ಕೊನೆಗೂ ರಿಲೀಸ್‌ ಆಯ್ತು ಸುಯೇಜ್‌ ಕಾಲುವೆ ಬ್ಲಾಕ್‌ ಮಾಡಿದ್ದ ಹಡಗು

masthmagaa.com:

ಮಾರ್ಚ್​​ ತಿಂಗಳಲ್ಲಿ ಸುಯೇಜ್ ಕಾಲುವೆಯನ್ನು 6 ದಿನಗಳ ಕಾಲ ಬ್ಲಾಕ್ ಮಾಡಿದ್ದ ದೈತ್ಯ ಎವರ್​ ಗಿವನ್ ಹಡುಗನ್ನು ರಿಲೀಸ್ ಮಾಡಲಾಗಿದೆ. ಮತ್ತೆ ತನ್ನ ಪ್ರಯಾಣ ಮುಂದುವರಿಸಿದೆ. ಈ ಹಡಗು ಸುಯೇಜ್ ಕಾಲುವೆ ಬ್ಲಾಕ್ ಮಾಡಿದ್ದರಿಂದ ನಮಗೆ ನಷ್ಟವಾಗಿದೆ. ಅದನ್ನು ತುಂಬಿಕೊಡುವವರೆಗೆ ಹಡಗನ್ನು ಬಿಡೋದಿಲ್ಲ ಅಂತ ಸುಯೇಜ್ ಕಾಲುವೆ ಅಥಾರಿಟಿ ಹೇಳಿತ್ತು. ನಂತರ ಕೋರ್ಟ್​​ನಲ್ಲೂ ಈ ವಿಚಾರವಾಗಿ ವಿಚಾರಣೆ ನಡೆದಿತ್ತು. ಇದೀಗ ಸುಯೇಜ್ ಕಾಲುವೆ ಅಥಾರಿಟಿ ಮತ್ತು ಜಪಾನ್ ಮೂಲದ ಹಡಗಿನ ಮಾಲೀಕರ ನಡುವೆ ಪರಿಹಾರಕ್ಕೆ ಸಂಬಂಧಿಸಿದಂತೆ ಒಪ್ಪಂದವಾಗಿದ್ದು, ಹಡಗನ್ನು 100 ದಿನಗಳ ಬಳಿಕ ಬಿಡಲಾಗಿದೆ. ಸುಯೇಜ್ ಕಾಲುವೆಯ ಮಧ್ಯಭಾಗದಿಂದ ಉತ್ತರದ ಕಡೆಗೆ ಹಡಗು ಪ್ರಯಾಣ ಶುರು ಮಾಡಿದೆ. ಅಂದಹಾಗೆ ಮೊದಲಿಗೆ 91 ಕೋಟಿ ಡಾಲರ್ ಅಂದ್ರೆ 6734 ಕೋಟಿ ರೂಪಾಯಿ​ ಪರಿಹಾರ ನೀಡಬೇಕು ಎಂದಿದ್ದ ಸುಯೇಜ್ ಕಾಲುವೆ ಅಥಾರಿಟಿ, ನಂತರದಲ್ಲಿ 55 ಕೋಟಿ ಡಾಲರ್ ಅಂದ್ರೆ 4070 ಕೋಟಿ ರೂಪಾಯಿ​​ ಪರಿಹಾರಕ್ಕೆ ಸಮ್ಮತಿ ನೀಡಿತ್ತು. ಆದ್ರೆ ಭಾನುವಾರ ಪರಿಹಾರ ಸಂಬಂಧ ಫೈನಲ್ ಡೀಲ್ ಆಗಿದೆ ಅಂತ ಘೋಷಿಸಿರೋ ಸುಯೇಜ್ ಕಾಲುವೆ ಅಥಾರಿಟಿ, ಆ ಅಮೌಂಟ್ ಎಷ್ಟು ಅಂತ ಬಹಿರಂಗಪಡಿಸಿಲ್ಲ.
ಕೊನೆಗೂ ರಿಲೀಸ್‌ ಆಯ್ತು.

-masthmagaa.com

Contact Us for Advertisement

Leave a Reply