ಫೈನಲ್ ಗೆ ಹೋಗಿ ಆಡಲ್ಲ ಎಂದ ದೀಪಕ್ ಪುನಿಯಾ..!

ಭಾರತದ ಯುವ ಕುಸ್ತಿ ಪಟು ದೀಪಕ್ ಪುನಿಯಾ ಬೆಳ್ಳಿ ಗೆದ್ದು, ಕಾಲು ನೋವಿನಿಂದ ವಿಶ್ವ ಚಾಂಪಿಯನ್ ಕುಸ್ತಿ ಸ್ಪರ್ಧೆಯಿಂದ ಹೊರ ಬಿದ್ದಿದ್ದಾರೆ. ಸೆಮಿಫೈನಲ್ ಪಂದ್ಯದ ವೇಳೆ ಎಡಗಾಲು ಪಾದಕ್ಕೆ ಗಾಯವಾಗಿದೆ. ಅಲ್ಲದೆ ನೋವಿನಿಂದಾಗಿ ಎಡಗಾಲು ಭಾರವನ್ನು ತಡೆಯುತ್ತಿಲ್ಲ. ಹೀಗಾಗಿ 86 ಕೆ.ಜಿ ವಿಭಾಗದಲ್ಲಿ ಇರಾನಿನ ಶ್ರೇಷ್ಠ ಕುಸ್ತಿಪಟು ಹಜ್ಸನ್ ಯಾಜ್ದಾನಿ ವಿರುದ್ಧದ ಫೈನಲ್ ಪಂದ್ಯ ಆಡಲ್ಲ ಎಂದು ಹೇಳಿದ್ದಾರೆ. ಶನಿವಾರ ಸ್ವಿಜಲ್ಯಾರ್ಂಡ್ ನ ಸ್ಟೀಫನ್ ರೀಚ್‍ಮುತ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ವೇಳೆ ದೀಪಕ್ ಅವರ ಎಡಗಾಲಿಗೆ ಪೆಟ್ಟಾಗಿತ್ತು.

Contact Us for Advertisement

Leave a Reply