ʻಥ್ರೆಡ್ಸ್‌ʼ ಲಾಂಚ್‌ ಮಾಡಿದ ಮೆಟಾ! ಎಲಾನ್‌ ಮಸ್ಕ್‌ ಹೇಳಿದ್ದೇನು?

masthmagaa.com:

ವಿಶ್ವದ ನಂಬರ್‌ ಒನ್‌ ಶ್ರೀಮಂತ ಹಾಗೂ ಟ್ವಿಟರ್‌ ಬಾಸ್‌ ಎಲಾನ್‌ ಮಸ್ಕ್‌ಗೆ ಸ್ಪರ್ಧೆ ನೀಡೋಕೆ ಫೇಸ್‌ಬುಕ್‌ನ ಪೇರೆಂಟಲ್‌ ಕಂಪನಿ ಮೆಟಾ ತನ್ನ ನೂತನ ʻಥ್ರೆಡ್ಸ್‌ʼ ಅನ್ನೋ ಆ್ಯಪ್​ ಲಾಂಚ್‌ ಮಾಡಿದೆ. ಈ ಮೂಲಕ ಮಸ್ಕ್‌ರ ಟ್ವಿಟರ್‌ಗೆ ಮೆಟಾ ಮುಖ್ಯಸ್ಥ ಮಾರ್ಕ್‌ ಜುಕರ್‌ಬರ್ಗ್‌ ಡೈರಕ್ಟ್‌ ಸ್ಪರ್ಧೆ ಒಡ್ಡಿದ್ದಾರೆ. ಟ್ವಿಟರ್‌ ರೀತಿಯ ಟೆಕ್ಸ್ಟ್‌ ಬೇಸ್ಡ್‌ ಈ ಹೊಸ ಆ್ಯಪ್​ ಆ್ಯಪಲ್ ಮತ್ತು ಆಂಡ್ರಾಯ್ಡ್ ಆ್ಯಪ್ ಸ್ಟೋರ್‌ಗಳಲ್ಲಿ ಲಭ್ಯವಿದೆ. ಥ್ರೆಡ್‌ನಲ್ಲಿ ಮೊದಲ ಪೋಸ್ಟ್‌ ಹಾಕಿರೋ ಜುಕರ್‌ಬರ್ಗ್‌ ʻಲೆಟ್ಸ್‌ ಡೂ ದಿಸ್‌ʼ ಥ್ರೆಡ್ಸ್‌ಗೆ ಸ್ವಾಗತ ಅಂತ ಬರೆದುಕೊಂಡಿದ್ದಾರೆ. ನೂತನ ಥ್ರೆಡ್ಸ್‌ ಆ್ಯಪ್‌ನ್ನ ಭಾರತ, ಅಮೆರಿಕ, ಬ್ರಿಟನ್‌, ಆಸ್ಟ್ರೇಲಿಯಾ, ಕೆನಡಾ, ಜಪಾನ್‌ ಸೇರಿದಂತೆ 100ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಲಾಂಚ್‌ ಮಾಡಲಾಗಿದೆ. ಇನ್ನು ಇನ್‌ಸ್ಟಾಗ್ರಾಮ್‌ನಲ್ಲಿರೋ ಯೂಸರ್‌ನೇಮ್‌ ಹಾಗೂ ಪಾಸ್‌ವರ್ಡ್‌ಗಳನ್ನ ಬಳಸಿ ಈ ಹೊಸ ಆ್ಯಪ್‌ಗೆ ಲಾಗಿನ್‌ ಆಗ್ಬೋದು. ಜೊತೆಗೆ ಇನ್‌ಸ್ಟಾಗ್ರಾಮ್‌ನಲ್ಲಿನ ಫಾಲೋವರ್ಸ್‌ನ್ನ ಇದ್ರಲ್ಲೂ ಕಂಟಿನ್ಯೂ ಮಾಡಿಕೊಳ್ಳೋ ಆಪ್ಶನ್‌ ನೀಡಲಾಗಿದೆ. ಇನ್ನು ಮಸ್ಕ್‌ ಟ್ವಿಟರ್‌ ಖರೀದಿ ಮಾಡಿದ್ಮೇಲೆ ಸಾಕಷ್ಟು ಬದಲಾವಣೆ ಮಾಡಿರೋದನ್ನೇ ಜುಕರ್‌ಬರ್ಗ್‌ ಅಡ್ವಾಂಟೇಜ್‌ ಆಗಿ ತಗೊಂಡು ಈ ರೈವಲ್‌ ಆ್ಯಪ್ ಡೆವಲಪ್‌ ಮಾಡಿದಾರೆ ಅಂತ ವಿಶ್ಲೇಷಣೆ ಮಾಡಲಾಗ್ತಿದೆ. ಅಷ್ಟೆ ಅಲ್ದೆ ಸೆಲೆಬ್ರೆಟಿಗಳಾದ ಫುಟ್‌ಬಾಲ್‌ ಸ್ಟಾರ್‌ ಮೆಸ್ಸಿ, ಹಾಗೂ ಸಿಂಗರ್‌ ಜಸ್ಟಿನ್‌ ಬೈಬರ್‌ ಸೇರಿದಂತೆ ಇತರ ಸೆಲೆಬ್ರೆಟಿಗಳು ಇನ್‌ಸ್ಟಾದಲ್ಲಿ ಸಾಕಷ್ಟು ಫಾಲೋವರ್ಸ್‌ ಹೊಂದಿದ್ದು, ಇವ್ರೆಲ್ಲಾ ಥ್ರೆಡ್ಸ್‌ನಲ್ಲಿ ಪೋಸ್ಟ್‌ ಹಾಕಿದ್ರೆ ಬೇಗ ಕ್ಲಿಕ್‌ ಆಗುತ್ತೆ ಅನ್ನೋದು ಮಾರ್ಕ್‌ ಲೆಕ್ಕಾಚಾರ ಅಂತ ಹೇಳಲಾಗ್ತಿದೆ. ಇತ್ತ ಬಳಕೆದಾರರೊಬ್ರು ಕಾಪಿ ಪೇಸ್ಟ್‌ ಅಂತ ಹೇಳಿ ಥ್ರೆಡ್ಸ್‌ಗೆ ಸಂಬಂಧಿಸಿದಂತೆ ಪೋಸ್ಟ್‌ ಹಾಕಿದ್ದು, ಅದಕ್ಕೆ ಮಸ್ಕ್‌ ಜೋರಾಗಿ ನಗ್ತಿರೋ ಇಮೋಜಿಯಿಂದ ರಿಪ್ಲೈ ಮಾಡಿದಾರೆ. ಇನ್ನೊಂದ್‌ ಕಡೆ ಕಳೆದ 11 ವರ್ಷದಿಂದ ಟ್ವಿಟರ್‌ನಲ್ಲಿ ಆಕ್ಟಿವ್‌ ಇರದ ಜುಕರ್‌ ಬರ್ಗ್‌, ಥ್ರೆಡ್ಸ್‌ ಲಾಂಚ್‌ ಆದ್ಮೇಲೆ ಟ್ವೀಟ್‌ ಮಾಡಿದ್ದು, ಸೇಮ್‌ ಟು ಸೇಮ್‌ ಅನ್ನೋ ಅರ್ಥದಲ್ಲಿ ಸ್ಪೈಡರ್‌ ಮ್ಯಾನ್‌ ಫೋಟೋ ಒಂದನ್ನ ಪೋಸ್ಟ್‌ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply