ಬೈಜು ರವೀಂದ್ರನ್‌ಗೆ ಸಂಕಷ್ಷ: ದೇಶ ಬಿಡದಂತೆ ಕಟ್ಟಾಕಿದ ED

masthmagaa.com:

ಹಣಕಾಸಿನ ಬಿಕ್ಕಟ್ಟಿನಲ್ಲಿರೋ ಬೈಜೂಸ್‌ಗೆ ಈಗ ಮತ್ತೊಂದು ಸಂಕಷ್ಟು ಎದುರಾಗಿದೆ. ಕಂಪನಿ ಸಿಇಒ ಬೈಜು ರವೀಂದ್ರನ್‌ಗೆ ಲುಕ್‌ ಔಟ್‌ ನೋಟೀಸ್ ನೀಡುವಂತೆ ಬ್ಯೂರೋ ಆಫ್‌ ಇಮಿಗ್ರೇಶನ್‌ಗೆ, ED ಆದೇಶ ನೀಡಿದೆ. ಅಂದ್ರೆ ಬೈಜು ರವೀಂದ್ರನ್‌ ದೇಶ ಬಿಟ್ಟು ಹೋಗದಂತೆ ತಡೀಬೇಕು ಅಂತ ED ಹೇಳಿದೆ. ಶುಕ್ರವಾರ ಬೈಜುಸ್‌ನ ಜೆನರಲ್‌ ಮೀಟಿಂಗ್‌ ಇತ್ತು. ಇದ್ರಲ್ಲಿ ಭಾಗವಹಿಸೋ ಹೂಡಿಕೆದಾರರು ಬೈಜು ರವೀಂದ್ರನ್‌ ಅವ್ರನ್ನ ಸಿಇಒ ಹುದ್ದೆಯಿಂದ ಕೆಳಗಿಳಿಸೋ ಪ್ರಪೋಸಲ್‌ ಕೊಡ್ತಾರೆ ಅಂತ ಈ ಮೊದಲೇ ವರದಿಯಾಗಿತ್ತು. ಹಾಗಾಗಿ ED ಈ ಕ್ರಮ ತಗೊಂಡಿದೆ. ಇನ್ನು ಬುಧವಾರವಷ್ಟೇ ಕರ್ನಾಟಕ ಹೈ ಕೋರ್ಟ್‌, ಈ ಕೇಸಿನ ಅಂತಿಮ ವಿಚಾರಣೆ ಆಗೋವರೆಗೆ ಮೀಟಿಂಗ್‌ನಲ್ಲಿ ಯಾವುದೇ ತೀರ್ಮಾನ ತಗೊಬಾರ್ದು ಅಂತೇಳಿದೆ.

-masthmagaa.com

Contact Us for Advertisement

Leave a Reply