ಭಾರತದಲ್ಲಿ 16.6-24.9 ಸಾವಿರ ಕೋಟಿ ರೂ. ಹೂಡಿಕೆ ಮಾಡಲಿದ್ದಾರೆ ಮಸ್ಕ್‌!

masthmagaa.com:

ಎಲೆಕ್ಟ್ರಿಕ್‌ ವೆಹಿಕಲ್‌ ಕ್ಷೇತ್ರದಲ್ಲಿ ಕ್ರಾಂತಿ ಸೃಷ್ಟಿಸಿರೋ ಟೆಸ್ಲಾ CEO, ಟೆಕ್‌ ದಿಗ್ಗಜ ಎಲಾನ್‌ ಮಸ್ಕ್‌ ಸೋಮವಾರ ಭಾರತಕ್ಕೆ ಬರಲಿದ್ದು ಪ್ರಧಾನಿ ಮೋದಿಯವ್ರನ್ನ ಮೀಟ್‌ ಮಾಡಲಿದ್ದಾರೆ. ಈ ವೇಳೆ ಭಾರತದಲ್ಲಿ ಭಾರೀ ಪ್ರಮಾಣದ ಹೂಡಿಕೆ ಮಾಡಲಿದ್ದಾರೆ ಅಂತ ವರದಿಯಾಗಿದೆ. ಟೆಸ್ಲಾ ಭಾರತದಲ್ಲಿ 2ರಿಂದ ಮೂರು ಬಿಲಿಯನ್‌ ಡಾಲರ್‌ ಸುರೀಬಹುದು ಅನ್ನೋ ಮಾಹಿತಿಗಳು ಲಭ್ಯವಾಗಿದೆ. ಅಂದ್ರೆ
16.6 ಸಾವಿರ ಕೋಟಿಯಿಂದ ಹಿಡಿದು 24.9 ಸಾವಿರ ಕೋಟಿ ರೂಪಾಯಿ ಭಾರತದ EV ಮಾರ್ಕೆಟ್‌ನಲ್ಲಿ ಹೂಡಿಕೆಯಾಗಲಿದೆ. ಈಗಾಗಲೇ EV ಉತ್ಪಾದನ ಘಟಕ ನಿರ್ಮಾಣಕ್ಕೆ ಟಾಟಾದೊಂದಿಗೆ ಕೈಜೋಡಿಸಬಹುದು, ಟಾಟಾ ಟೆಸ್ಲಾ ಇಬ್ರೂ ಜಾಯಿಂಟ್‌ ವೆಂಚರ್‌ನ್ನ ಆರಂಭ ಮಾಡ್ಬಹುದು ಅಂತ ಹೇಳಲಾಗಿತ್ತು. ಮಸ್ಕ್‌ 2 ಬಿಲಿಯನ್‌ ಡಾಲರ್‌ ಹೂಡಿಕೆ ಮಾಡ್ಬಹುದು ಅಂತ ಭಾರತ ನಿರೀಕ್ಷಿಸಿತ್ತು. ಆದ್ರೀಗ ಭಾರತದ ನಿರೀಕ್ಷೆಗಿಂತ ಜಾಸ್ತಿನೇ ಟೆಸ್ಲಾ ಇನ್ವೆಸ್ಟ್‌ ಮಾಡೋ ರೀತಿ ಕಾಣ್ತಿದೆ. ಆದ್ರೆ ಈ ವಿಚಾರಗಳನ್ನ ಟೆಸ್ಲಾ ತುಂಬಾ ಗೌಪ್ಯವಾಗಿ ಇಟ್ಕೊಳ್ತಾ ಇದೆ. ಯಾವ ರಾಜ್ಯದಲ್ಲಿ ಫ್ಯಾಕ್ಟರಿ ಬರ್ಬಹುದು, ಎಷ್ಟು ದೊಡ್ಡ ಜಾಗ ಬೇಕಾಗ್ಬಹುದು ಯಾವ ಮಾಹಿತಿಯನ್ನೂ ಬಿಟ್ಟುಕೊಡ್ತಿಲ್ಲ.. ಬಹುಶಃ ಸೋಮವಾರ ಪ್ರಧಾನಿಯವ್ರ ಜೊತೆಗಿನ ಸಭೆಯಲ್ಲೇ ಅಧಿಕೃತವಾಗಿ ಅನೌನ್ಸ್‌ ಮಾಡ್ಬೇಕು ಅನ್ನೋದು ಅವ್ರ ಉದ್ದೇಶ ಇರ್ಬಹುದು. ಆದ್ರೆ ಟೆಸ್ಲಾ ತನ್ನ ಇವಿ ಕಾರುಗಳ ಶೋರೂಮ್‌ ನಿರ್ಮಾಣಕ್ಕೆ ಮಾತ್ರ ದಿಲ್ಲಿ ಮತ್ತು ಮುಂಬೈಲ್ಲಿ ಜಾಗ ಹುಡುಕ್ತಿದೆ ಅನ್ನೋ ಮಾಹಿತಿ ಸಿಕ್ಕಿದೆ. ಅಲ್ಲದೇ ಸದ್ಯಕ್ಕೆ ಜರ್ಮನಿಯ ತನ್ನ ಫ್ಯಾಕ್ಟರಿಯಲ್ಲಿ ತಯಾರಾಗೋ ರೈಟ್‌ ಹ್ಯಾಂಡ್‌ ಡ್ರೈವಿಂಗ್‌ ಕಾರ್‌ಗಳನ್ನ ಈ ವರ್ಷದ ಕೊನೆಯಲ್ಲಿ ಭಾರತಕ್ಕೆ ಎಕ್ಸ್‌ಪೋರ್ಟ್‌ ಮಾಡೋ ಪ್ಲಾನ್‌ ಇದೆ ಅಂತಾನೂ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply