ಬ್ಯಾನ್‌ ಮಾಡಲಾದ ಟ್ವಿಟರ್‌ ಅಕೌಂಟ್‌ಗಳಿಗೆ ಮತ್ತೆ ಜೀವದಾನ ಮಾಡೋಕೆ ಮುಂದಾದ ಮಸ್ಕ್‌!

masthmagaa.com:

ಜಗತ್ತಿನ ನಂಬರ್‌ ಒನ್‌ ಶ್ರೀಮಂತ ಎಲಾನ್‌ ಮಸ್ಕ್‌ ಟ್ವಿಟರ್‌ನ್ನ ಖರೀದಿ ಮಾಡಿದ್ಮೇಲೆ ದಿನಕ್ಕೊಂದು ಸುದ್ದಿ ಮಾಡ್ತಾನೆ ಇದೆ. ಈ ಹಿಂದೆ ಬ್ಯಾನ್‌ ಮಾಡಲಾಗಿದ್ದ ಕೆಲವು ಪ್ರಮುಖ ವ್ಯಕ್ತಿಗಳ ಟ್ವಿಟರ್‌ ಅಕೌಂಟ್‌ಗಳನ್ನ ಮತ್ತೆ ಆಕ್ಟಿವೇಟ್‌ ಮಾಡೋಕೆ ಮುಂದಾಗಿದ್ದಾರೆ. ಈ ಬಗ್ಗೆ ಪೋಲ್‌ ಒಂದನ್ನ ಮಸ್ಕ್‌ ಪೋಸ್ಟ್‌ ಮಾಡಿದ್ದು, 72% ಜನ ಬ್ಯಾನ್‌ ತೆಗೆದು ಹಾಕಿ ಅಂತ ವೋಟ್‌ ಮಾಡಿದ್ದಾರೆ. ಹಾಗಾಗಿ ಬ್ಯಾನ್‌ ಮಾಡಲಾಗಿದ್ದ ಅಕೌಂಟ್‌ಗಳಿಗೆ ಪುನಃ ಟ್ವಿಟರ್‌ಗೆ ಬರೋಕೆ ಅವಕಾಶ ನೀಡಲಾಗುತ್ತೆ ಅಂತ ಮಸ್ಕ್‌ ಹೇಳಿದ್ದಾರೆ. ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ರ ಅಕೌಂಟ್‌ ಮರಳಿಸೋಕು ಮಸ್ಕ್‌ ಪೋಲ್‌ ನೀಡಿದ್ರು. ಆದ್ರೆ ತಾನು ಮತ್ತೆ ಟ್ವಿಟರ್‌ಗೆ ಬರೋದಿಲ್ಲ ಅಂತ ಟ್ರಂಪ್‌ ಹೇಳಿದ್ರು.

-masthmagaa.com

Contact Us for Advertisement

Leave a Reply