4 ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯ ಸುದ್ದಿ ಶುದ್ಧ ಸುಳ್ಳು:‌ ರಿಪೋರ್ಟ್

masthmagaa.com:

ಭಾರತದ GDP 4 ಟ್ರಿಲಿಯನ್‌ ತಲುಪೋಕೆ ಇನ್ನೂ ಬಹಳ ಸಮಯ ಇದೆ ಅಂತ ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ. ಭಾನುವಾರ ಭಾರತದ ಆರ್ಥಿಕತೆ 4 ಟ್ರಿಲಿಯನ್‌ ಡಾಲರ್‌ ಗಡಿ ದಾಟಿದೆ ಅನ್ನೊ ಸ್ಕ್ರೀನ್‌ಶಾಟ್‌ಗಳು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡಿದ್ವು. ಬಿಜೆಪಿ ನಾಯಕರೊಬ್ಬರು ಮಾಡಿದ ಪೋಸ್ಟ್‌ ಒಂದರಿಂದ ಹರಡೋಕೆ ಶುರುವಾದ ಈ ಸುದ್ದಿಗೆ ಹಲವು ದೊಡ್ಡ ವ್ಯಕ್ತಿಗಳು ರಿಪ್ಲೈ ಮಾಡಿ ಮೋದಿ ಸರ್ಕಾರವನ್ನ ಹೊಗಳಿದ್ರು. ನಾವು ಕೂಡ ಈ ಬಗ್ಗೆ ರಿಪೋರ್ಟ್‌ ಮಾಡಿ NSO ಸೇರಿದಂತೆ ಯಾವುದೇ ಸರ್ಕಾರಿ ಸಂಸ್ಥೆಗಳು ಈ ವಿಚಾರವನ್ನ ಕನ್ಫರ್ಮ್‌ ಮಾಡಿಲ್ಲ ಅಂತೇಳಿದ್ವಿ. ಆದ್ರೆ ನಿನ್ನೆ ಬ್ಯಾಂಕ್‌ ಆಫ್‌ ಬರೋಡ ಚೀಫ್‌ ಎಕಾನಾಮಿಸ್ಟ್‌ ಮದನ್‌ ಸಬ್ನವಿಸ್‌ ಮಾತನಾಡಿ “ಈಗಿನ ಪರಿಸ್ಥಿತಿಯಲ್ಲಿ ಭಾರತದ ಎಕಾನಮಿ 4 ಟ್ರಿಲಿಯನ್‌ ಡಾಲರ್‌ ಆಗುವಂತೆ ಕಾಣ್ತಿಲ್ಲ. ಆ ಗುರಿ ತಲುಪೋಕೆ 2024-25 ರ ಆರ್ಥಿಕ ವರ್ಷದಲ್ಲಿ 10.5% ಬೆಳವಣಿಗೆ ಆಗ್ಬೇಕು. ಸದ್ಯ 7.2% ರೇಟ್‌ನಲ್ಲಿ ಭಾರತ ಬೆಳೆಯುತ್ತಿದೆ. ಮುಂದಿನ ವರ್ಷದ ಬೆಳವಣಿಗೆ ದರವನ್ನ ಜನವರಿಯಲ್ಲಿ NSO ಬಿಡುಗಡೆ ಮಾಡುತ್ತೆ.” ಅಂತೇಳಿದ್ದಾರೆ.

-masthmagaa.com

Contact Us for Advertisement

Leave a Reply