ಚಾರ್ಲಿ ಸಿನಿಮಾ ನಂತರ ಮಂಗಳೂರಲ್ಲಿ ಲ್ಯಾಬ್ರಡಾರ್‌ ನಾಯಿಗಳಿಗೆ ಭಾರೀ ಡಿಮ್ಯಾಂಡ್!

masthmagaa.com:

ʻ777 ಚಾರ್ಲಿʼ ಸಿನಿಮಾದ ನಂತ್ರ ಈಗ ಮಂಗಳೂರಿನಲ್ಲಿ ಲ್ಯಾಬ್ರಡಾರ್‌ ಥಳಿಯ ನಾಯಿಗಳಿಗೆ ವಿಪರೀತ ಬೇಡಿಕೆ ಎದ್ದಿದೆ ಅಂತ ವರದಿಯಾಗಿದೆ. ಜೊತೆಗೆ ಲ್ಯಾಬ್ರಡಾರ್‌ ನಾಯಿಗಳ ಬೆಲೆಯಲ್ಲೂ ಏರಿಕೆ ಕಂಡಿದ್ದು ಒಂದು ನಾಯಿಗೆ 12 ರಿಂದ 13 ಸಾವಿರ ರುಪಾಯಿ ಆಗಿದೆ ಎನ್ನಲಾಗಿದೆ. ಇನ್ನು ಇದಕ್ಕೆ ಪ್ರತಿಕ್ರಿಯಸಿರುವ ಪಶುವೈದ್ಯ ಡಾ. ಯಶಸ್ವಿ ನರವಿ, ಈ ರೀತಿ ದಿಢೀರ್‌ ಬೇಡಿಕೆ ಜಾಸ್ತಿಯಾಗೋದು ಒಳ್ಳೇದಲ್ಲ. ಇದ್ರಿಂದ ಬ್ರೀಡ್‌ ಮಾಡೋದು ಜಾಸ್ತಿಯಾಗಿ, ನಾಯಿಗಳಲ್ಲಿ ಜನ್ಮಜಾತ ದೋಷಗಳು ಅಂದ್ರೆ ಡಿಫೆಕ್ಟ್‌ ಇರೋ ನಾಯಿಗಳು ಜಾಸ್ತಿಯಾಗ್ತಾವೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply