ಪಾಕಿಸ್ತಾನದಲ್ಲಿ ಭೂಕಂಪ! ಒಂದೇ ದಿನ ಮೂರು ದೇಶಗಳಲ್ಲಿ ಕಂಪಿಸಿದ ಭೂಮಿ!

masthmagaa.com:

ಒಂದೇ ದಿನದಲ್ಲಿ ವಿಶ್ವದ ಹಲವಡೆ ಮೂರು ದೇಶಗಳಲ್ಲಿ ಭೂಕಂಪ ಸಂಭವಿಸಿದೆ. ಪಾಕಿಸ್ತಾನದಲ್ಲಿ ಲಘು ಭೂಕಂಪ ಆಗಿದೆ. ರಿಕ್ಟರ್‌ ಮಾಪಕದಲ್ಲಿ 4.2 ತೀವ್ರತೆ ದಾಖಲಾಗಿದೆ. ಈ ಕಡೆ ಟೆಬೆಟ್‌ನ ಶಿನ್‌ ಜಿಯಾಂಗ್‌ ಪ್ರಾಂತ್ಯದಲ್ಲೂ 5.0 ತೀವ್ರತೆಯಲ್ಲಿ ಭೂಕಂಪವಾಗಿದೆ. ಸದ್ಯಕ್ಕೆ ಸಾವು ನೋವಿನ ಕುರಿತು ಯಾವುದೇ ವರದಿಯಾಗಿಲ್ಲ. ಇನ್ನು ಆಸ್ಟ್ರೇಲಿಯಾ ಪಕ್ಕದ ಪಪುವಾ ನ್ಯೂಗಿನಿಯಾದಲ್ಲೂ ಭೂಕಂಪವಾಗಿದೆ. ರಿಕ್ಟರ್‌ ಮಾಪಕದಲ್ಲಿ 6.6 ತೀವ್ರತೆ ದಾಖಲಾಗಿದೆ. ಇಲ್ಲೂ ಹಾನಿಗೆ ಸಂಬಂಧಪಟ್ಟಂತೆ ಯಾವುದೇ ವರದಿಯಾಗಿಲ್ಲ.

-masthmagaa.com

Contact Us for Advertisement

Leave a Reply