masthmagaa.com:

ಅಮೆರಿಕ ಅಧ್ಯಕ್ಷೀಯ ಚುನಾವಣೆ ಹತ್ತಿರ ಬರುತ್ತಿದ್ದಂತೇ ಡೊನಾಲ್ಡ್​ ಟ್ರಂಪ್ ವಿರುದ್ಧ ಲೈಂಗಿಕ ಕಿರುಕುಳದ ಗಂಭೀರ ಆರೋಪ ಕೇಳಿಬಂದಿದೆ. 2 ದಶಕದ ಹಿಂದೆ ಯುಎಸ್​ ಓಪನ್ ಟೆನ್ನಿಸ್​ ಟೂರ್ನಿ ಸಂದರ್ಭದಲ್ಲಿ  ಟ್ರಂಪ್ ನನಗೆ ಲೈಂಗಿಕ ಕಿರುಕುಳ ನೀಡಿದ್ರು ಅಂತ ಮಾಜಿ ಮಾಡೆಲ್ ಆಮಿ ಡೋರಿಸ್ ಆರೋಪ ಮಾಡಿದ್ದಾರೆ.

ಸೆಪ್ಟೆಂಬರ್ 5, 1997 ರಂದು ನ್ಯೂಯಾರ್ಕ್​​ನಲ್ಲಿ ನಡೆದ ಪಂದ್ಯಾವಳಿ ವೇಳೆ ಡೊನಾಲ್ಡ್​ ಟ್ರಂಪ್ ತಮ್ಮ ವಿಐಪಿ ಬಾಕ್ಸ್​ನ ಬಾತ್​ರೂಂ ಹೊರಗೆ ನನ್ನನ್ನು ಗಟ್ಟಿಯಾಗಿ ತಬ್ಬಿಕೊಂಡು ಲೈಂಗಿಕ ಕಿರುಕುಳ ನೀಡಿದ್ರು. ಆಗ ನನಗೆ 24 ವರ್ಷ ವಯಸ್ಸಾಗಿತ್ತು ಅಂತ ಗಾರ್ಡಿಯನ್​ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಆಮಿ ಡೋರಿಸ್ ಆರೋಪಿಸಿದ್ದಾರೆ. 1997ರಲ್ಲಿ ಡೊನಾಲ್ಡ್​ ಟ್ರಂಪ್​ ಉದ್ಯಮಿ ಮತ್ತು ರಿಯಾಲಿಟಿ ಟಿವಿ ಸ್ಟಾರ್ ಆಗಿದ್ದರು.

ಇದಕ್ಕೆ ಸಂಬಂಧಿಸಿದಂತೆ ಯುಎಸ್ ಓಪನ್​ ಟೂರ್ನಿಯ ಟಿಕೆಟ್​ ಮತ್ತು ಟ್ರಂಪ್​ ಜೊತೆಗಿರುವ ಫೋಟೋಗಳನ್ನು ಆಮಿ ಡೋರಿಸ್ ಸಾಕ್ಷ್ಯವಾಗಿ ನೀಡಿದ್ದಾರೆ. 2016ರ ಚುನಾವಣೆ ವೇಳೆ ಟ್ರಂಪ್ ವಿರುದ್ಧ ಹಲವರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಆಗ ಯಾಕೆ ನೀವು ಮಾತನಾಡಿಲಿಲ್ಲ ಅಂತ ಕೇಳಿದ ಪ್ರಶ್ನೆಗೆ, ‘ನನ್ನ ಕುಟುಂಬಕ್ಕೆ ತೊಂದರೆಯಾಗಬಹುದು ಅಂತ ಸುಮ್ಮನಿದ್ದೆ’ ಅಂತ ಆಮಿ ಡೋರಿಸ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply