ಅಧಿಕೃತವಾಗಿ ನೆಹರು ಗ್ರಂಥಾಲಯದ ಹೆಸರು ಬದಲಾವಣೆ! ಆಕ್ಷೇಪ ವ್ಯಕ್ತಪಡಿಸಿದ ವಿಪಕ್ಷಗಳು!

masthmagaa.com:

ನೆಹರು ಸ್ಮಾರಕ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯವನ್ನು ಅಧಿಕೃತವಾಗಿ ‘ಪ್ರಧಾನ ಮಂತ್ರಿಗಳ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ ಸೊಸೈಟಿ’ ಅಂತ ಮರುನಾಮಕರಣ ಮಾಡಲಾಗಿದೆ. 76ನೇ ಸ್ವಾತಂತ್ರ್ಯ ದಿನದಂದು ಅಂದ್ರೆ ನಿನ್ನೆ ಈ ಹೆಸರನ್ನು ಅಧಿಕೃತಗೊಳಿಸಲಾಗಿದೆ ಅಂತ ಗ್ರಂಥಾಲಯದ ಕಾರ್ಯಕಾರಿ ಮಂಡಳಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಹೇಳಿದ್ದಾರೆ. ಇತ್ತ ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಇಂದಿನಿಂದ ಐಕಾನಿಕ್ ಸಂಸ್ಥೆ ಹೊಸ ಹೆಸರನ್ನು ಪಡೆಯುತ್ತದೆ. ವಿಶ್ವಪ್ರಸಿದ್ಧ ನೆಹರು ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯ (NMML) ಇದೀಗ ಪ್ರಧಾನಿಗಳ ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯವಾಗಿದೆ (PMML) ಅಂತ ಹೇಳಿದ್ದಾರೆ. ಇದೇ ವೇಳೆ ಮೋದಿಯವರಿಗೆ ಭಯ ಆವರಿಸಿದ್ದು, ನೆಹರೂ ಪರಂಪರೆಯನ್ನು ವಿರೂಪಗೊಳಿಸುವ, ಮಾನಹಾನಿ ಮಾಡುವ ಮತ್ತು ನಾಶಮಾಡುವ ಏಕೈಕ ಅಜೆಂಡಾವನ್ನು ಹೊಂದಿದ್ದಾರೆ ಅಂತ ವಾಗ್ದಾಳಿ ನಡೆಸಿದ್ದಾರೆ. ಜೊತೆಗೆ ಮೋದಿಯವರು N ಅಳಿಸಿಹಾಕಿ ಅದರ ಬದಲಿಗೆ Pನ್ನು ಹಾಕಿದ್ದಾರೆ. ಆ P ನಿಜವಾಗಿಯೂ ಪೆಟ್ಟಿನೆಸ್‌ ಅಂದ್ರೆ ಸಣ್ಣತನ ಅಂತ ಜೈರಾಮ್‌ ಟೀಕೆ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply