್​​ಬುಕ್ ಪೇಜ್​​ನಲ್ಲಿ ಉದ್ದುದ್ದ ಪೋಸ್ಟ್ ಹಾಕಿರೋ ನಟ ಜಗ್ಗೇಶ್​​, ಇಂಡಸ್ಟ್ರಿಯ ಹಿರಿಯರು, ವಾಣಿಜ್ಯ ಮಂಡಳಿ ಮಧ್ಯ ಪ್ರವೇಶಿಸಿ ಒಡೆದ ಮನಗಳ ಸರಿಮಾಡಿ ಅಂತ ಮನವಿ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply