‘ಕೊರೋನದ 3ನೇ ಅಲೆಗೆ ಒಮೈಕ್ರಾನ್​​ ಕಾರಣ ಆಗಬಹುದು’: ಟಾಪ್ ಡಾಕ್ಟರ್ ದೇವಿ ಶೆಟ್ಟಿ

masthmagaa.com:

ಒಮೈಕ್ರಾನ್​ ರೂಪಾಂತರಿ ವೈರಸ್​ ಬಗ್ಗೆ ಡಾಕ್ಟರ್ಸ್​ ಟಾಕ್​ನಲ್ಲಿ ಇವತ್ತು ಯಾರು ಏನ್​ ಹೇಳಿದ್ದಾರೆ ಅಂತ ನೋಡಣ..
(‘ವೈರಾಣು ರೂಪ ಬದಲಿಸೋದು ಸಾಮಾನ್ಯ. ಅದನ್ನ ತಡೆಯೋಕೆ ಆಗಲ್ಲ. ರೂಪಾಂತರಿ ವೈರಾಣು ಹರಡುವ ವೇಗ ಹೆಚ್ಚಿರಬಹುದು. ಹೀಗಾಗಿ ಕೊರೋನಾ ಲಸಿಕೆಯ ಎರಡನೇ ಡೋಸ್​ ಬಾಕಿ ಇರೋರು, ಮೊದಲು ಲಸಿಕೆ ಹಾಕ್ಕೊಳ್ಳಿ. ಒಂದು ಡೋಸ್ ಲಸಿಕೆ ರಕ್ಷಣೆ ಕೊಡುತ್ತೆ. ಆದ್ರೆ ಎರಡೂ ಡೋಸ್ ಹಾಕ್ಕೊಂಡ್ರೆ ಹೆಚ್ಚಿನ ಪ್ರಮಾಣದಲ್ಲಿ ರಕ್ಷಣೆ ಕೊಡುತ್ತೆ. ಸರ್ಕಾರದವರು ಬೂಸ್ಟರ್​ ಡೋಸ್​ ಜಾರಿಗೆ ತಂದ್ರೆ ಕೂಡಲೇ ತಗೊಳ್ಳಿ. ಅಮೆರಿಕ, ಯುರೋಪ್​​ನಲ್ಲಿ ಐಸಿಯುನಲ್ಲಿದ್ದ ಹೆಚ್ಚಿನ ರೋಗಿಗಳು ಲಸಿಕೆನೇ ಹಾಕ್ಕೊಂಡಿರಲಿಲ್ಲ. ಲಸಿಕೆ ಹಾಕ್ಕೊಂಡೋರು ಐಸಿಯುನಲ್ಲಿ ಇದ್ದಿದ್ದು ಕೆಲವೇ ಕೆಲವು. ಹೀಗಾಗಿ ಕೊರೋನಾ ಲಸಿಕೆ ಅನ್ನೋದು ಒಂದು ಮೆಡಿಕಲ್ ಮಿರಾಕಲ್​. ಅದು ಕೊರೋನಾದಿಂದ ರಕ್ಷಣೆ ನೀಡುತ್ತೆ ಅಂದ್ರೆ ಸಾವಿನಿಂದ ರಕ್ಷಣೆ ನೀಡುತ್ತೆ ಅಂತರ್ಥ. ಕೊರೋನಾದ ಮೂರನೇ ಅಲೆಗೆ ಒಮೈಕ್ರಾನ್​​ ರೂಪಾಂತರಿಯೇ ಕಾರಣವಾಗಬಹುದು. 15ಕ್ಕೂ ಹೆಚ್ಚು ದೇಶಗಳಿಗೆ ಬಂದಿದೆ ಅಂದ್ರೆ ಅದು ಭಾರತಕ್ಕೂ ಬರುತ್ತೆ, ನಮ್ಗೂ ಬರುತ್ತೆ. ಆದ್ರೆ ನನ್ನ ಪ್ರಕಾರ ಜನ ಯೋಚ್ನೆ ಮಾಡುವಷ್ಟು ಒಮೈಕ್ರಾನ್​ ಅಪಾಯಕಾರಿ ಅಲ್ಲ. ಹಾಗಂತ ನಿರ್ಲಕ್ಷ್ಯ ತೋರಬಾರ್ದು, ಮುಂಜಾಗ್ರತೆ ವಹಿಸಬೇಕು. ಒಮೈಕ್ರಾನ್​ ಬಗ್ಗೆ ಹೆದರುವ ಅಗತ್ಯವಿಲ್ಲ.

– ಡಾ. ದೇವಿ ಶೆಟ್ಟಿ, ನಾರಾಯಣ ಹೆಲ್ತ್​ ಚೇರ್ಮನ್​

-masthmagaa.com

Contact Us for Advertisement

Leave a Reply