ವಿದೇಶಗಳಲ್ಲಿರೋ ಉಘರ್‌ ಮುಸ್ಲಿಮರನ್ನೂ ಬಿಡ್ತಿಲ್ಲಾ ಚೀನಾ!

masthmagaa.com:

ಈಗಾಗಲೇ ಇಡೀ ಜಗತ್ತಿಗೇ ಗೊತ್ತಾಗಿರುವಂತೆ ಚೀನಾ ತನ್ನ ಶಿಂಜಿಯಾಂಗ್ ಪ್ರಾಂತ್ಯದಲ್ಲಿ ಉಘರ್ ಮುಸ್ಲಿಮರನ್ನ ಲಾಕ್ ಮಾಡಿ ಇಟ್ಟಿದೆ. ಹಾಗೂ ಭಾರೀ ದೌರ್ಜನ್ಯಮಾಡ್ತಿದೆ ಅಂತ. ಈಗ ಚೀನಾ ನೆಲದ ಹೊರಗೆ ವಿದೇಶಗಳಲ್ಲಿರೋ ಉಘರ್ ಮುಸ್ಲಿಮರನ್ನೂ ಟಾರ್ಗೆಟ್ ಮಾಡ್ತಿದೆ ಅನ್ನೋ ಭಯಾನಕ ಸಂಗತಿ ಗೊತ್ತಾಗಿದೆ. ಅದರಲ್ಲೂ, ಚೀನಾ ನಿಮಗೆ ಕೊರೋನ ವ್ಯಾಕ್ಸಿನ್ ಕೊಡುತ್ತೆ, ಅದಕ್ಕೆ ಬದಲಾಗಿ ವಿದೇಶಗಳಲ್ಲಿ ಇದ್ದುಕೊಂಡು ಉಘರ್ ಮುಸ್ಲಿಮರ ಪರವಾಗಿ ಅಭಿಯಾನ ಮಾಡ್ತಿರೋರನ್ನ ನಮಗೆ ಹಿಡಿದುಕೊಡಿ ಅಂಥಾ ಆಫರ್​ ಇಟ್ಟಿದೆ. ಫ್ರಾನ್ಸ್​ನಲ್ಲಿ ಮುಸ್ಲಿಮರ ಮೇಲೆ ಅನ್ಯಾಯ ಅಂತಾ ಊಳಿಟ್ಟು ಪ್ರತಿಭಟಿಸೋ ಟರ್ಕಿಯ ಅಧ್ಯಕ್ಷ ಎರ್ಡೋಗನ್ ಉಘರ್​ ಮುಸ್ಲಿಮರ ವಿಚಾರದಲ್ಲಿ ಚೀನಾದ ಚಮಚಾದಂತೆ ಕೆಲಸ ಮಾಡ್ತಿದ್ದಾರೆ. ಅನ್ನೋದು ಬಯಲಾಗಿದೆ. ಒಂದು ಘಟನೆ ಹೇಳ್ತೀವಿ ಕೇಳಿ.

ಟರ್ಕಿಯಲ್ಲಿ ವಾಸವಾಗಿರೋ ಅಬ್ದುಲ್ಲಾ ಮೆತ್ಸೇಯ್ದಿ ಕಳೆದ ತಿಂಗಳು ಇನ್ನೇನು ಮಲಗೋಣ ಅಂತಾ ಹಾಸಿಗೆ ಏರಿದ್ದರಷ್ಟೇ.. ಆಗಲೇ ಯಾರೋ ಜೋರಾಗಿ ಬಾಗಿಲು ಬಡಿಯೋ ಶಬ್ದ ಕೇಳಿಸಿದೆ. ಪೊಲೀಸ್​​…. ಕೂಡಲೇ ಬಾಗಿಲು ತೆರಿ ಅಂತಾ ಕೂಗಿದ್ದಾರೆ. ಬಾಗಿಲು ತೆಗೆದಾಗ ಭಯೋತ್ಪಾದನಾ ನಿಗ್ರಹ ದಳದವರು ಬಂದೂಕು ಸಮೇತ ನುಗ್ಗಿದ್ದಾರೆ! ನೀನು ಚೀನಾ ವಿರುದ್ಧ ಯಾವುದಾದರೂ ಅಭಿಯಾನದಲ್ಲಿ ಪಾಲ್ಗೊಂಡಿದ್ದೀಯಾ ಅಂತಾ ಕೇಳಿದ್ದಾರೆ. ಇಲ್ಲ ಇಲ್ಲ ಎಂದರೂ, ನಿನ್ನನ್ನೂ, ನಿನ್ನ ಹೆಂಡತಿ ಇಬ್ಬರನ್ನೂ ಚೀನಾಗೆ ಗಡಿಪಾರು ಮಾಡ್ತೀವಿ ನಡಿ ಅಂತಾ ಹೊತ್ಕೊಂಡು ಹೋಗಿ ಗಡಿಪಾರು ಕೇಂದ್ರದಲ್ಲಿ ಇಟ್ಟಿದ್ದಾರೆ.

ಅಂದ್ರೆ ಸಿಂಪಲ್ಲಾಗಿ ಚೀನಾ ಅನ್ನೋ ಗಿಡುಗನ ಬಾಯಲ್ಲಿ ತಗೊಂಡೋಗಿ ತನ್ನ ಪ್ರಜೆಯನ್ನ ಇಡ್ತಿದ್ದಾರೆ ಅಂತಾ. ಈ ವಿಚಾರ ಈಗ ಟರ್ಕಿಯಲ್ಲಿ ಬಹಳ ದೊಡ್ಡ ಕೋಲಾಹಲ ಸೃಷ್ಟಿ ಮಾಡಿದೆ. ಟರ್ಕಿ ಸರ್ಕಾರ ಸೀಕ್ರೆಟ್ಟಾಗಿ ಉಘರ್​​​ ಮುಸ್ಲಿಮರನ್ನ ಚೀನಾಗೆ ಮಾರುತ್ತಿದ್ದಾರೆ ಅಂತ ವಿರೋಧ ಪಕ್ಷಗಳ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚೀನಾ ಟರ್ಕಿಗೆ ಲಕ್ಷ ಲಕ್ಷ ಕೊರೋನ ಲಸಿಕೆ ಕೊಡುವ ಪ್ರಾಮಿಸ್ ಮಾಡಿದೆ. ಆದ್ರೆ ಇನ್ನೂ ಕೊಟ್ಟಿಲ್ಲ. ಆದ್ರೆ ಟರ್ಕಿ ಮಾತ್ರ ಕಳೆದ ಎರಡು ತಿಂಗಳಲ್ಲೇ 50ಕ್ಕೂ ಅಧಿಕ ಉಘರ್ ಮುಸ್ಲಿಮರನ್ನ ಹಿಡಿದು ತಂದು ಗಡಿಪಾರು ಕೇಂದ್ರಗಳಲ್ಲಿ ಬಂಧಿಸಿಟ್ಟಿದೆ.

-masthmagaa.com

Contact Us for Advertisement

Leave a Reply