ಪಾಕಿಸ್ತಾನದಲ್ಲಿ ವಿದ್ಯುತ್‌ ಸಮಸ್ಯೆ..! ತುರ್ತುಯೋಜನೆಗಳಿಗೆ ಪ್ರಧಾನಿ ಆದೇಶ!

masthmagaa.com:

ಪಾಕಿಸ್ತಾನದಲ್ಲಿ ವಿದ್ಯುತ್‌ ಸಮಸ್ಯೆ ತೀವ್ರವಾಗ್ತಿದ್ದಂತೆ ತುರ್ತುಯೋಜನೆಗಳನ್ನ ಜಾರಿಗೆ ತರೋಕೆ ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 24 ಗಂಟೆಯ ಒಳಗಾಗಿ ಈ ಯೋಜನೆಗಳನ್ನ ರೂಪಿಸ್ಬೇಕು ಅಂತ ಡೆಡ್‌ ಲೈನ್‌ ಕೂಡ ನೀಡಿದ್ದಾರೆ ಅಂತ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಇದಕ್ಕೆ ಸಂಬಂಧಪಟ್ಟಂತೆ ಸುಧೀರ್ಘ ಸಭೆ ನಡೆಸಿದ್ದು ತಕ್ಷಣವೇ ಕಾರ್ಯೋನ್ಮುಖರಾಗುವುಂತೆ ಆದೇಶ ನೀಡಲಾಗಿದೆ. ಇದರಲ್ಲಿ ಕರೆಂಟ್‌ ಬಳಕೆಯ ಸೀಮಿತತೆ ಮತ್ತು ಇದಕ್ಕೆ ಸಂಬಂಧಿಸಿದಂತ ಕೆಲ ಕ್ರಮಗಳನ್ನ ತೆಗೆದುಕೊಳ್ಳಬಹುದು ಅಂತ ಹೇಳಲಾಗ್ತಿದೆ. ಅಂದ್ಹಾಗೆ ಇತ್ತೀಚೆಗೆ ಪಾಕಿಸ್ತಾನದಲ್ಲಿ ವಿದ್ಯುತ್‌ ಸಮಸ್ಯೆ ತುಂಬಾ ಉಂಟಾಗ್ತಿದ್ದು ಈಗಾಗಲೇ ದೇಶದ ಹಲವು ಭಾಗಗಳಲ್ಲಿ ಪವರ್ ಕಟ್‌ ವಿಪರೀತ ಪ್ರಮಾಣದಲ್ಲಿ ಆಗ್ತಿದೆ. ಅದರಲ್ಲೂ ಈಗ ಪಾಕಿಗಳು ಸರಿಯಾಗಿ ಕರೆಂಟ್‌ ಬಿಲ್‌ ಕಟ್ತಿಲ್ಲ ಅಂತ ಚೀನಾ ಕಂಪನಿಗಳು ಕೂಡ ಕರೆಂಟ್‌ ಕೊಡೋದನ್ನ ನಿಲ್ಲಿಸಿದೆ. ಹೀಗಾಗಿ ಅಲ್ಲಿ ವಿದ್ಯುತ್‌ ಅಭಾವ ಜಾಸ್ತಿಯಾಗ್ತಿದೆ. ಇನ್ನು ಬೇರೆಯವರಿಂದ ಖರೀದಿ ಮಾಡೋಕೆ ಹೋದ್ರೆ ಅದಕ್ಕೆ ವಿದೇಶಿ ವಿನಿಮಯ ಹಣ ಬೇಕು. ನೋಡಿದ್ರೆ ಖಜಾನೆ ಖಾಲಿ. ಸೋ ಪಾಕ್‌ ಸರ್ಕಾರ ತುರ್ತುಯೋಜನೆಗಳನ್ನ ರೂಪಿಸಲೇಬೇಕಾದ ಅನಿವಾರ್ಯ ಇದೆ ಅಂತ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply