ತಮಿಳುನಾಡಲ್ಲಿ ಯಶಸ್ವಿಯಾದ ಇಂಡಿಯಾ ಕೂಟದ ಸೀಟು ಹಂಚಿಕೆ!

masthmagaa.com:

ಲೋಕಸಭೆ ಚುನಾವಣೆ ಹಿನ್ನಲೆ ತಮಿಳುನಾಡಿನಲ್ಲಿ I.N.D.I ಮೈತ್ರಿಕೂಟದ ಪಕ್ಷಗಳು ಸೀಟು ಹಂಚಿಕೆ ಪಕ್ರಿಯೆಯನ್ನ ಅಂತಿಮಗೊಳಿಸಿವೆ. ಪ್ರಮುಖವಾಗಿ ಆಡಳಿತರೂಢ ಎಂಕೆ ಸ್ಟಾಲೀನ್‌ ನೇತೃತ್ವದ ಡಿಎಂಕೆ ಪಕ್ಷ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡ್ಕೊಂಡಿದೆ. ಒಟ್ಟು 39 ಲೋಕಸಭಾ ಸ್ಥಾನಗಳನ್ನ ಒಳಗೊಂಡಿರೊ ತಮಿಳುನಾಡು ಮತ್ತು 1 ಸ್ಥಾನ ಹೊಂದಿರೊ ಪಾಂಡಿಚೇರಿ ಲೋಕಸಭೆ ಕ್ಷೇತ್ರಗಳಲ್ಲಿ ಮೈತ್ರಿ ಫಿಕ್ಸ್‌ ಆಗಿದೆ. ಇದ್ರಲ್ಲಿ ಒಟ್ಟು 21 ಸ್ಥಾನಗಳಲ್ಲಿ ಡಿಎಂಕೆ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ರೆ, ಪಾಂಡಿಚೇರಿ ಸೇರಿದಂತೆ 10 ಸ್ಥಾನಗಳಲ್ಲಿ ಕಾಂಗ್ರೆಸ್‌ ಸ್ಪರ್ಧೆ ಮಾಡಲಿದೆ. ಇನ್ನುಳಿದಂತೆ VCK, CPI, CPM ಪಕ್ಷಗಳು ತಲಾ 2 ಸ್ಥಾನಗಳಲ್ಲಿ ಸ್ಪರ್ಧೆ ಮಾಡಲಿದೆ. ಹಾಗೂ MDMK, KDMK ಮತ್ತು IUML ಪಕ್ಷಗಳು ತಲಾ ಒಂದು ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನ ಕಣಕ್ಕಿಳಿಸಲಿವೆ. ‌

ಅತ್ತ ಚಂಡೀಗಢ್‌ ಮೇಯರ್‌ ಎಲೆಕ್ಷನ್‌ನಲ್ಲಿ ಅಕ್ರಮ ನಡೆದ ಹಿನ್ನಲೆ ಸುಪ್ರೀಂಕೋರ್ಟ್‌ ಆದೇಶದಂತೆ ಆಮ್‌ ಅದ್ಮಿ-ಕಾಂಗ್ರೆಸ್‌ ಮೈತ್ರಿಕೂಟ ಅಧಿಕಾರದ ಗದ್ದುಗೆ ಹಿಡಿದಿದ್ವು. ಹೀಗಾಗಿ ಬಿಜೆಪಿ ಮೇಯರ್‌ ಸ್ಥಾನದಿಂದ ಕೆಳಗಿಯೊಕು ಮುಂಚೆ ಬಿಜೆಪಿಗೆ ಸಪೋರ್ಟ್‌ ಮಾಡಿದ್ದ ಇಬ್ಬರು ಆಮ್‌ ಆದ್ಮಿ ಸದಸ್ಯರು ಮಾತೃ ಪಕ್ಷ AAPಗೆ ವಾಪಸ್ಸಾಗಿದ್ದಾರೆ.

-masthmagaa.com

Contact Us for Advertisement

Leave a Reply