ಕ್ಷಮೆ ಕೇಳಿದ ಮಾಜಿ ಪೋಪ್​ ಬೆನೆಡಿಕ್ಟ್​​! ಯಾಕೆ ಗೊತ್ತಾ?

masthmagaa.com:

ತಾವು ಮ್ಯೂನಿಚ್​​ನ ಆರ್ಚ್​​ಬಿಷಪ್​ ಆಗಿದ್ದಾಗ ಮಕ್ಕಳ ಮೇಲೆ ಕೆಲ ಪಾದ್ರಿಗಳು ನಡೆಸಿದ್ದಾರೆ ಎನ್ನಲಾದ ಲೈಂಗಿಕ ದೌರ್ಜನ್ಯದ ಪ್ರಕರಣಗಳನ್ನ ತಾವು ಹ್ಯಾಂಡಲ್​ ಮಾಡುವಲ್ಲಿ ತಪ್ಪುಗಳು ಆಗಿವೆ ಅಂತ ಮಾಜಿ ಪೋಪ್​ ಬೆನೆಡಿಕ್ಟ್​ ಒಪ್ಪಿಕೊಂಡಿದ್ದಾರೆ. ಜೊತೆಗೆ ಆ ತಪ್ಪಿಗೆ ಕ್ಷಮೆ ಕೂಡ ಕೇಳಿದ್ದಾರೆ. ಅಂದ್ಹಾಗೆ 1945ರಿಂದ 2019ರವರೆಗೆ ಮ್ಯೂನಿಚ್​​ನ ಆರ್ಚ್​ಡಯಾಸಿಸ್​ನಲ್ಲಿ ನಡೆದ ಅಧಿಕಾರ ದುರುಪಯೋಗದ ಬಗ್ಗೆ ಕಳೆದ ತಿಂಗಳು ಜರ್ಮನಿಯ ತನಿಖಾಧಿಕಾರಿಗಳು ರಿಪೋರ್ಟ್​ವೊಂದನ್ನ ರಿಲೀಸ್ ಮಾಡಿದ್ರು. ಅದರಲ್ಲಿ ಮಾಜಿ ಪೋಪ್​ ಬೆನಿಡಿಕ್ಟ್​ ಸಿಕ್ಸ್​ಟೀನ್​ ಅಥವಾ Joseph Aloisius Ratzinger 1977ರಿಂದ 1982ರವರೆಗೆ ಆರ್ಚ್​ಬಿಷಪ್​ ಆಗಿದ್ದ ಟೈಮಲ್ಲಿ ಪಾದ್ರಿಗಳ ಲೈಂಗಿಕ ದೌರ್ಜನ್ಯದ ನಾಲ್ಕು ಪ್ರಕರಣಗಳಲ್ಲಿ ಕ್ರಮ ಕೈಗೊಂಡಿರಲಿಲ್ಲ. ಅವುಗಳ ಬಗ್ಗೆ ಅವರಿಗೆ ಗೊತ್ತಿದ್ರೂ ಅದನ್ನ ತಡೆಯಲು ವಿಫಲರಾಗಿದ್ರು ಅಂತ ಆರೋಪಿಸಲಾಗಿತ್ತು. ಈ ಸಂಬಂಧ ತಮ್ಮ ತಪ್ಪುಗಳನ್ನ ಒಪ್ಪಿಕೊಂಡಿರೋ 94 ವರ್ಷದ Joseph Aloisius Ratzinger ಕ್ಷಮೆ ಕೇಳಿದ್ದಾರೆ. ಆದ್ರೆ ಈ ಪ್ರಕರಣದಲ್ಲಿ ಇವರು ನೇರವಾಗಿ ತಪ್ಪಿತಸ್ಥರಲ್ಲ ಅಂತ ಇವರ ಪರ ವಕೀಲರು ವಾದಿಸುತ್ತಿದ್ದಾರೆ.

-masthmagaa.com

Contact Us for Advertisement

Leave a Reply