ಜೂನ್ 21ರ ನಂತರ ಲಾಕ್ಡೌನ್ ಏನಾಗುತ್ತೆ ಗೊತ್ತಾ?

masthmagaa.com:

ಜೂನ್‌ 21ರಿಂದ ರಾಜ್ಯದಲ್ಲಿ ಅನ್ಲಾಕ್‌ 2.0ಗೆ ಸಿದ್ದತೆ ನಡೀತ ಇದೆ. ಸರ್ಕಾರ ಕೊರೋನಾ ಸೋಂಕು ನಿಯಂತ್ರಿಸುವ ಸಲುವಾಗಿ ರಚಿಸಿರುವ ತಾಂತ್ರಿಕ ಸಲಹಾ ಸಮಿತಿ ಕೆಲವೊಂದು ಕ್ಷೇತ್ರಗಳ ಅನ್‌ಲಾಕ್‌ಗೆ ಗ್ರೀನ್‌ ಸಿಗ್ನಲ್‌ ಕೊಟ್ಟಿದೆ. ಹಾಗಾದ್ರೆ ಜೂನ್‌ 21 ರಿಂದ ಏನೆಲ್ಲಾ ಮುಕ್ತವಾಗಿರುತ್ತೆ, ಯಾವುದಕ್ಕೆಲ್ಲ ನಿರ್ಬಂಧವಿರುತ್ತೆ ಅನ್ನೋದನ್ನ ನೋಡೋಣ. ಜೂನ್‌ 21 ರಿಂದ ಮಾಲ್‌, ಹೋಟೆಲ್‌, ಚಿಕ್ಕಚಿಕ್ಕ ಮಾರುಕಟ್ಟೆ, ಶಾಪಿಂಗ್ ಕಾಂಪ್ಲೆಕ್ಸ್‌, ಹೇರ್ ಕಟ್‌ ಶಾಪ್‌, ಮದುವೆ ಸಮಾರಂಭಕ್ಕೆ 50 ಜನರಿಗೆ ಅವಕಾಶ ನೀಡಲಾಗುತ್ತೆ. ಹಾಗೂ ಬಟ್ಟೆ ಅಂಗಡಿ, ಚಿನ್ನದಂಗಡಿ ಸೇರಿದಂತೆ ಎಲ್ಲಾ ಬಗೆಯ ವಾಣಿಜ್ಯ ಮಳಿಗೆಗಳು ಸಹ ಜೂನ್‌ 21ರ ನಂತ್ರ ಓಪನ್‌ ಆಗುತ್ತೆ. ಹಾಗೂ ಎಂಟು ಗಂಟೆಗಳ ಕಾಲ ವ್ಯಾಪಾರ, ವಹಿವಾಟು ಮಾಡಲು ಅವಕಾಶ ನೀಡಲಾಗುತ್ತೆ. ಅಲ್ಲದೆ ಜೂನ್‌ 21ರಿಂದ ಶೇ 50 ರಷ್ಟು ಪ್ರಯಾಣಿಕರೊಂದಿಗೆ ಬಸ್‌ ಸಂಚಾರ ಪ್ರಾರಂಭವಾಗುವ ಸಾಧ್ಯತೆ ಇದೆ. ‌ ಆದ್ರೆ ಥಿಯೇಟರ್‌, ಪಬ್‌, ಬಾರ್‌, ಜಿಮ್‌, ಸ್ವಿಮ್ಮಿಂಗ್‌ ಪೂಲ್‌, ಕ್ರಿಡಾಂಗಣಗಳು ಯಥಾಸ್ಥಿತಿ ಕ್ಲೋಸ್‌ ಆಗಿರುತ್ತೆ.ಇವೆಲ್ಲ ಓಪನ್‌ ಆಗಲು ಮೂರನೇ ಹಂತದ ಅನ್ಲಾಕ್‌ ವರೆಗೂ ಕಾಯಲು ತೀರ್ಮಾನಿಸಿದೆ.

-masthmagaa.com

Contact Us for Advertisement

Leave a Reply