ಸುಯೇಜ್‌ ಕಾಲುವೆಯಲ್ಲಿ ಸಿಲುಕಿದ 25 ಮಂದಿ ಭಾರತೀಯರು

masthmagaa.com:

ಇತ್ತೀಚೆಗೆ ಎವರ್​ ಗ್ರೀನ್ ಕಂಪನಿಯ ಎವರ್​ಗಿವನ್ ಹಡಗು ಅಡ್ಡಲಾಗಿ ನಿಂತು ಸುಯೇಜ್ ಕಾಲುವೆ ಬ್ಲಾಕ್ ಆಗಿದ್ದು ನಿಮಗೆಲ್ಲಾ ಗೊತ್ತೇ ಇದೆ. ಒಂದು ವಾರದ ನಿರಂತರ ಪರಿಶ್ರಮದ ಬಳಿಕ ಹಡಗನ್ನು ಪಕ್ಕಕ್ಕೆ ಸರಿಸಲು ಸಾಧ್ಯವಾಗಿತ್ತು. ಇದೀಗ ಎವರ್​ಗ್ರೀನ್ ಹಡಗು ಮುಂದಕ್ಕೆ ಹೋಗಲು ಈಜಿಪ್ಟ್ ತಡೆಯೊಡ್ಡಿದೆ. ಮೊದಲು ಹಡಗಿನ ಕಂಪನಿ ಈಜಿಪ್ಟ್​​ಗೆ ಆದ ನಷ್ಟವನ್ನು ತುಂಬಿಕೊಡಬೇಕು.. ಅಲ್ಲಿಯವರೆಗೆ ಹಡಗನ್ನು ಬಿಡುವುದಿಲ್ಲ ಅಂತ ಈಜಿಪ್ಟ್ ಹೇಳಿದೆ. ಮಾರ್ಚ್ 31ರಂದು ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸುಯೇಜ್ ಕಾಲುವೆ ಅಥಾರಿಟಿ, ಈಜಿಪ್ಟ್​ , ಹಡಗಿನ ಕಂಪನಿ ಬಳಿ 1 ಬಿಲಿಯನ್ ಡಾಲರ್ ಅಂದ್ರೆ ಭಾರತದ ರೂಪಾಯಿ ಲೆಕ್ಕದಲ್ಲಿ ಏಳೂವರೆ ಸಾವಿರ ಕೋಟಿ ರೂಪಾಯಿ ಪರಿಹಾರ ಕೇಳಲಿದೆ ಅಂತ ಮಾಹಿತಿ ನೀಡಿತ್ತು. ಆದ್ರೀಗ ಈಜಿಪ್ಟ್​ ಪರಿಹಾರದ ಮೊತ್ತ ಎಷ್ಟು ಅಂತ ಬಹಿರಂಗಪಡಿಸಿಲ್ಲ​​.. ಈ ಬಗ್ಗೆ ಪ್ರತಿಕ್ರಿಯಿಸಿರುವ ಜಪಾನ್ ಮೂಲದ ಹಡಗಿನ ಮಾಲೀಕತ್ವದ ಸಂಸ್ಥೆ, ನಮಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ.. ಈವರೆಗೆ ನಮ್ಮ ಬಳಿ ಯಾರೂ ಸುಯೇಜ್ ಕಾಲುವೆ ಬ್ಲಾಕ್ ಸಂಬಂಧ ಪರಿಹಾರ ಕೇಳಿಲ್ಲ ಅಂತ ಹೇಳಿದೆ. ಭಾರತಕ್ಕೆ ಚಿಂತೆಯ ವಿಚಾರ ಯಾಕೆ ಅಂದ್ರೆ ಎವರ್ ಗಿವನ್ ಹಡಗಿನಲ್ಲಿ 25 ಮಂದಿ ಭಾರತೀಯ ಸಿಬ್ಬಂದಿ ಕೂಡ ಇದ್ದಾರೆ.

-masthmagaa.com

Contact Us for Advertisement

Leave a Reply