ಪಟ್ಟಕ್ಕೆ ಬರೋ ಮುನ್ನವೇ ಚೀನಾ ವಿರುದ್ದ ಬೆಂಕಿಯುಗುಳಿದ ರಿಷಿ ಸುನಾಕ್‌! ಏನಂದ್ರು ಗೊತ್ತಾ?

masthmagaa.com:

ಬ್ರಿಟನ್‌ ಪ್ರಧಾನಿ ಗಾದಿಗಾಗಿ ಅಂತಿಮ ಕಸರತ್ತು ಮಾಡ್ತಿರೋ ರಿಷಿ ಸುನಾಕ್‌ ಪಟ್ಟಕ್ಕೆ ಬರೋ ಮುನ್ನವೇ ಚೀನಾ ವಿರುದ್ದ ಬೆಂಕಿ ಉಗುಳಿದ್ದಾರೆ. ಯುನೈಟೆಡ್‌ ಕಿಂಗ್ಡಮ್‌ ಹಾಗೂ ಇಡೀ ಜಗತ್ತಿಗೆ ಚೀನಾ ಅನ್ನೋದು ಒಂದು ದೊಡ್ಡ ಬೆದರಿಕೆ.. ತಾವೇನಾದ್ರೂ ಅಧಿಕಾರಕ್ಕೆ ಬಂದ್ರೆ ಚೀನಾ ವಿರುದ್ದ ಕಠಿಣ ಕೈಗೊಳ್ತೀವಿ ಅಂತ ಗುಡುಗಿದ್ದಾರೆ. ಬ್ರಿಟನ್‌ನ ಆಡಳಿತ ರೂಢ ಕನ್ಸರ್ವೇಟಿವ್‌ ಪಕ್ಷದ ಪ್ರಧಾನಿ ಹಾಗೂ ನಾಯಕತ್ವದ ಆಯ್ಕೆ ಇನ್ನೇನು ಅಂತಿಮ ಘಟ್ಟ ತಲುಪುತ್ತಿದೆ. ಇದರ ನಡುವೆಯೇ ರಿಷಿ ಸುನಾಕ್‌ಗೆ ಎದುರಾಳಿಯಾಗಿರೋ ಲಿಜ್‌ ಟ್ರಸ್‌ ರಿಷಿ ವಿರುದ್ದ ನಿರಂತರ ವಾಗ್ದಾಳಿ ಮಾಡ್ತಿದ್ದಾರೆ. ಸುನಾಕ್‌, ಚೀನಾ ಹಾಗೂ ರಷ್ಯಾ ವಿಚಾರದಲ್ಲಿ ಲಿಬರಲ್‌ ಆಗಿದ್ದಾರೆ. ಅವರ ವಿರುದ್ದ ಕ್ರಮ ತೆಗೆದುಕೊಳ್ಳುವುದರಲ್ಲಿ ರಿಷಿ ಫುಲ್ ವೀಕ್‌, ಹಾಗಾಗಿ ನನ್ನನ್ನ ಆಯ್ಕೆ ಮಾಡಿ ಅಂತ ಕೇಳಿಕೊಂಡಿದ್ರು. ಇತ್ತ ಚೀನಾದ ಮುಖವಾಣಿ ಗ್ಲೋಬಲ್‌ ಟೈಮ್ಸ್‌ ಕೂಡ ʻಚೀನಾ ಹಾಗೂ ಬ್ರಿಟನ್‌ ಸಂಬಂಧಗಳನ್ನ ಅಭಿವೃದ್ದಿ ಪಡಿಸುವಲ್ಲಿ ಸ್ಪಷ್ಟ, ಹಾಗೂ ಪ್ರಾಯೋಗಿಕ ದೃಷ್ಠಿಕೋನ ಇರುವ ಏಕೈಕ ಅಭ್ಯರ್ಥಿ ರಿಷಿ ಸುನಾಕ್‌ ಅಂತ ಕಡ್ಡಿ ಅಳ್ಳಾಡಿಸಿತ್ತು. ಇದೆಲ್ಲಾ ರಿಷಿ ಸುನಾಕ್‌ರ ವಿರೋಧಿ ಪಾಳಯಕ್ಕೆ ಒಂದು ರೀತಿ ಅಸ್ತ್ರದ ರೀತಿ ಆಗೋಗಿತ್ತು. ರಿಷಿ ಚೀನಾ ಪರ ಆಗ್ತಿದ್ದಾರೆ, ಇವರು ಚೀನಾ ವಿಚಾರದಲ್ಲಿ ಸ್ಟ್ರಾಂಗ್‌ ಡಿಸಿಷನ್‌ ತೆಗೆದುಕೊಳ್ಳೋಕೆ ಸಾಧ್ಯ ಇಲ್ಲ ಅಂತ ಹೇಳಿದ್ರು. ಇದರ ಬೆನ್ನಲ್ಲೇ ಅವರೆಲ್ಲರಿಗೂ ಕಡ್ಡಿ ತುಂಡು ಮಾಡಿದಂತೆ ಉತ್ತರ ಕೊಟ್ಟಿರೋ ರಿಷಿ ಸುನಾಕ್‌, ಚೀನಾವನ್ನ ನಂಬರ್‌ ಒನ್‌ ಥ್ರೆಟ್‌, ನಾನು ಖಂಡಿತ ಅವರ ವಿರುದ್ದ ಕ್ರಮ ತೆಗೆದುಕೊಳ್ತೀನಿ ಅಂತ ಹೇಳಿದ್ದಾರೆ. ಜೊತೆಗೆ ಚೀನಾದ ಸಂಸ್ಕೃತಿ ಹಾಗೂ ಭಾಷಾ ಕಾರ್ಯಕ್ರಮಗಳ ಮೂಲಕ ಚೀನಾ ತನ್ನ ಪ್ರಭಾವವನ್ನ ಬೆಳೆಸೋಕೆ ಮುಂದಾಗುತ್ತಿದೆ. ತಾನು ಪ್ರಧಾನಿಯಾದ್ರೆ ಬ್ರಿಟನ್‌ನಲ್ಲಿರೋ ಚೀನಾದ 30 ಕನ್ಫ್ಯೂಸಿಯಸ್‌ ಯೂನಿವರ್ಸಿಟಿಗಳನ್ನ ಮುಚ್ಚುತ್ತೇನೆ ಅಂತ ಶಪಥ ಮಾಡಿದ್ದಾರೆ. ಬ್ರಿಟನ್‌ನ ಯೂನಿವರ್ಸಿಟಿಗಳಲ್ಲಿ ಚೀನಾದ ಕಮ್ಯುನಿಸಂ ಪಕ್ಷವನ್ನ ಹೊರ ಹಾಕ್ತೇನೆ. ಬ್ರಿಟನ್‌ನ ಗುಪ್ತಚರ ಸಂಸ್ಥೆ MI5 ನ್ನ ಚೀನಾದ ಬೇಹುಗಾರಿಕಾ ಸಂಸ್ಥೆಯ ಎದುರು ನಿಲ್ಲಿಸೋಕೆ ಬಲ ತುಂಬುತ್ತೇನೆ. ಸೈಬರ್‌ ಸ್ಪೇಸ್‌ನಲ್ಲಿ ಚೀನಾದ ಬೆದರಿಕೆಗಳನ್ನ ಮೆಟ್ಟಿನಿಲ್ಲೋಕೆ ನ್ಯಾಟೋ ರೀತಿಯಲ್ಲಿ ಅಂತಾರಾಷ್ಟ್ರೀಯ ಸಹಕಾರವನ್ನ ಹೆಚ್ಚಿಸುತ್ತೇನೆ. ಚೀನಾ ನಮ್ಮ ವಿಶ್ವವಿದ್ಯಾಲಯಗಳಿಗೆ ಸೇರ್ಕೊಂಡು ನಮ್ಮ ತಂತ್ರಜ್ಞಾನವನ್ನ ಕದೀತಿದೆ. ರಷ್ಯಾದ ತೈಲವನ್ನ ಖರೀದಿಸೋ ಮೂಲಕ ಪುಟಿನ್‌ಗೆ ಬೆಂಬಲ ಕೊಡ್ತಿದೆ. ತೈವಾನ್‌ ಸೇರಿದಂತೆ ಇನ್ನಿತರ ಅಕ್ಕಪಕ್ಕ ರಾಷ್ಟ್ರಗಳನ್ನ ಚೀನಾ ಬೆದರಿಸುತ್ತಿದೆ ಅಂತ ಕಿಡಿಕಾರಿದ್ದಾರೆ. ಅಂದ್ಹಾಗೆ ಚೀನಾ ಹಾಗೂ ಯುನೈಟೆಡ್‌ ಕಿಂಗ್ಡಮ್‌ ನಡುವೆ ವ್ಯಾಪಾರ ವ್ಯವಹಾರ ದೊಡ್ಡ ಮಟ್ಟದಲ್ಲಿ ನಡೆದ್ರೂ ಇಬ್ಬರ ಮಧ್ಯೆ ಅಂತಹ ಹೇಳಿಕೊಳ್ಳುವ ಫ್ರೆಂಡ್ಶಿಫ್‌ ಇಲ್ಲ. ಶೀತಲ ಸಮರದ ಕಾಲದಿಂದಲೂ ಇಬ್ಬರು ಒಬ್ಬರಿಗೊಬ್ಬರು ವಿರೋಧಿ ಗುಂಪಿನಲ್ಲಿ ಗುರುತಿಸಿಕೊಂಡಿದ್ದವರು. ಬ್ರಿಟನ್‌ ಅಮೆರಿಕದ ಸಂಗಾತಿ ಅನ್ನೋದು ಕೂಡ ಈ ಇಬ್ಬರ ಜಗಳಕ್ಕೆ ದೊಡ್ಡ ಕಾರಣ. ಇನ್ನು ಬ್ರಿಟನ್‌ನಿಂದ ಚೀನಾ ಪಡೆದಿರೋ ಹಾಂಗ್‌ ಕಾಂಗ್‌ನಲ್ಲಿ ಇಲ್ಲ ಇಲ್ಲ ಅಂತಾನೇ ಅಲ್ಲಿದ್ದ ಪ್ರಜಾಪ್ರಭುತ್ವಕ್ಕೆ 2020ರಲ್ಲಿ ಸೆಕ್ಯೂರಿಟಿ ಲಾ ಅನ್ನೋ ಹೆಸರಲ್ಲಿ ಕೊನೇ ಮೊಳೆ ಹೊಡೀತು ಚೀನಾ. ಇದಾದ ಮೇಲಂತೂ ಬ್ರಿಟನ್‌ ಹಾಗೂ ಚೀನಾ ಬದ್ದ ವೈರಿಗಳಂತೆ ಮಾತನಾಡ್ತಿದ್ರು. ತಿಕ್ಕಾಟ ನಡೆದಿತ್ತು. ಅಂದಿನಿಂದ ಇಂದಿನವರೆಗೂ ಬ್ರಿಟನ್ನಲ್ಲಿ ಚೀನಾದ ವಿರೋಧಿ ನಿಲುವುಗಳು ದೊಡ್ಡ ಮಟ್ಟದಲ್ಲೇ ಇವೆ. ಪ್ರಧಾನಿಯ ಆಯ್ಕೆಯ ವಿಚಾರದಲ್ಲಿ ಚೀನಾ ವಿಚಾರ ಕೂಡ ಒಂದು ದೊಡ್ಡ ಅಂಶ ಆಗುತ್ತೆ ಅಂದ್ರೆ ಅದರ ತೀವ್ರತೆ ಎಷ್ಟಿದೆ ಅನ್ನೋದನ್ನ ತಿಳ್ಕೊಬೋದು.

-masthmagaa.com

 

 

Contact Us for Advertisement

Leave a Reply