ಮುಂಬೈ ಪೊಲೀಸ್ ಟರ್ಮಿನಲ್​​ ಖಾಲಿ ಮಾಡಿ, ಮಾಕ್​ ಡ್ರಿಲ್! ಆತಂಕ.. ಸ್ಪಷ್ಟನೆ

masthmagaa.com:

ಮುಂಬೈ ಏರ್​ಪೋರ್ಟ್​​​ನ ಟರ್ಮಿನಲ್​​ 2ನಲ್ಲಿ ಇವತ್ತು ಪೊಲೀಸರು ಎಲ್ಲರನ್ನೂ ಇದ್ದಕ್ಕಿದ್ದಂತೆ ಸ್ಥಳಾಂತರ ಮಾಡಿದ್ದಾರೆ. ಇದ್ರ ಒಂದಷ್ಟು ಫೊಟೋಗಳು, ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ್ವು. ಏರ್​ಪೋರ್ಟ್​​ನಲ್ಲಿ ಪೊಲೀಸರು ಸ್ಥಳಾಂತರ ಮಾಡ್ತಿದ್ದಾರೆ ಅಂತ ಸುದ್ದಿಯಾಯ್ತು. ಈ ಬಗ್ಗೆ ಪ್ರತಿಕ್ರಿಯಿಸಿರೋ ಪೊಲೀಸರು, ಏರ್​​ಪೋರ್ಟ್​​ನಲ್ಲಿ ಮಾಕ್​ಡ್ರಿಲ್ ಅಂದ್ರೆ ಅಣಕು ಕಾರ್ಯಾಚರಣೆ ನಡೆಸಲಾಗಿದೆ ಅಷ್ಟೆ. ಯಾರೂ ಹೆದರಿಕೊಳ್ಳುವ ಅಗತ್ಯತೆ ಇಲ್ಲ ಅಂತ ಹೇಳಿದ್ದಾರೆ. ಇನ್ನು ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಪ್ರೊಟೊಕಾಲ್ ಪ್ರಕಾರ ಮಾಕ್​ಡ್ರಿಲ್ ಮಾಡಿದ್ದೀವಿ. ಎಲ್ಲಾ ರೀತಿಯ ಪರಿಶೀಲನೆ ಬಳಿಕ ಟರ್ಮಿನಲ್ ಸುರಕ್ಷಿತವಾಗಿದೆ ಅಂತ ಘೋಷಿಸಲಾಗಿದೆ. ಇದ್ರಿಂದ ವಿಮಾನಗಳ ಹಾರಾಟದಲ್ಲಿ ಯಾವುದೇ ರೀತಿಯ ವ್ಯತ್ಯಯವಾಗಿಲ್ಲ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply