ಕೃಷಿ ಕಾನೂನು ವಿರುದ್ಧ ಹೋರಾಡಿದ್ದ ಸಂಘಟನೆಗಳ ರಾಜಕೀಯ ಪ್ರವೇಶ!

masthmagaa.com:

ಕೃಷಿ ಕಾಯ್ದೆ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿದ್ದ 22 ಸಂಘಟನೆಗಳು ಮುಂಬರುವ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿವೆ. ಈ ಬಗ್ಗೆ ಸಭೆ ನಡೆಸಿರೋ ಸಂಘಟನೆಗಳು ಸಂಯುಕ್ತ ಸಮಾಜ್ ಮೋರ್ಚಾ ರಚಿಸಿಕೊಂಡಿವೆ. ಎಲ್ಲಾ 117 ಕ್ಷೇತ್ರಗಳಲ್ಲೂ ಸ್ಪರ್ಧಿಸೋ ಪ್ಲಾನ್ ಇದ್ದು, ಮುಂಬರುವ ದಿನಗಳಲ್ಲಿ ಆಮ್ ಆದ್ಮಿ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಕೂಡ ಇವೆ.

-masthmagaa.com

Contact Us for Advertisement

Leave a Reply