ಪೆಗಾಸಸ್ ಕಳ್ಳಗಣ್ಣು ಕೇಸ್: ಸುಪ್ರೀಂಕೋರ್ಟ್​​ಗೆ ಪ್ರಶ್ನೆ ಇಟ್ಟ ಕೇಂದ್ರ ಸರ್ಕಾರ!

masthmagaa.com:

ಪೆಗಾಸಸ್ ಕಳ್ಳಗಣ್ಣು ಸಂಬಂಧ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ತನಿಖೆ ನಡೆಸೋ ವಿಚಾರ ಸಂಬಂಧ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್​​​​ಗೆ ರಿಪ್ಲೈ ಮಾಡಿರೋ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ರಾಷ್ಟ್ರೀಯ ಭದ್ರತೆ ವಿಚಾರಗಳನ್ನ ಪಬ್ಲಿಕ್ ಮಾಡೋಕಾಗಲ್ಲ. ಇದರಿಂದ ಉಗ್ರರಿಗೆ ಅನುಕೂಲ ಆಗುತ್ತೆ. ನೀವು ಒಂದು ಸಂವಿಧಾನಾತ್ಮಕ ಕೋರ್ಟ್ ಆಗಿ ಇದನ್ನೆಲ್ಲ ಪಬ್ಲಿಕ್ ಮಾಡಬೇಕು ಅಂತ ಹೇಳ್ತೀರಾ.?’ ಅಂತ ಕೋರ್ಟ್ ಗೇ ಪ್ರಶ್ನೆ ಕೇಳಿದ್ದಾರೆ. ಆಗ ಮಾನ್ಯ ನ್ಯಾಯಾಲಯ ಉತ್ತರಿಸಿ, ದೇಶದ ಭದ್ರತೆಯೊಂದಿಗೆ ಕೋರ್ಟೂ ರಾಜಿ ಆಗಕಾಗಲ್ಲ, ಸರ್ಕಾರನೂ ಆಗಕಾಗಲ್ಲ, ವಕೀಲರೂ ಆಗಕಾಗಲ್ಲ. ಆದ್ರೆ ಕೆಲವರು ಕಳ್ಳಗಣ್ಣು ಆರೋಪ ಮಾಡ್ತಿದಾರೆ. ಈ ರೀತಿ ಕಳ್ಳಗಣ್ಣು ಇಡೋಕೆ ನಿರ್ದಿಷ್ಟ ಅನುಮತಿ ಪಡೆಯಬೇಕು. ಈ ಸಂಬಂಧ ಒಂದು ಅಫಿಡವಿಟ್ ಸಲ್ಲಿಸಲು ಏನ್ ಸಮಸ್ಯೆ’ ಅಂತ ಕೇಳಿದೆ.

ಇದಕ್ಕೆ ಸರ್ಕಾರದ ಪರ ಸಾಲಿಸಿಟರ್ ಜೆನರಲ್ ತುಷಾರ್ ಮೆಹ್ತಾ, ‘ನಾವು ಇದನ್ನ ಸಾರ್ವಜನಿಕವಾಗಿ ಈ ಥರ ಕೋರ್ಟ್ ನಲ್ಲಿ ಇದನ್ನೆಲ್ಲ ಇಟ್ಟು ಚರ್ಚೆ ಮಾಡಲ್ಲ. ಬೇಕಾದ್ರೆ ಒಂದು ನ್ಯೂಟ್ರಲ್ ಕಮಿಟಿ ರಚನೆ ಮಾಡಿ ಅದರ ಮುಂದೆ ವಿವರಿಸುತ್ತೇವೆ. ಆ ಸಮಿತಿ ಬೇಕಾದ್ರೆ ಕೋರ್ಟ್ ಗೆ ನಾವು ಸರಿಯೋ ತಪ್ಪೋ ಅಂತ ರಿಪೋರ್ಟ್ ಕೊಡಲಿ’ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply