ಉತ್ತರ ಪ್ರದೇಶ ಸರ್ಕಾರದ ಸಾಮೂಹಿಕ ಮದುವೆಯಲ್ಲಿ ವಂಚನೆ! ನಡೆದಿದ್ದೇನು?

masthmagaa.com:

ಮದುವೆಯ ಹೆಸರಲ್ಲಿ ಉತ್ತರ ಪ್ರದೇಶ ಸರ್ಕಾರಕ್ಕೆ ದೊಡ್ಡ ಮೋಸ ಮಾಡ್ತಿರೋ ಜಾಲವನ್ನ ಈಗ ಬೆಳಕಿಗೆ ತರಲಾಗಿದೆ. ಸರ್ಕಾರದ ಸಾಮೂಹಿಕ ವಿವಾಹ ಕಾರ್ಯಕ್ರಮದ ಹೆಸ್ರಲ್ಲಿ ಸಾಮೂಹಿಕ ವಂಚನೆ ಮಾಡಲಾಗಿದೆ. ಇಲ್ಲಿನ ಬಲಿಯಾ ಜಿಲ್ಲೆಯಲ್ಲಿ ಜನವರಿ 25 ರಂದು ಸಾಮೂಹಿಕ ವಿವಾಹ ನಡೆದಿತ್ತು. ಆಗ 568 ಜೋಡಿಗಳು ವಿವಾಹವಾಗಿದ್ದಾರೆ ಅಂತ ಅಲ್ಲಿನ ಅಧಿಕಾರಿಗಳು ಹೇಳಿದ್ರು. ಆದ್ರೆ ವಾಸ್ತವವಾಗಿ ಅಲ್ಲಿ ನಡೆದಿರೋದೇ ಬೇರೆ. ಅಲ್ಲಿಗೆ ವಧುಗಳೂ ಬಂದಿಲ್ಲ-ವರರೂ ಬಂದಿಲ್ಲ, ಹೇಳಬೇಕು ಅಂದ್ರೆ ಮದುವೆನೇ ಆಗಿಲ್ಲ. ಆಗಿರೋದು ಬರೀ ವಂಚನೆ…. ಕೆಲ ಮಹಿಳೆಯರಿಗೆ ಮತ್ತು ಪುರುಷರಿಗೆ ಹಣದಾಸೆ ತೋರ್ಸಿ, ವಧು ವರರಂತೆ ಜಸ್ಟ್‌ ಪೋಸ್‌ ಕೊಡೋಕೆ ಹೇಳಲಾಗಿತ್ತು. ಇದಕ್ಕೆ ಅವ್ರಿಗೆ 500-2,000 ರೂಪಾಯಿವರೆಗೆ ಹಣ ನೀಡಲಾಗಿತ್ತು. ಹಣ ಕಂಡ್ರೆ ಹೆಣಾನೂ ಬಾಯ್ಬಿಡುತ್ತೆ ಅಂತಾರೆ… ಅಂತಾದ್ರಲ್ಲಿ ಇಲ್ಲಿ ಗಂಡಸರು ತಾವ್ಯಾರ್ಗೂ ಕಮ್ಮಿಯಿಲ್ಲ ಅಂತ ವಧುವಿನ ವೇಷ ಧರಿಸಿದ್ದಾರೆ. ಕೆಲ ಮಹಿಳೆಯರಿಗೆ ಜೋಡಿಯಾಗಿ ಯಾರೂ ಇರ್ಲಿಲ್ಲ. ಆದ್ರಿಂದ ತಮ್ಮ ಕೊರಳಿಗೆ ತಾವೇ ಹಾರ ಹಾಕೊಂಡು ಡಬಲ್‌ ರೋಲ್‌ ಪ್ಲೇ ಮಾಡಿದ್ದಾರೆ. ಈ ವಿಡಿಯೋ ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿದೆ. ಸದ್ಯ ಈ ವಂಚನೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಉತ್ತರ ಪ್ರದೇಶದ ಇಬ್ಬರು ಸರ್ಕಾರಿ ಅಧಿಕಾರಿಗಳನ್ನ ಸೇರಿ 15 ಮಂದಿಯನ್ನ ಅರೆಸ್ಟ್‌ ಮಾಡಲಾಗಿದೆ. ಅಂದ್ಹಾಗೆ ಪ್ರತೀ ಮದುವೆಗೆ ಅಂದ್ರೆ ಮದುವೆಯಾಗೋ ವಧುವರರಿಗೆ ತಾಳಿ- ಬಟ್ಟೆ ಇತ್ಯಾದಿ ಇತ್ಯಾದಿಗಳನ್ನ ಖರೀದಿ ಮಾಡೋಕೆ ಒಂದು ಜೋಡಿಗೆ 51 ಸಾವಿರ ಕೊಡ್ತಿತ್ತು. ಹೀಗಾಗಿ ಹಣ ಲಪಟಾಯಿಸೋ ಉದ್ದೇಶದಿಂದ ಸುಳ್ಳು ಮದುವೆ ಮಾಡಿಸಿ ಫೋಟೋ ಶೂಟ್‌ ಮಾಡಿಸಿದ್ದಾರೆ. ಅದೃಷ್ಟಕ್ಕೆ ಈ ಮೋಸ ಮಾಡಿರೋ ಜೋಡಿಗಳಿಗೆ ಇನ್ನೂ ಸರ್ಕಾರದ ಹಣ ಬಂದಿಲ್ಲ. ಹಣ ಕೊಡೋಕೂ ಮುಂಚೆ ಇದು ಗೊತ್ತಾಗಿದೆ.

-masthmagaa.com

Contact Us for Advertisement

Leave a Reply