ಸುಳ್ಳು ಸುದ್ದಿ ಹರಡಿದ ಆರೋಪ: ವಿದ್ಯಾರ್ಥಿಗೆ 4 ವರ್ಷ ಜೈಲು!

masthmagaa.com:

ಸುಳ್ಳು ಸುದ್ದಿ ಹರಡಿದ ಆರೊಪದ ಮೇಲೆ ಯೂನಿವರ್ಸಿಟಿಯ ವಿದ್ಯಾರ್ಥಿಯನ್ನು 4 ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಪಡಿಸಲಾಗಿದೆ. ಈಜಿಪ್ಟ್​​ನ ಅಹ್ಮದ್ ಸಮಿರ್ ಆಸ್ಟ್ರಿಯಾದ ವಿಯೆನ್ನಾದಲ್ಲಿರೋ ಸೆಂಟ್ರಲ್ ಯೂರೋಪಿಯನ್ ಯೂನಿವರ್ಸಿಟಿಯಲ್ಲಿ ಮಕ್ಕಳ ಸಂತಾನೋತ್ಪತ್ತಿಯ ಹಕ್ಕುಗಳ ಕುರಿತು ಅಧ್ಯಯನ ನಡೆಸ್ತಿದ್ರು. ಕಳೆದ ಫೆಬ್ರವರಿಯಲ್ಲಿ ತಮ್ಮ ಕುಟುಂಬದವನ್ನು ಭೇಟಿಯಾಗಲು ಈಜಿಪ್ಟ್​ಗೆ ಬಂದಿದ್ದಾಗ ಸಮಿರ್​​ನನ್ನು ಅರೆಸ್ಟ್ ಮಾಡಲಾಗಿತ್ತು. ಅರೆಸ್ಟ್ ಯಾಕೆ ಮಾಡಿದ್ದು ಆಗ ಅಧಿಕಾರಿಗಳು ಹೇಳೇ ಇರಲಿಲ್ಲ. ನಂತರದಲ್ಲಿ ಸಮೀರ್ ಸುಳ್ಳು ಸುದ್ದಿ ಹರಡೋದ್ರ ಜೊತೆಗೆ ಉಗ್ರ ಸಂಘಟನೆಗೆ ಸೇರಿದವನಾಗಿದ್ದಾನೆ ಅನ್ನೋ ಆರೋಪ ಮಾಡಿ ಕೇಸ್ ಹಾಕಲಾಗಿತ್ತು. ಅದರಂತೆ ಈಗ ಈಜಿಪ್ಟ್​ನ ನ್ಯೂ ಕೈರೋ ಕೋರ್ಟ್​​ 4 ವರ್ಷ ಜೈಲು ಶಿಕ್ಷೆ ವಿಧಿಸಿ, 30 ಡಾಲರ್ ದಂಡ ವಿಧಿಸಿದೆ. ಈ ಬಗ್ಗೆ ಫೇಸ್​ಬುಕ್​ನಲ್ಲಿ ಮಾಹಿತಿ ನೀಡಿರೋ ಈಜಿಪ್ಟ್ ಮಾನವ ಹಕ್ಕು ಆಯೋಗ ಫೇಸ್​ಬುಕ್​ ಪೇಜ್​​ನಲ್ಲಿ ಮಾಹಿತಿ ನೀಡಿ, ಇದೊಂದು ಅತಿರೇಖದ ವರ್ತನೆ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply