ಪಾಕಿಸ್ತಾನಕ್ಕೆ ಮತ್ತೊಮ್ಮೆ ಮುಖಭಂಗ: ಗ್ರೇ ಲಿಸ್ಟ್‌ನಲ್ಲೇ ಇಟ್ಟ ಎಫ್​ಎಟಿಎಫ್​​!

masthmagaa.com:

ಎಫ್​ಎಟಿಎಫ್​​ ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್​​​ನ ಗ್ರೇ ಲಿಸ್ಟ್​​ನಿಂದ ಈ ಸಲ ಆದ್ರೂ ಹೊರಗೆ ಬರಬಹುದು.. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ದುಡ್ಡು ಸಿಗಬಹುದು ಅಂತ ಭಾರಿ ಆಸೆಯಿಂದ ಕಾದುಕೂತಿದ್ದ ಪಾಕಿಸ್ತಾನಕ್ಕೆ ಭಾರಿ ಮುಖಭಂಗವಾಗಿದೆ. ಪಾಕಿಸ್ತಾನವನ್ನು ಮುಂದಿನ ಜೂನ್​​​ವರೆಗೆ ಗ್ರೇ ಲಿಸ್ಟ್​​​ನಲ್ಲೇ ಮುಂದುವರಿಸಲು ಪ್ಯಾರಿಸ್​​ನಲ್ಲಿ ನಡೆದ ಎಫ್​ಎಟಿಎಫ್ ಸಭೆಯಲ್ಲಿ ನಿರ್ಧರಿಸಲಾಗಿದೆ. ಗ್ರೇ ಲಿಸ್ಟ್​​​​ನಿಂದ ಹೊರಬರಲು ಪಾಕಿಸ್ತಾನ 27 ಮಾನದಂಡಗಳನ್ನು ಪೂರೈಸಬೇಕಿತ್ತು. ಅದ್ರೆ ಪಾಕ್ ಅವುಗಳಲ್ಲಿ 24ನ್ನು ಮಾತ್ರವೇ ಪೂರೈಸಿದ್ದು, ಮೂರು ಬಾಕಿ ಇದೆ. ಉಗ್ರರಿಗೆ ಹಣಕಾಸಿನ ಸಹಾಯ ಮಾಡೋದನ್ನು ಪಾಕ್ ಇನ್ನೂ ಕಂಪ್ಲೀಟಾಗಿ ನಿಲ್ಲಿಸಿಲ್ಲ.. ಜೊತಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಘೋಷಿಸಿರುವ ಉಗ್ರರ ವಿರುದ್ಧ ಕ್ರಮ ಕೈಗೊಳ್ಳಲು ಪಾಕ್ ಯಾವುದೇ ಹೆಜ್ಜೆ ಇಟ್ಟಿಲ್ಲ.

ಹೀಗಾಗಿ ಜೂನ್​​ವರೆಗೆ ಪಾಕಿಸ್ತಾನ ಗ್ರೇ ಲಿಸ್ಟ್​​ನಲ್ಲೇ ಮುಂದುವರಿಯಲಿದೆ. ನಂತರ ಮತ್ತೆ ಎಫ್​ಎಟಿಎಫ್​​ ತಂಡ, ಪಾಕ್​ ಎಲ್ಲಾ ಮಾನದಂಡಗಳನ್ನು ಪೂರೈಸಿದೆಯಾ ಅನ್ನೋದನ್ನು ಪರಿಶೀಲನೆ ನಡೆಸಿ, ಮುಂದಿನ ನಿರ್ಧಾರ ತೆಗೆದುಕೊಳ್ಳಲಿದೆ. ಅಂದಹಾಗೆ ಪಾಕಿಸ್ತಾನವನ್ನು 2018ರಿಂದಲೂ ಈ ಗ್ರೇ ಲಿಸ್ಟ್​​ನಲ್ಲೇ ಇಡಲಾಗಿದೆ. ಫೈನಾನ್ಶಿಯಲ್​​ ಆಕ್ಷನ್​ ಟಾಸ್ಕ್​ ಫೋರ್ಸ್​​​ ಅನ್ನೋದು ಅಕ್ರಮ ಹಣ ವರ್ಗಾವಣೆ ಮತ್ತು ಉಗ್ರರಿಗೆ ಹಣಕಾಸು ನೆರವಿನ ಮೇಲೆ ನಿಗಾ ಇಡುವ ಸಂಸ್ಥೆಯಾಗಿದೆ. ಇದರ ಗ್ರೇ ಲಿಸ್ಟ್​​​ನಲ್ಲಿರೋ ದೇಶಗಳಿಗೆ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಆರ್ಥಿಕ ನೆರವು ಸಿಗೋದು ಕಷ್ಟವಾಗುತ್ತೆ. ಈಗಾಗಲೇ ಎರಡೂವರೆ ವರ್ಷದಿಂದ ಈ ಲಿಸ್ಟ್​​ನಲ್ಲಿರೋ ಪಾಕಿಸ್ತಾನಕ್ಕೆ 3800 ಕೋಟಿ ಡಾಲರ್ ಅಂದ್ರೆ ಭಾರತದ ರೂಪಾಯಿ ಲೆಕ್ಕದಲ್ಲಿ 2 ಲಕ್ಷದ 75 ಸಾವಿರ ಕೋಟಿಗೂ ಅಧಿಕ ನಷ್ಟವಾಗಿದೆ.

-masthmagaa.com

Contact Us for Advertisement

Leave a Reply