ಸೆ. 27ರಂದು ಭಾರತ ಬಂದ್: ಯುಪಿ ಚುನಾವಣೆಲ್ಲಿ ಬಿಜೆಪಿ ವಿರುದ್ಧ ಪ್ರಚಾರ

masthmagaa.com:

ಕೇಂದ್ರ ಸರ್ಕಾರದ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾ ಇವತ್ತು ಉತ್ತರ ಪ್ರದೇಶದ ಮುಜಾಫರನಗರದಲ್ಲಿ ಮಹಾಪಂಚಾಯತ್ ಆಯೋಜಿಸಿತ್ತು. ಇದ್ರಲ್ಲಿ ಮಾತಾಡಿದ ರೈತರು, ಕೇಂದ್ರ ಸರ್ಕಾರ ಬೆರಳೆಣಿಕೆಯಷ್ಟು ರೈತರು ಪ್ರತಿಭಟಿಸ್ತಿದ್ದಾರೆ ಅಷ್ಟೆ ಅಂತ ಹೇಳ್ತಿದೆ.. ನಾವು ನಮ್ಮ ಶಕ್ತಿಯನ್ನು ತೋರಿಸಬೇಕು ಅಂತ ಕರೆ ನೀಡಿದ್ದಾರೆ. ಜೊತೆಗೆ ಸೆಪ್ಟೆಂಬರ್ 27ರಂದು ಭಾರತ್ ಬಂದ್​​ಗೆ ಕರೆ ನೀಡಲಾಗಿದ್ದು, ಎಲ್ಲಾ ರೈತರು ಬಂದ್​​ಗೆ ಬೆಂಬಲ ನೀಡುವಂತೆ ಮನವಿ ಮಾಡಲಾಗಿದೆ. ಅಂದಹಾಗೆ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರ ಪ್ರತಿಭಟನೆಗೆ 9 ತಿಂಗಳು ಭರ್ತಿಯಾಗಿವೆ. ಆದ್ರೂ ಪ್ರತಿಭಟನೆ ಮುಂದುವರಿದಿದೆ . ಅತ್ತ ಪಂಜಾಬ್​ನಲ್ಲಿ ಸುಮಾರು 32 ಕೃಷಿ ಸಂಘಟನೆಗಳು ತಮ್ಮ ವಿರುದ್ಧ ದಾಖಲಾಗಿರೋ ಎಲ್ಲಾ ಕೇಸ್​​ಗಳನ್ನು ತೆಗೆದು ಹಾಕುವಂತೆ ರಾಜ್ಯಸರ್ಕಾರಕ್ಕೆ ಆಗ್ರಹಿಸಿವೆ. ಒಂದ್ವೇಳೆ ಸೆಪ್ಟೆಂಬರ್ 8ರ ಒಳಗಾಗಿ ಕೇಸ್ ಹಿಂದಕ್ಕೆ ಪಡೆಯದೇ ಇದ್ರೆ, ದೊಡ್ಡ ಮಟ್ಟದ ಪ್ರತಿಭಟನೆ ನಡೆಸಬೇಕಾಗುತ್ತೆ ಅಂತಲೂ ಎಚ್ಚರಿಸಿವೆ.

masthmagaa.com:

 

Contact Us for Advertisement

Leave a Reply