ನಿರ್ದೇಶನಕ್ಕಿಳಿದ ಶಾರುಖ್‌ ಖಾನ್‌ ಪುತ್ರ !

masthmagaa.com:

ಶಾರುಖ್‌ ಖಾನ್‌ ಮಗ ಆರ್ಯನ್‌ ಖಾನ್‌ ಸಿನಿಮಾ ಇಂಡಸ್ಟ್ರಿಗೆ ಕಾಲಿಡಲಿದ್ದಾರೆ. ಆದರೆ ನಟನಾಗಿ ಅಲ್ಲ, ಡೈರೆಕ್ಟರ್‌ ಆಗಿ. ಆರ್ಯನ್ ಖಾನ್ ನಿರ್ದೇಶನದಲ್ಲಿ ಮುಂದುವರೆಯಲಿದ್ದಾರೆ. “ಸ್ಟಾರ್‌ಡಮ್” ಎಂಬ ವೆಬ್ ಶೋ ಅನ್ನು ನಿರ್ದೇಶಿಸಲಿದ್ದಾರೆ.

ಆರು ಎಪಿಸೋಡ್‌ ಇರುವ ಈ ವೆಬ್‌ ಸಿರೀಸ್‌ ಸಿನಿಮಾ ಇಂಡಸ್ಟ್ರಿಯ ಹಿನ್ನೆಲೆಯನ್ನೇ ಕತೆಯನ್ನಾಗಿ ಮಾಡ್ತೀನಿ ಅಂತ ಆರ್ಯನ್‌ ಹೇಳಿದ್ರು. ಇದನ್ನು ಶಾರುಖ್ ಖಾನ್ ಅವರ ನಿರ್ಮಾಣ ಸಂಸ್ಥೆ ರೆಡ್ ಚಿಲ್ಲಿಸ್ ಎಂಟರ್‌ಟೈನ್‌ಮೆಂಟ್‌ನಿಂದ ನಿರ್ಮಾಣ ಮಾಡಲಾಗ್ತಾ ಇದೆ. ಇದರ ಶೂಟಿಂಗ್‌ ಕೂಡ ಶುರುವಾಗಿದೆ.

ಆರ್ಯನ್‌ ಖಾನ್‌ಗೆ ಟ್ರೈನಿಂಗ್‌ ಕೋಡೊಕೆ ಶಾರುಖ್ ಖಾನ್, ಇಸ್ರೇಲಿ ನಟ ಮತ್ತು ಚಿತ್ರಕಥೆ ಬರಹಗಾರ ಲಿಯರ್ ರೋಜ್‌ರನ್ನ ಕರೆಸಿದ್ದಾರೆ ಅಂತ ಕೂಡ ವರದಿಯಾಗಿದೆ.

-masthmagaa.com

Contact Us for Advertisement

Leave a Reply