TMC ಹಾಗೂ JKNC ಪಕ್ಷಗಳ ಜೊತೆ ಮೈತ್ರಿ‌ ಮಾಡ್ಕೊ‍ಳ್ಳಲು ಕಾಂಗ್ರೆಸ್ ರೆಡಿ!

masthmagaa.com:

ಜಮ್ಮು-ಕಾಶ್ಮೀರದಲ್ಲಿ I.N.D.I ಮೈತ್ರಿಕೂಟದ ಲೋಕಸಭೆ ಸೀಟು ಹಂಚಿಕೆ ಬಿಕ್ಕಟ್ಟು ಅಂತಿಮ ಹಂತ ತಲುಪಿದೆ. ಇತ್ತೀಚಿಗೆ ಮೈತ್ರಿ ಕೂಟದ ಬಗ್ಗೆ ನ್ಯಾಷನಲ್‌ ಕಾನ್ಪರೆನ್ಸ್‌ ಪಾರ್ಟಿ (JKNC) ಅಧ್ಯಕ್ಷ ಫಾರೂಕ್‌ ಅಬ್ದುಲ್ಲಾ ಅಸಮಾಧಾನ ಹೊರಹಾಕಿ, ತಮ್ಮ ಪಕ್ಷ ಸ್ವತಂತ್ರವಾಗಿ ಸ್ಫರ್ಧೆ ಮಾಡಲಿದೆ ಅಂತೇಳಿದ್ರು. ಅಲ್ದೇ ಅವ್ರು ಬಿಜೆಪಿ ಜೊತೆ ಮೈತ್ರಿ ಮಾಡ್ಕೊಳ್ಳಲಿದ್ದಾರೆ ಅಂತೇಳಲಾಗಿತ್ತು. ಆದ್ರೆ ಇದೀಗ ಸೀಟು ಹಂಚಿಕೆ ವಿಚಾರವಾಗಿ ಕಾಂಗ್ರೆಸ್‌, ಫಾರೂಕ್‌ ಪುತ್ರ ಓಮರ್‌ ಅಬ್ದುಲ್ಲಾ ಜೊತೆ ಮಾತುಕತೆ ನಡೆಸಿ ಸೀಟು ಹಂಚಿಕೆ ಪ್ರಕ್ರಿಯೆ ಅಂತಿಮಗೊಳಿಸಲು ಮುಂದಾಗಿದೆ. ಈ ಸಂಬಂಧ ಜಮ್ಮು- ಕಾಶ್ಮೀರದ ಒಟ್ಟು 6 ಲೋಕಸಭಾ ಕ್ಷೇತ್ರಗಳ ಪೈಕಿ 3ರನ್ನ ನ್ಯಾಷನಲ್‌ ಕಾನ್ಪರೆನ್ಸ್‌ ಪಾರ್ಟಿಗೆ ಬಿಟ್ಟು ಕೊಡಲು ಕಾಂಗ್ರೆಸ್‌ ನಿರ್ಧರಿಸಿದ್ದು, ಇನ್ನುಳಿದ ಮೂರು ಸ್ಥಾನಗಳಲ್ಲಿ ಕಾಂಗ್ರೆಸ್‌ ಸ್ಪರ್ಧಿಸಲಿದೆ. ಈ ಮೂಲಕ ಉಭಯ ಪಕ್ಷಗಳು 3-3ರ ಲೆಕ್ಕಾಚಾರದ ಮೈತ್ರಿ ಮಾಡ್ಕೊಳ್ಳಲಿವೆ ಎನ್ನಲಾಗಿದೆ.

ಮತ್ತೊಂದೆಡೆ I.N.D.I ಮೈತ್ರಿಕೂಟದ ಭಾಗವಾಗಿ ಬಂಗಾಳ, ಅಸ್ಸಾಂ ಮತ್ತು ಮೇಘಾಲಯಗಳಲ್ಲಿ ಸೀಟು ಹಂಚಿಕೆ ಬಗ್ಗೆ ಕಾಂಗ್ರೆಸ್‌ ಜೊತೆ ಟಿಎಂಸಿ ಮಾತುಕತೆಗೆ ಮುಕ್ತವಾಗಿದೆ ಅನ್ನೋ ವಿಚಾರ ಹರಿದಾಡ್ತಿದೆ. ಈ ಹಿಂದೆ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಟಿಎಂಸಿ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುತ್ತೆ ಅಂದಿದ್ರು. ಆದ್ರೀಗ ಬಂಗಾಳದಲ್ಲಿ ಒಟ್ಟು 42 ಲೋಕಸಭಾ ಸ್ಥಾನಗಳ ಪೈಕಿ ಕಾಂಗ್ರೆಸ್‌ಗೆ ಎರಡು ಸೀಟು ಬಿಟ್ಟುಕೊಡಲು ಟಿಎಂಸಿ ನಿರ್ಧರಿಸಿದೆ ಎನ್ನಲಾಗ್ತಿದೆ. ಅಲ್ದೇ 14 ಸ್ಥಾನಗಳಿರೋ ಅಸ್ಸಾಂ ಮತ್ತು 2 ಸ್ಥಾನಗಳಿರೋ ಮೇಘಾಲಯದಲ್ಲಿ ತಲಾ ಒಂದು ಸ್ಥಾನವನ್ನ ಮಾತ್ರ ಕಾಂಗ್ರೆಸ್‌ಗೆ ನೀಡಲು ಟಿಎಂಸಿ ಮುಂದಾಗಿದೆ ಅಂತ ಮಾಹಿತಿ ಬರ್ತಿದೆ.

-masthmagaa.com

Contact Us for Advertisement

Leave a Reply