ಪಾಕಿಸ್ತಾನದ ಪರಮಾಣು ಬಾಂಬ್ ಪಿತಾಮಹ ಇನ್ನಿಲ್ಲ

masthmagaa.com:

ಪಾಕಿಸ್ತಾನದ ಪರಮಾಣು ಸ್ಪೋಟಕಗಳ ಪಿತಾಮಹ ಅಂತಲೇ ಫೇಮಸ್ ಆಗಿರೋ ಅಬ್ದುಲ್ ಖಾದೀರ್ ಖಾನ್ ತಮ್ಮ 85ನೇ ವಯಸ್ಸಿನಲ್ಲಿ ಸಾವನ್ನಪ್ಪಿದ್ದಾರೆ. ಕೊರೋನಾ ಬಂದ ಹಿನ್ನೆಲೆ ಇವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ನಿನ್ನೆ ವಿಧಿವಶರಾಗಿದ್ದಾರೆ. 1998ರಲ್ಲಿ ಪಾಕಿಸ್ತಾನ ಮೊದಲ ಬಾರಿಗೆ ಪರಮಾಣು ಪರೀಕ್ಷೆ ನಡೆಸಿತ್ತು. ಇದ್ರ ಹಿಂದೆ ಕಾದಿರ್ ಖಾನ್ ಪಾತ್ರ ದೊಡ್ಡದಿತ್ತು. ಪಾಕಿಸ್ತಾನವನ್ನು ಪರಮಾಣು ಶಕ್ತಿ ಹೊಂದಿರೋ ವಿಶ್ವದ ಮೊದಲ ಇಸ್ಲಾಮಿಕ್ ದೇಶವನ್ನಾಗಿ ಮಾಡಿದ್ದರಿಂದ ಇವರನ್ನು ನ್ಯಾಷನಲ್ ಹೀರೋ ಅಂತ ಕರೆಯಲಾಗ್ತಿತ್ತು. ನಂತರದಲ್ಲಿ ಇವರು ಇರಾನ್, ಲಿಬಿಯಾ ಮತ್ತು ಉತ್ತರ ಕೊರಿಯಾ ದೇಶಗಳ ಪರಮಾಣು ಕಾರ್ಯಕ್ರಮಕ್ಕೆ ಕಾನೂನು ಬಾಹಿರವಾಗಿ ಸಹಾಯ ಮಾಡಿದ್ರು ಅನ್ನೋ ಆರೋಪ ಕೇಳಿ ಬಂದಿತ್ತು. ಹೀಗಾಗಿ ಇವರನ್ನು ಗೃಹಬಂಧನದಲ್ಲಿ ಇರಿಸಲಾಗಿತ್ತು. 2009ರಲ್ಲಿ ಕೋರ್ಟ್​​ ಖಾದಿರ್ ಖಾನ್ ಗೃಹಬಂಧನ ಅಂತ್ಯಗೊಳಿಸಿದ್ರೂ ಕೂಡ ಇವರ ಓಡಾಟದ ಮೇಲೆ ಸೂಕ್ಷ್ಮವಾಗಿ ನಿಗಾ ಇಡಲಾಗಿತ್ತು. ಅಂತಾರಾಷ್ಟ್ರೀಯ ಪರಮಾಣು ಬ್ಲಾಕ್ ಮಾರ್ಕೆಟ್​​ನಲ್ಲಿ ಖಾದಿರ್ ಖಾನ್ ಮಹತ್ವದ ಪಾತ್ರ ಹೊಂದಿದ್ದಾರೆ ಅಂತ ವಿಶ್ವದ ಪರಮಾಣು ಚಟುವಟಿಕೆಗಳ ಮೇಲೆ ನಿಗಾ ಇಡುವ ವಿಶ್ವಸಂಸ್ಥೆಯ ಘಟಕ ಐಎಇಎ ಘೋಷಿಸಿತ್ತು.

-masthmagaa.com

Contact Us for Advertisement

Leave a Reply