ಐಶ್ವರ್ಯ ರೈ ಹೆಚ್ಚು ಸಿನಿಮಾ ಮಾಡೋಕೆ ಬಿಡಿ ಎಂದ ಫ್ಯಾನ್ಸ್: ಖಡಕ್ ಉತ್ತರ ಕೊಟ್ಟ ಅಭಿಷೇಕ್ ಬಚ್ಚನ್!

masthmagaa.com:

ನಟ ಅಭಿಷೇಕ್‌ ಬಚ್ಚನ್‌ ಟ್ರೋಲ್‌ಗಳಿಂದಲೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಸೋಷಿಯಲ್‌ ಮಿಡಿಯಾದಲ್ಲಿ ಯಾವುದಾದರು ಒಂದು ವಿಷಯ ತೆಗೆದುಕೊಂಡು ಅಭಿಷೇಕ್‌ ಬಚ್ಚನ್‌ ಕಾಲೆಳೆಯಲಾಗುತ್ತದೆ. ಇದೀಗ ಇಂತಹದ್ದೇ ಒಂದು ಸನ್ನಿವೇಶ ಉಂಟಾಗಿದೆ. ನಟಿ ಐಶ್ವರ್ಯಾ ರೈ ಅಭಿನಯದ ʻಪೊನ್ನಿಯಿನ್‌ ಸೆಲ್ವನ್‌ 2ʼ ಸಿನಿಮಾ ಬಿಡುಗಡೆಯಾಗಿದೆ. ಇದನ್ನು ನೋಡಿದ ಅಭಿಮಾನಿಗಳು ಸಿನಿಮಾದಲ್ಲಿ ಐಶ್ವರ್ಯಾ ರೈ ನಟನೆಯನ್ನು ಇಷ್ಟಪಟ್ಟಿದ್ದಾರೆ. ಐಶ್ವರ್ಯಾ ರೈ ಅಭಿಮಾನಿಯೊಬ್ಬರು ಟ್ವಿಟರ್‌ನಲ್ಲಿ ಅಭಿಷೇಕ್‌ ಬಚ್ಚನ್‌ಗೆ ಸಲಹೆ ನೀಡಿದ್ದಾರೆ. ‘ಐಶ್ವರ್ಯಾ ರೈ ಅವರಿಗೆ ಹೆಚ್ಚು ಸಿನಿಮಾ ಒಪ್ಪಿಕೊಳ್ಳಲು ಬಿಡಿ. ಮಗಳು ಆರಾಧ್ಯಾಳನ್ನು ನೀವು ನೋಡಿಕೊಳ್ಳಿ’ ಎಂದು ಸಲಹೆ ನೀಡಿದ್ದಾರೆ. ಅಭಿಮಾನಿಗಳ ಸಲಹೆಯನ್ನು ಅಭಿಷೇಕ್‌ ಬಚ್ಚನ್‌ ಪಾಸಿಟಿವ್​ ಆಗಿ ಸ್ವೀಕರಿಸಿದ್ದಾರೆ. ‘ಐಶ್ವರ್ಯಾಗೆ ಹೆಚ್ಚು ಸಿನಿಮಾ ಒಪ್ಪಿಕೊಳ್ಳಲು ಬಿಡಬೇಕಾ? ಸರ್.. ಯಾವುದಕ್ಕೂ ಅವರು ನನ್ನ ಅನುಮತಿ ಪಡೆಯುವ ಅಗತ್ಯವಿಲ್ಲ. ಅದರಲ್ಲೂ ಅವರು ಇಷ್ಟಪಡುವ ವಿಚಾರದಲ್ಲಿ ನನ್ನ ಅನುಮತಿಯ ಅವಶ್ಯಕತೆ ಇಲ್ಲ’ ಎಂದು ಅಭಿಷೇಕ್​ ಬಚ್ಚನ್​ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply