ಮಯನ್ಮಾರ್ ಸೇನೆ ಮೇಲೆ ಬಿತ್ತು ಮತ್ತಷ್ಟು ಸ್ಯಾಂಕ್ಷನ್ಸ್

masthmagaa.com:

ಮಯನ್ಮಾರ್​​ನ ಸೇನಾ ಕ್ಷಿಪ್ರಕ್ರಾಂತಿ ಜೊತೆ ಲಿಂಕ್ ಹೊಂದಿರೋ ಮತ್ತೆ 10 ವ್ಯಕ್ತಿಗಳು ಮತ್ತು ಮಯನ್ಮಾರ್​ ಸೇನೆ ನಡೆಸುತ್ತಿರುವ 2 ವ್ಯವಹಾರಗಳ ಮೇಲೆ ಸ್ಯಾಂಕ್ಷನ್ಸ್ ಹೇರಲು ಯುರೋಪಿಯನ್ ಯೂನಿಯನ್ ಒಪ್ಪಿಗೆ ನೀಡಿದೆ. ಒಂದು Myanma Economic Holdings Limited (MEHL).. ಮತ್ತೊಂದು Myanmar Economic Corporation (MEC).. ಇವೆರಡನ್ನ ಮಯನ್ಮಾರ್ ಸೇನೆ ಮುನ್ನಡೆಸುತ್ತಿರೋದು. ಹೀಗಾಗಿ ಈ ಎರಡು ಸಂಘಸಂಸ್ಥೆಗಳ ಜೊತೆ ಯುರೋಪಿಯನ್ ಒಕ್ಕೂಟದ ಹೂಡಿಕೆದಾರರು ಮತ್ತು ಬ್ಯಾಂಕ್​ಗಳು ಯಾವುದೇ ವ್ಯವಹಾರ ನಡೆಸುವಂತಿಲ್ಲ. ಕಳೆದ ತಿಂಗಳು ಕೂಡ ಕ್ಷಿಪ್ರ ಕ್ರಾಂತಿ ಜೊತೆ ಲಿಂಕ್​ ಹೊಂದಿದ್ದ 11 ಜನರ ಮೇಲೆ ಯುರೋಪಿಯನ್ ಒಕ್ಕೂಟ ಸ್ಯಾಂಕ್ಷನ್ಸ್ ಹೇರಿತ್ತು. ಇದೆಲ್ಲದರ ನಡುವೆ ದಕ್ಷಿಣ ಕೊರಿಯಾದ POSCO Coated & Color Steel Co Ltd ಕೂಡ Myanma Economic Holdings Limited ತನ್ನ ವ್ಯವಹಾರ ಅಂತ್ಯಗೊಳಿಸೋದಾಗಿ ಘೋಷಿಸಿದೆ.

-masthmagaa.com

Contact Us for Advertisement

Leave a Reply