ನಾನು ಸರ್ವಾಧಿಕಾರಿ ಎಂದು ಪ್ರೊಫೈಲ್ ಬದಲಿಸಿದ ಎಲ್ ಸಾಲ್ವಡಾರ್ ಅಧ್ಯಕ್ಷ!

masthmagaa.com:

ಮಧ್ಯ ಅಮೆರಿಕದ ದೇಶವಾದ ಎಲ್ ಸಾಲ್ವಡಾರ್​​ ಅಧ್ಯಕ್ಷ ನಯಿಬ್ ಬುಕೇಲೆ ತನ್ನ ಟ್ವಿಟ್ಟರ್ ಪ್ರೊಫೈಲ್ ಬದಲಿಸಿದ್ಧಾರೆ. ಅದ್ರಲ್ಲಿ ತನ್ನನ್ನು ತಾನು ಡಿಕ್ಟೇಟರ್ ಅಂದ್ರೆ ಸರ್ವಾಧಿಕಾರಿ ಅಂತ ಘೋಷಿಸಿಕೊಂಡಿದ್ದಾರೆ. ಕಳೆದ ವಾರ ಇವರ ವಿರುದ್ಧ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆದಿತ್ತು. ಈ ವೇಳೆ ಪ್ರತಿಭಟನಾಕಾರರು ಇವರನ್ನು ಸರ್ವಾಧಿಕಾರಿ ಅಂತೆಲ್ಲಾ ಟೀಕಿಸಿದ್ರು. ಅದ್ರ ಬೆನ್ನಲ್ಲೇ ಈಗ ಟ್ವಿಟ್ಟರ್ ಫ್ರೊಫೈಲ್​ ಬದಲಾಗಿದೆ. ಈ ಬಗ್ಗೆ ಅಧ್ಯಕ್ಷರ ಕಚೇರಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನಯಿಬ್ ಬುಕೇಲೆ ಕೂಡ ತನ್ನ ಅಕೌಂಟ್ ಹ್ಯಾಕ್ ಆಗಿದೆ ಅಂತೇನೂ ಹೇಳಿಕೊಂಡಿಲ್ಲ. ಅಂದಹಾಗೆ ಎಲ್ ಸಾಲ್ವಡಾರ್ ಬಿಟ್​​ಕಾಯಿನ್​ಗೆ ಕಾನೂನಿನ ಮಾನ್ಯತೆ ನೀಡಿತ್ತು. ಈ ಮೂಲಕ ಕ್ರಿಪ್ಟೋಕರೆನ್ಸಿಗೆ ಕಾನೂನು ಮಾನ್ಯತೆ ನೀಡಿದ ಮೊದಲ ದೇಶ ಇದಾಗಿತ್ತು. ಇತ್ತೀಚೆಗಷ್ಟೇ 150 ಬಿಟ್​ಕಾಯಿನ್ ಖರೀದಿಸಿದ್ದು, ಈ ದೇಶದ ಬಳಿ ಇರೋ ಒಟ್ಟು ಬಿಟ್​​ಕಾಯಿನ್ ಮೊತ್ತ 700ಕ್ಕೆ ಏರಿಕೆಯಾಗಿದೆ.

-masthmagaa.com

Contact Us for Advertisement

Leave a Reply