ರೈತರ ಟ್ರಾಕ್ಟರ್​ ಮೆರವಣಿಗೆ ಬಗ್ಗೆ ಆದೇಶ ಪಾಸ್ ಮಾಡಲ್ಲ ಎಂದ ‘ಸುಪ್ರೀಂ’

masthmagaa.com:

3 ಕೃಷಿ ಕಾನೂನುಗಳನ್ನ ವಿರೋಧಿಸಿ ರೈತ ಸಂಘಟನೆಗಳು ಜನವರಿ 26ನೇ ತಾರೀಖು, ಗಣರಾಜ್ಯೋತ್ಸವ ದಿನದಂದು ಟ್ರಾಕ್ಟರ್​ ರ್ಯಾಲಿ ನಡೆಸಲು ರೆಡಿಯಾಗ್ತಿರೋದು ಕೇಂದ್ರ ಸರ್ಕಾರದ ಟೆನ್ಷನ್ ಹೆಚ್ಚಿಸಿದೆ. ಟ್ರಾಕ್ಟರ್ ರ್ಯಾಲಿ ನಡೆಸದಂತೆ ತಡೀಬೇಕು ಅಂತ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದ ಕೇಂದ್ರ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​, ಗಣರಾಜ್ಯೋತ್ಸವ ದಿನದಂದು ನಡೆಸಲು ಉದ್ದೇಶಿಸಿರುವ ಟ್ರಾಕ್ಟರ್​ ರ್ಯಾಲಿ ಅಥವಾ ಇತರ ಯಾವುದೇ ರೀತಿಯ ಪ್ರತಿಭಟನೆ ಬಗ್ಗೆ ನಾವು ಆದೇಶ ಪಾಸ್ ಮಾಡಲ್ಲ. ಈ ಬಗ್ಗೆ ನಿರ್ಧರಿಸುವ ಅಧಿಕಾರ ದೆಹಲಿ ಪೊಲೀಸರದ್ದು ಅಂತ ಹೇಳಿದೆ. ಜೊತೆಗೆ ಅರ್ಜಿಯನ್ನ ವಾಪಸ್ ಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಇನ್ನು 8 ರೈತ ಸಂಘಟನೆಗಳ ಪರ ವಾದ ಮಂಡಿಸಿದ ವಕೀಲ ಪ್ರಶಾಂತ್ ಭೂಷಣ್, ದೆಹಲಿಯ ಔಟರ್​ ರಿಂಗ್ ರೋಡ್​ನಲ್ಲಿ ರೈತರು ಶಾಂತಿಯುತವಾಗಿ ಗಣರಾಜ್ಯೋತ್ಸವವನ್ನ ಆಚರಿಸುತ್ತಾರೆ. ಶಾಂತಿ ಭಂಗ ಮಾಡೋದಿಲ್ಲ ಅಂತ ಕೋರ್ಟ್​ಗೆ ಹೇಳಿದ್ದಾರೆ.

ಇನ್ನು ಸುಪ್ರೀಂಕೋರ್ಟ್ ರಚಿಸಿರುವ ಕಮಿಟಿ ಮುಂದೆ ರೈತ ಮುಖಂಡರು ಹಾಜರಾಗಲ್ಲ ಅಂತ ಹೇಳ್ತಿದ್ದಾರಲಾ ಈ ಬಗ್ಗೆ ಮಾತನಾಡಿರುವ ಸಿಜೆಐ ಎಸ್.ಎ. ಬೊಬ್ಡೆ, ‘ಕಮಿಟಿ ಮುಂದೆ ಬರಬಾರದು ಅಂತ ನಿರ್ಧರಿಸಿದ್ರೆ ಅದು ಅವರ ಚಾಯ್ಸ್. ಆದ್ರೆ ಕಮಿಟಿಯಲ್ಲಿರುವ ತಜ್ಞರು ಈ ಹಿಂದೆ ಹೊಂದಿದ್ದ ಅಭಿಪ್ರಾಯಗಳನ್ನ ಆಧರಿಸಿ ಅವರ ಬಗ್ಗೆ ಅಪಪ್ರಚಾರ ಮಾಡಬಾರದು. ಕಮಿಟಿಯಲ್ಲಿರುವ ಸದಸ್ಯರು ಪಕ್ಷಪಾತ ಮಾಡ್ತಾರೆ ಅಥವಾ ಪೂರ್ವಾಗ್ರಹ ಪೀಡಿತರಾಗಿದ್ದಾರೆ ಅಂತ ಕರೆಯುವ ಹಕ್ಕು ಯಾರಿಗೂ ಇಲ್ಲ. ಕಮಿಟಿಯಲ್ಲಿರೋರಿಗೆ ಕೃಷಿ ಕಾನೂನುಗಳ ಬಗ್ಗೆ ನಿರ್ಧರಿಸುವ ಅಧಿಕಾರನೇ ಇಲ್ಲ ಅಂದಮೇಲೆ ಅವರನ್ನ ಪಕ್ಷಪಾತ ಅಂತ ಹೇಗೆ ಹೇಳ್ತೀರಾ?’ ಅಂತ ಸಿಜೆಐ ಎಸ್​.ಎ. ಬೊಬ್ಡೆ ಹೇಳಿದ್ದಾರೆ. ಇನ್ನು ಸುಪ್ರೀಂಕೋರ್ಟ್​ ರಚಿಸಿರುವ ಸಮಿತಿಯನ್ನ ಪುನಾರಚನೆ ಮಾಡಬೇಕು ಅಂತ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ನೋಟಿಸ್ ಕೊಟ್ಟಿರುವ ಕೋರ್ಟ್​ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ.

-masthmagaa.com

Contact Us for Advertisement

Leave a Reply