ಕನಸುಗಾರನಿಗೆ 62 ವರ್ಷ: ರವಿಚಂದ್ರನ್ ಹುಟ್ಟುಹಬ್ಬಕ್ಕೆ ಪೋಸ್ಟರ್ ರಿಲೀಸ್ ಮಾಡಿದ KD ಟೀಮ್!

masthmagaa.com:

ಇವತ್ತು ರವಿಚಂದ್ರನ್‌ ಅವರು ತಮ್ಮ 62ನೇ ವರ್ಷದ ಹುಟ್ಟುಹಬ್ಬವನ್ನ ಆಚರಿಸಿಕೊಳ್ತಾ ಇದಾರೆ. ಇದೇ ದಿನ ರವಿಚಂದ್ರನ್‌ ಅವರ ಬರ್ತ್‌ಡೇ ಸ್ಪೆಷಲ್‌ ಅಂತ ಹೊಸ ಸಿನಿಮಾದ ಲುಕ್‌ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡ್ತಾ ಇದೆ. ʼದಿ ಜಡ್ಜ್‌ಮೆಂಟ್‌” ಸಿನಿಮಾದಲ್ಲಿನ ರವಿಚಂದ್ರನ್‌ ಅವರ ಫೋಟೋ ಇರುವ ಪೋಸ್ಟರ್‌ ಅನ್ನು ಚಿತ್ರತಂಡ ರೀಲೀಸ್‌ ಮಾಡಿದೆ.

ಈ ಚಿತ್ರವನ್ನ ಗುರುರಾಜ ಕುಲಕರ್ಣಿ ಅವರು ನಿರ್ದೇಶನ ಮಾಡ್ತಾ ಇದಾರೆ. ರವಿಚಂದ್ರನ್‌ ಅವರು ಈ ಸಿನಿಮಾದಲ್ಲಿ ಲಾಯರ್‌ ಆಗಿ ಕಾಣಿಸಿಕೊಳ್ಳಲಿದ್ದಾರೆ. ರವಿಚಂದ್ರನ್‌ ಲುಕ್‌ ನೋಡಿ ಅಭಿಮಾನಿಗಳು ಫುಲ್‌ ಫಿದಾ ಆಗಿದ್ದಾರೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಜೊತೆ ದಿಗಂತ ಮಂಚಾಲೆ, ಮೇಘನಾ ಗಾಂವ್ಕರ್, ಧನ್ಯಾ ರಾಮ್​​ಕುಮಾರ್​, ಲಕ್ಷ್ಮೀ ಗೋಪಾಲಸ್ವಾಮಿ, ಪ್ರಕಾಶ್ ಬೆಳವಾಡಿ, ಕೃಷ್ಣಾ ಹೆಬ್ಬಾಳೆ, ರಂಗಾಯಣ ರಘು, ರಾಜೇಂದ್ರ ಕಾರಂತ, ಸುಜಯ್ ಶಾಸ್ತ್ರೀ, ರೂಪಾ ರಾಯಪ್ಪ, ರವಿಶಂಕರ ಗೌಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಹಾಗೇನೆ ಧೃವ ಸರ್ಜಾ ಹೀರೋ ಆಗಿ ಅಭಿನಯಿಸಲಿರುವ ಕೆಡಿ ಸಿನಿಮಾದಲ್ಲೂ ರವಿಚಂದ್ರನ್‌ ಅವರು ಅಭಿನಯಿಸಲಿದ್ದಾರೆ. ರವಿಚಂದ್ರನ್‌ ಅವರು ಇವರು ಹೊಸ ಪೋಸ್ಟರ್‌ ರಿಲೀಸ್‌ ಮಾಡೋ ಮೂಲಕ ಚಿತ್ರತಂಡ ರವಿಚಂದ್ರನ್‌ ಅವರಿಗೆ ಹುಟ್ಟುಹಬ್ಬದ ಶುಭಾಷಯವನ್ನ ತಿಳಿಸಿದೆ. ಇನ್ನೂ ರೆಟ್ರೋ ಕತೆಯನ್ನ ಆಧರಿಸಿ ರೆಡಿ ಆಗ್ತಾ ಇದೆ ಅಂತ ಹೇಳುವ ಕೆಡಿ ಚಿತ್ರದಲ್ಲಿ ರವಿಚಂದ್ರನ್‌ ಅವರ ಪಾತ್ರ ವಿಭಿನ್ನ ಇರಬಹುದು ಅಂತ ಅಭಿಮಾನಿಗಳು ಅಂದಾಜಿಸಿದ್ದಾರೆ.

-masthmagaa.com

Contact Us for Advertisement

Leave a Reply