ಜಾಹೀರಾತು ನಿಯಮ ಉಲ್ಲಂಘನೆಯಲ್ಲಿ ಧೋನಿಯೇ ಪ್ರಥಮ!

masthmagaa.com:

ಅತಿ ಹೆಚ್ಚು ಜಾಹೀರಾತು ನಿಯಮ ಉಲ್ಲಂಘನೆ ಮಾಡಿರುವ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂಎಸ್ ಧೋನಿ ಅಗ್ರಸ್ಥಾನದಲ್ಲಿದ್ದಾರೆ ಅಂತ ತಿಳಿದು ಬಂದಿದೆ. ಜಾಹೀರಾತು ಸ್ವಯಂ ನಿಯಂತ್ರಣ ಸಂಸ್ಥೆ ASCI ಬಿಡುಗಡೆ ಮಾಡಿರುವ ದೂರುಗಳ ಪಟ್ಟಿಯಲ್ಲಿ ಧೋನಿ ಅಗ್ರಸ್ಥಾನದಲ್ಲಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.803ರಷ್ಟು ದೂರುಗಳು ಹೆಚ್ಚಿವೆ. ಕಳೆದ ವರ್ಷ 55 ಇದ್ದ ದೂರುಗಳ ಸಂಖ್ಯೆ ಈ ವರ್ಷ 503ಕ್ಕೆ ತಲುಪಿದೆ ಎಂದು ವರದಿಯಾಗಿದೆ. ಧೋನಿಯವರು 10 ಬಾರಿ ನಿಯಮ ಉಲ್ಲಂಘಿಸಿದ್ದರೆ, ಕೊಹ್ಲಿ 5 ಬಾರಿ ನಿಯಮ ಉಲ್ಲಂಘನೆ ಮಾಡಿದ್ದಾರೆ. ಅಂದ್ಹಾಗೆ ಸೆಲೆಬ್ರೆಟಿಗಳು ಜನರ ಬಗ್ಗೆ ಕಾಳಜಿ ವಹಿಸದೆ ಬೆಟ್ಟಿಂಗ್‌ ಅಪ್ಲಿಕೇಶನ್‌ಗಳು ಸೇರಿದಂತೆ ಇತರ ಉತ್ಪನ್ನಗಳನ್ನ ಪ್ರಚಾರ ಮಾಡುತ್ತಿದ್ದಾರೆ ಅಂತ ವರದಿಯಾಗಿದೆ. ಸೆಲೆಬ್ರಿಟಿಗಳು ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳುವಾಗ ತಮ್ಮ ಜವಾಬ್ದಾರಿಗಳ ಬಗ್ಗೆ ನೆನಪಿಟ್ಟುಕೊಳ್ಳಬೇಕು ಎಂದು ಹೇಳಲಾಗಿದೆ.

-masthmagaa.com

Contact Us for Advertisement

Leave a Reply