ಮತ್ತೆ 4 ದಿನ ಇಡಿ ಕಸ್ಟಡಿಗೆ ಕೇಜ್ರಿವಾಲ್; ಅಮೆರಿಕಗೆ ಭಾರತದ ತಿರುಗೇಟು!

masthmagaa.com:

ಸದ್ಯ ಇಡಿ ಕಸ್ಟಡಿಯಲ್ಲಿರೊ ದಿಲ್ಲಿ ಸಿಎಂ ಕೇಜ್ರಿವಾಲ್‌ರ ಇಡಿ ಕಸ್ಟಡಿ ಅವಧಿಯನ್ನ ಮತ್ತೆ ನಾಲ್ಕು ದಿನ ವಿಸ್ತರಣೆ ಮಾಡಲಾಗಿದೆ. ದೆಹಲಿ ರೋಸ್ ಅವೆನ್ಯೂ ಕೋರ್ಟ್‌ ಈ ಆದೇಶ ನೀಡಿದೆ. ಅಂದ್ರೆ ಏಪ್ರಿಲ್‌ 1ರವರೆಗೆ ಕೇಜ್ರಿವಾಲ್‌ ಇಡಿ ಕಸ್ಟಡಿಯಲ್ಲಿ ಮುಂದುವರೆಯೊದು ಫಿಕ್ಸ್‌ ಆಗಿದೆ. ಅಂದ್ಹಾಗೆ ಇಡಿ ಕಸ್ಟಡಿ ಡೇಟ್‌ ಮುಗಿದ ಬೆನ್ನಲ್ಲೇ ಕೇಜ್ರಿವಾಲ್‌ ಅವ್ರನ್ನ ಕೋರ್ಟ್‌ಗೆ ಹಾಜರು ಪಡಿಸಲಾಗಿತ್ತು. ಈಗ ಮತ್ತೆ 4ದಿನ ಇಡಿ ಕಸ್ಟಡಿಯಲ್ಲಿರುವಂತೆ ಕೋರ್ಟ್‌ ಹೇಳಿದೆ. ಅತ್ತ ದಿಲ್ಲಿ ಸಿಎಂ ಸ್ಥಾನದಿಂದ ಕೇಜ್ರಿವಾಲರನ್ನ ವಜಾ ಮಾಡ್ಬೇಕು ಅಂತೇಳಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನ ದಿಲ್ಲಿ ಹೈಕೋರ್ಟ್‌ ತಿರಸ್ಕರಿಸಿದೆ. ಇನ್ನು ಕೇಜ್ರಿವಾಲ್‌ ಸೇರಿದಂತೆ ಭಾರತದ ಇತರ ಆಂತರಿಕ ವಿಚಾರಗಳಲ್ಲಿ ವಿಚಾರದಲ್ಲಿ ಮತ್ತೆ ಮೂಗು ತೂರಿಸಿದ್ದ ಅಮೆರಿಕಗೆ ಭಾರತ ಈಗ ಮಹಾ ಮಂಗಳಾರತಿ ಮಾಡಿದೆ. ನಮ್ಮ ದೇಶದ ಆಂತರಿಕ ವಿಚಾರದಲ್ಲಿ ಹೊರಗಿನವ್ರ ಅನಗತ್ಯ ಹೇಳಿಕೆಗಳನ್ನ ನಾವ್‌ ಸ್ವೀಕರಿಸೊದಿಲ್ಲ ಅಂತ ಭಾರತ ತಿರುಗೇಟು ನೀಡಿದೆ. ಭಾರತದಲ್ಲಿ ಎಲ್ಲಾ ಲೀಗಲ್‌ ಪ್ರೊಸೆಸ್‌ಗಳು ನೆಲದ ಕಾನೂನಿನಂತೆ ನಡೆಯುತ್ತವೆ. ಹೀಗಾಗಿ ಅಂತಹದೇ ಮೌಲ್ಯ ಹೊಂದಿರುವ ಅದ್ರಲ್ಲೂ ಪ್ರಜಾಪ್ರಭುತ್ವ ರಾಷ್ಟ್ರಗಳಿಗೆ ಈ ವಿಚಾರ ಒಪ್ಕೊಳೋಕೆ ಅಷ್ಟು ಕಷ್ಟ ಆಗ್ಬಾರ್ದು ಅಂತ ಹೇಳಿದೆ.

-masthmagaa.com

Contact Us for Advertisement

Leave a Reply