ಜೋ ಬೈಡೆನ್ ಡ್ರಗ್ಸ್​ ತೆಗೆದುಕೊಳ್ತಾರೆ: ಡೊನಾಲ್ಡ್ ಟ್ರಂಪ್

masthmagaa.com:

ಅಮೆರಿಕ ಅಧ್ಯಕ್ಷೀಯ ಚುನಾವಣೆ ಹತ್ತಿರವಾಗ್ತಿದ್ದಂತೆ ನಾಯಕರ ನಡುವಿನ ಆರೋಪ ಪ್ರತ್ಯಾರೋಪಗಳು ಕೂಡ ಜೋರಾಗಿದೆ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡೆನ್ ವಿರುದ್ಧ ವಾಗ್ದಾಳಿ ನಡೆಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್, ‘ಚರ್ಚೆಗಳಲ್ಲಿ ತಮ್ಮ ಪರ್ಫಾಮೆನ್ಸ್ ಹೆಚ್ಚಿಸಿಕೊಳ್ಳಲು ಜೋ ಬೈಡೆನ್ ಡ್ರಗ್ಸ್ ತೆಗೆದುಕೊಳ್ಳುತ್ತಾರೆ’ ಅಂತ ಗಂಭೀರ ಆರೋಪ ಮಾಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಟ್ರಂಪ್, ‘ಇತ್ತೀಚೆಗೆ ಬೈಡೆನ್ ಅವರ ಚರ್ಚೆಗಳಲ್ಲಿ ಸಾಕಷ್ಟು ಸುಧಾರಣೆ ಕಂಡುಬಂದಿದೆ. ಇದು ವಿಚಿತ್ರವಾಗಿದೆ. ಅವರು ಏನನ್ನೋ ತಿನ್ನುತ್ತಿದ್ದಾರೆ. ಅದು ಏನು ಅನ್ನೋದು ನಿಮಗೂ ತಿಳಿದಿದೆ. ಅದರ ಸೇವನೆಯಿಂದ ಚರ್ಚೆಗಳಲ್ಲಿ ಅವರಿಗೆ ಸ್ವಲ್ಪ ಸ್ಪಷ್ಟತೆ ಸಿಗುತ್ತಿದೆ’ ಎಂದಿದ್ದಾರೆ.

ಹೀಗಾಗಿ ಜೋ ಬೈಡನ್ ಡ್ರಗ್ ಪರೀಕ್ಷೆ ಮಾಡಿಸಿಕೊಳ್ಳಬೇಕು ಅಂತ ಟ್ರಂಪ್ ಆಗ್ರಹಿಸಿದ್ದಾರೆ. ಇದಕ್ಕೆ ತಿರುಗೇಟು ಕೊಟ್ಟಿರುವ ಬೈಡೆನ್, ‘ಟ್ರಂಪ್ ಒಬ್ಬ ಮೂರ್ಖ. ಅವರ ಹೇಳಿಕೆ ಮೂರ್ಖತನದಿಂದ ಕೂಡಿದೆ’ ಅಂತ ತಮ್ಮ ಮೇಲಿನ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.

-masthmagaa.com

Contact Us for Advertisement

Leave a Reply