ಕಳ್ಳನ ಪತ್ತೆಗೆ ಕಳ್ಳನ ಲವರ್ ಆದ ಲೇಡಿ ಕಾನ್​ಸ್ಟೇಬಲ್..!

ದೆಹಲಿ: ಇದು 21ನೇ ಶತಮಾನ. ಪೊಲೀಸರು ಚಾಪೆ ಕೆಳಗೆ ನುಸುಳಿದ್ರೆ, ಕಳ್ಳರು ರಂಗೋಲಿ ಕೆಳಗೆ ನುಸುಳ್ತಾರೆ. ಅದಕ್ಕೆ ಪೊಲೀಸರು ಇತ್ತೀಚೆಗೆ ಆರೋಪಿಗಳನ್ನು ಹಿಡಿಯಲು ತಮ್ಮದೇ ಆದ ಕ್ರಮಗಳನ್ನು ಅನುಸರಿಸುತ್ತಿದ್ದಾರೆ. ದೆಹಲಿಯ ಮುಂಡ್ಕಾ ಬಳಿಯೂ ಇಂಥಹದ್ದೇ ಘಟನೆಯೊಂದು ವರದಿಯಾಗಿದೆ. ಇಲ್ಲಿ ಆರೋಪಿಗಳು ಕ್ಯಾಬ್ ಒಂದನ್ನು ಲೂಟಿ ಮಾಡಿದ್ದರು. ಆರಂಭದಲ್ಲಿ ಪೊಲೀಸರಿಗೆ ಒಂದು ಆಡಿಯೋ ಸಿಕ್ಕಿತ್ತು. ಅದರಲ್ಲಿ ಕಳ್ಳ ಆತನ ಲವರ್ ಜೊತೆ ಮಾತನಾಡೋದು ರೆಕಾರ್ಡ್​ ಆಗಿತ್ತು. ನಂತರ ಕಳ್ಳನ ಪ್ರೇಯಸಿವರೆಗೆ ತಲುಪಿದ ಪೊಲೀಸರು ಆಕೆಯ ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಜೊತೆಗೆ ಮಹಿಳಾ ಕಾನ್​ಸ್ಟೇಬಲ್ ಒಬ್ಬರ ಬಳಿ ಕಾಲ್ ಮಾಡಿಸಿ, ಕಳ್ಳನ ಲವರ್ ರೀತಿಯೇ ಮಾತನಾಡಿಸಿದ್ದಾರೆ. ಆದ್ರೆ ಇದು ಗೊತ್ತಾಗದೇ ಕಳ್ಳ ಸೋಮವೀರ್ ತನ್ನ ಪ್ರಿಯತಮೆಯ ಬಳಿಯೇ ಮಾತನಾಡುತ್ತಿದ್ದೇನೆ ಎಂದುಕೊಂಡು ತನ್ನ ಮಾತು ಮುಂದುವರಿಸಿದ್ದಾರೆ. ನಂತರ ಒಂದು ದಿನ ಇಂತಿಂಥ ಜಾಗದಲ್ಲಿ ಸಿಗುತ್ತೇನೆ ಎಂದು ಹೇಳಿದ್ದ. ಹೀಗಾಗಿ ಪೊಲೀಸರು ಮೊದಲೇ ಅಲ್ಲಿ ಹೋಗಿ ಕಾಯೋಕೆ ಶುರು ಮಾಡಿದ್ರು. ಕಳ್ಳ ಸೋಮವೀರ್ ಬರುತ್ತಿದ್ದಂತೆ ಅರೆಸ್ಟ್​ ಮಾಡಿ, ಜೈಲಿಗೆ ಅಟ್ಟಿದ್ದಾರೆ. 

Contact Us for Advertisement

Leave a Reply