ಕ್ಯೂಬಾದಲ್ಲಿ ಕಮ್ಯೂನಿಷ್ಟರ ವಿರುದ್ದ ದಂಗೆ

masthmagaa.com:

ಲ್ಯಾಟಿನ್ ಅಮೆರಿಕದಲ್ಲಿ ಬರೋ ಕ್ಯೂಬಾದಲ್ಲಿ 3 ದಶಕಗಳ ಬಳಿಕ ದೊಡ್ಡ ಮಟ್ಟದ ಪ್ರತಿಭಟನೆಯೊಂದು ಭುಗಿಲೆದ್ದಿದೆ. ದ್ವೀಪರಾಷ್ಟ್ರದ ಸಾವಿರಾರು ಮಂದಿ ರಸ್ತೆಗೆ ಇಳಿದು ಆಹಾರದ ಕೊರತೆ, ಬೆಲೆ ಏರಿಕೆ ಮತ್ತು ಕಮ್ಯೂನಿಸ್ಟ್ ಆಡಳಿತದ ವಿರುದ್ಧ ಪ್ರತಿಭಟನೆ ಶುರು ಮಾಡಿದ್ದಾರೆ. ರಾಜಧಾನಿ ಕ್ಯೂಬಾದಲ್ಲಿ ಸಾವಿರಾರು ಜನ ಮೆರವಣಿಗೆ ನಡೆಸಿ, ಹೋಮ್​ ಲ್ಯಾಂಡ್​ & ಲೈಫ್ ಮತ್ತು ಫ್ರೀಡಂ ಅಂತ ಘೋಷಣೆಗಳನ್ನು ಕೂಗಿದ್ದಾರೆ. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರೋ ಪ್ರತಿಭಟನಾಕಾರರು, ಹಸಿವಿನಿಂದಾಗಿ ನಾವು ಇಲ್ಲಿಗೆ ಬಂದಿದ್ದೇವೆ. ಸರಿಯಾಗಿ ಔಷಧಗಳು ಸಿಗುತ್ತಿಲ್ಲ. ಪವರ್ ಕಟ್ ಮಾಡಲಾಗ್ತಿದೆ. ಹೀಗಾಗಿ ನಾವು ಸಂಪೂರ್ಣ ಬದಲಾವಣೆ ಬಯಸಿದ್ದೇವೆ. ಸರ್ಕಾರ ಬದಲಾಗಬೇಕು.. ಹಲವು ಪಕ್ಷಗಳನ್ನು ಒಳಗೊಂಡಂತೆ ಚುನಾವಣೆ ನಡೆಯಬೇಕು. ಕಮ್ಯೂನಿಸಂ ಅಂತ್ಯಗೊಳಿಸಬೇಕು ಅಂತ ಆಕ್ರೋಶ ಹೊರಹಾಕಿದ್ದಾರೆ. ಇನ್ನು ಮಾಧ್ಯಮಗಳಲ್ಲಿ ಅಧ್ಯಕ್ಷ ಮಿಘೆಲ್ ಡಯಾಸ್ ಕ್ಯಾನೆಲ್​​​ರ​​ ಭಾಷಣ ಪ್ರಸಾರ ಮಾಡಲಾಗಿದೆ. ಇದ್ರಲ್ಲಿ ಮಿಘೆಲ್ ಡಯಾಸ್​ ಕ್ಯಾನೆಲ್​​, ದೇಶದ ಸ್ಥಿರತೆಯನ್ನು ಹಾಳು ಮಾಡೋಕೆ ಯತ್ನಿಸಿದ್ರೆ ದೊಡ್ಡ ಪರಿಣಾಮ ಕೈಗೊಳ್ತೀವಿ. ಇಡೀ ದೇಶದ ಎಲ್ಲಾ ಕ್ರಾಂತಿಕಾರಿಗಳು ಮತ್ತು ಕಮ್ಯೂನಿಸ್ಟ್​​​ಗಳನ್ನು ಬೀದಿಗೆ ಇಳಿಸ್ತೀವಿ ಹುಷಾರ್ ಅಂತ ಎಚ್ಚರಿಸಿದ್ದಾರೆ. ಅಲ್ಲದೆ ಸರ್ಕಾರದ ಕೆಲ ಬೆಂಬಲಿಗರು, ಇದ್ರ ಹಿಂದೆ ಅಮೆರಿಕದ ಕೈವಾಡವಿದೆ. ಪ್ರತಿಭಟನೆ ನಡೆಸ್ತಿರೋರಿಗೆ ಅಮೆರಿಕದಿಂದ ದುಡ್ಡುನೀಡಲಾಗಿದೆ. ಅಮೆರಿಕ ಕ್ಯೂಬಾದಲ್ಲಿ ಪ್ರಜಾಪ್ರಭುತ್ವದ ಸ್ಥಾಪನೆಗೆ ಅಂತಲೇ ಪ್ರತಿ ವರ್ಷ 2 ಕೋಟಿ ಡಾಲರ್ ಅಂದ್ರೆ ಹತ್ತತ್ರ ನೂರೈವತ್ತು ಕೋಟಿ ರೂಪಾಯಿ ಖರ್ಚು ಮಾಡುತ್ತೆ ಅಂತ ಹೇಳಿದ್ದಾರೆ. ಇದ್ರ ಬೆನ್ನಲ್ಲೇ ಅಮೆರಿಕ ಕೂಡ ನೇರವಾಗಿ ಈ ಪ್ರತಿಭಟನೆಗೆ ಬೆಂಬಲ ಸೂಚಿಸಿದೆ. ಸೋವಿಯತ್ ಒಕ್ಕೂಟ ವಿಘಟನೆಯಾದ ಬಳಿಕ 1994ರಲ್ಲಿ ದೊಡ್ಡ ಮಟ್ಟದ ಆರ್ಥಿಕ ಬಿಕ್ಕಟ್ಟು ಎದುರಾಗಿ, ಪ್ರತಿಭಟನೆ ನಡೆದಿತ್ತು. ಅದು ಬಿಟ್ರೆ ಈಗಲೇ ಇಷ್ಟು ದೊಡ್ಡ ಆರ್ಥಿಕ ಬಿಕ್ಕಟ್ಟು ಎದುರಾಗಿದೆ. ಟ್ರಂಪ್ ಆಳ್ವಿಕೆಯಲ್ಲಿ 200ಕ್ಕೂ ಹೆಚ್ಚು ನಿರ್ಬಂಧಗಳನ್ನು ವಿಧಿಸಲಾಗಿತ್ತು. ನಂತರದಲ್ಲಿ ಕೊರೋನಾದಿಂದಾಗಿ ಪ್ರವಾಸೋದ್ಯಮ ನೆಲಕ್ಕಚ್ಚಿದೆ.
ಇನ್ನು ಈ ಕ್ಯೂಬಾಗೆ 1902ರಲ್ಲಿ ಕ್ಯೂಬಾಗೆ ಸ್ವಾತಂತ್ರ್ಯ ಸಿಕ್ತು. ಪೂರ್ಣ ಸ್ವಾತಂತ್ರ್ಯ ಅಲ್ಲ.. ಭಾಗಶಃ ಸ್ವಾತಂತ್ರ್ಯ. ಎಲ್ಲವೂ ಅಮೆರಿಕ ಹೇಳಿದಂತೆಯೇ ನಡೀತಾ ಇತ್ತು. ನಂತರ ಅಲ್ಲಿ ಫುಲ್ಗೆನ್ಸಿಯೋ ಬಟಿಸ್ಟಾ 1940-45ರವರೆಗೆ ಅಧ್ಯಕ್ಷರಾದ್ರು. ನಂತರ 1952ರಿಂದ 59ರವರೆಗೂ ಸರ್ವಾಧಿಕಾರಿಯಾಗಿದ್ರು. ಬಟಿಸ್ಟಾ ಸರ್ಕಾರಕ್ಕೆ ಅಮೆರಿಕ ಫುಲ್ ಸಪೋರ್ಟ್ ಇತ್ತು. ಆದ್ರೆ ಸರ್ಕಾರದ ವಿರುದ್ಧ ಪ್ರತಿಭಟನೆ ಕೂಡ ಜೋರಾಗಿತ್ತು. ಆ ಪ್ರತಿಭಟನೆ ಅಂದ್ರೆ ರೆಬೆಲ್ ಗುಂಪಿನ ನೇತೃತ್ವ ಫಿಡೆಲ್ ಕ್ಯಾಸ್ಟ್ರೋ ವಹಿಸಿಕೊಂಡಿದ್ರು. ನಂತರ ಚೆಗುವೇರಾ ಸಹಾಯದೊಂದಿಗೆ ಕ್ರಾಂತಿ ಮಾಡಿದ ಫಿಡೆಲ್ ಕ್ಯಾಸ್ಟ್ರೋ, 1959ರಲ್ಲಿ ಕ್ಯೂಬಾದಲ್ಲಿ ಹೊಸ ಸರ್ಕಾರ ಸ್ಥಾಪಿಸಿದ್ರು. ಅಧಿಕಾರ ವಶಕ್ಕೆ ಪಡೆಯೋ ಮುನ್ನ ಫಿಡೆಲ್ ಕ್ಯಾಸ್ಟ್ರೋ, ನಾವು ಕಮ್ಯೂನಿಸ್ಟ್‍ಗಳಲ್ಲ ಅಂತಲೇ ಹೇಳಿಕೊಂಡಿದ್ರು. ಆದ್ರೆ ಅಧಿಕಾರ ಕೈಗೆ ಬಂದ ಬಳಿಕ ಉಲ್ಟಾ ಹೊಡೆದ್ರು. ನಾವು ಲೆನಿನಿಸ್ಟ್​​​ಗಳು, ಮಾರ್ಕ್ಸಿಸ್ಟ್​​​ಗಳು ಅಂತ ಬಹಿರಂಗವಾಗಿ ಹೇಳಿಕೆ ಕೊಟ್ರು. 6 ತಿಂಗಳ ಬಳಿಕ ಚುನಾವಣೆ ನಡೆಸ್ತೇವೆ ಅಂತ ಹೇಳಿದ್ರೂ ಕೂಡ ಆಮೇಲೆ ಚುನಾವಣೆ ನಡೆಯಲೇ ಇಲ್ಲ. 1976ರವರೆಗೆ ಕ್ಯೂಬಾ ಪ್ರಧಾನಿಯಾಗಿದ್ದ ಅವರು, ನಂತರದಲ್ಲಿ ಅಧ್ಯಕ್ಷರಾದ್ರು. ಹೀಗೆ ಒಟ್ಟು ಮುಂದಿನ 4 ದಶಕಗಳ ಕಾಲ ದೇಶವನ್ನು ಆಳಿದ್ರು. 2008ರಲ್ಲಿ ಫಿಡೆಲ್ ಕ್ಯಾಸ್ಟ್ರೋ ಸಹೋದರ ರೌಲ್ ಕ್ಯಾಸ್ಟ್ರೋ 2018ರವರೆಗೆ ಕ್ಯೂಬಾ ಅಧ್ಯಕ್ಷರಾದ್ರು. ಇವರ ನಂತರ ಈಗ ಮಿಘೆಲ್ ಡಯಾಸ್ ಕ್ಯಾನೆಲ್ ಕ್ಯೂಬಾದಲ್ಲಿ ಅಧ್ಯಕ್ಷರಾಗಿದ್ದಾರೆ.

-masthmagaa.com

Contact Us for Advertisement

Leave a Reply