masthmagaa.com:

ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ದೆಹಲಿಯ ಅರವಿಂದ ಕೇಜ್ರಿವಾಲ್ ಸರ್ಕಾರ ಚಾಲೆಂಜ್​ವೊಂದನ್ನ ಹಾಕಿದೆ. ಯಾವ ಚಾಲೆಂಜ್ ಹೇಳ್ತೀವಿ ನೋಡಿ.. ಅಂದ್ಹಾಗೆ 2022ರಲ್ಲಿ ನಡೆಯಲಿರುವ ಉತ್ತರಪ್ರದೇಶ ವಿಧಾನಸಭೆ ಚುನಾವಣೆಗೆ ಆಮ್​ ಆದ್ಮಿ ಪಕ್ಷ ಸ್ಪರ್ಧಿಸಲಿದೆ ಅಂತ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ನಿನ್ನೆ ಘೋಷಣೆ ಮಾಡಿದ್ರು. ಇದೇ ವೇಳೆ ಉತ್ತರಪ್ರದೇಶದ ಜನ ಶಿಕ್ಷಣ ಮತ್ತು ಆರೋಗ್ಯ ಸೇವೆಗಾಗಿ ದೆಹಲಿಗೆ ಬರ್ತಿದ್ದಾರೆ ಅಂತಾನೂ ಹೇಳಿದ್ದರು. ಈ ಬಗ್ಗೆ ಇವತ್ತು ಮಾತನಾಡಿದ ದೆಹಲಿ ಡಿಸಿಎಂ ಮತ್ತು ಶಿಕ್ಷಣ ಸಚಿವ ಮನೀಷ್ ಸಿಸೋಡಿಯಾ, ‘ಚುನಾವಣೆಗೆ ಸ್ಪರ್ಧಿಸ್ತೀವಿ ಅಂತ ಹೇಳಿದ ಕೂಡಲೇ ಉತ್ತರಪ್ರದೇಶದ ಕೆಲ ಸಚಿವರು ಡೆಲ್ಲಿ ಸ್ಕೂಲ್ ಮಾಡೆಲ್ ಮತ್ತು ಯುಪಿ ಸ್ಕೂಲ್ ಮಾಡೆಲ್​ ಬಗ್ಗೆ ಚರ್ಚಿಸೋಣ ಅಂತ ಚಾಲೆಂಜ್ ಹಾಕಿದ್ದಾರೆ. ನಾನು ಈ ಚಾಲೆಂಜನ್ನು ಒಪ್ಪಿಕೊಂಡಿದ್ದೇನೆ. ಇದೇ ಡಿಸೆಂಬರ್ 22ರಂದು ಲಖ್ನೌಗೆ ಬರ್ತಿದ್ದೀನಿ. ಯಾರು ನನ್ನ ಜೊತೆ ಚರ್ಚೆಗೆ ಸಿದ್ಧರಿದ್ದೀರಿ ತಿಳಿಸಿ’ ಎಂದಿದ್ದಾರೆ. ಅಲ್ಲದೆ, ಕಳೆದ 4 ವರ್ಷಗಳಿಂದ ಯೋಗಿ ಆದಿತ್ಯನಾಥ್ ಅಧಿಕಾರವನ್ನ ಅನುಭವಿಸಿದ್ದಾರೆ. ಇನ್ನು ಒಂದು ವರ್ಷ ಬಾಕಿ ಇದೆ. ಈ ಅವಧಿಯಲ್ಲಿ ಶಾಲೆಗಳನ್ನ ಅಭಿವೃದ್ಧಿಪಡಿಸಿ. ಇಲ್ಲದಿದ್ರೆ ಒಂದು ವರ್ಷದ ಬಳಿಕ ಜನ ನಿಮ್ಮನ್ನ ಬದಲಿಸ್ತಾರೆ ಅಂತ ಸಿಸೋಡಿಯಾ ಹೇಳಿದ್ದಾರೆ. ಇದಕ್ಕೆ ಉತ್ತರಪ್ರದೇಶ ಸರ್ಕಾರ ಯಾವ ರೀತಿ ಪ್ರತಿಕ್ರಿಯೆ ನೀಡುತ್ತೆ ಅನ್ನೋದನ್ನ ಕಾದು ನೋಡ್ಬೇಕು.

-masthmagaa.com

Contact Us for Advertisement

Leave a Reply