ಭಾರತದ ತಂಡದ ಮೇಲೆ ʻಫಿಫಾʼ ನಿರ್ಬಂಧದ ಕುರಿತು ಸುಪ್ರೀಂ ಕೋರ್ಟ್‌ ಹೇಳಿದ್ದೇನು?

masthmagaa.com:

ಫಿಫಾ, AIFF ಮೇಲೆ ಹೇರಿರೋ ಅಮಾನತು ನಿರ್ಧಾರವನ್ನು ತೆಗೆದು ಹಾಕಿಸಿ ಭಾರತದಲ್ಲೇ 17 ವರ್ಷದ ಒಳಗಿನ ಮಹಿಳೆಯರ ವಿಶ್ವಕಪ್‌ ಆಯೋಜಿಸುವಂತೆ ಕ್ರಮ ವಹಿಸಿ ಅಂತ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ ನೀಡಿದೆ. AIFFಅನ್ನ ಫಿಫಾ ಬ್ಯಾನ್‌ ಮಾಡಿರೋ ಕುರಿತು ಇವತ್ತು ವಿಚಾರಣೆ ನಡೀತು. ಈ ವೇಳೆ ಪ್ರತಿಕ್ರಿಯಿಸಿದ ಕೋರ್ಟ್‌ ಈ ರೀತಿ ಹೇಳಿದೆ. ಇನ್ನು ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ವಕೀಲ ತುಷಾರ್‌ ಮೆಹ್ತಾ ಅಮಾನತು ನಿರ್ಧಾರ ತೆಗೆಯುವ ಸಂಬಂಧ ಫಿಫಾ ಜೊತೆ ಮಾತುಕತೆ ನಡೆಯುತ್ತಿದೆ. ಈಗಾಗಲೇ 2 ಬಾರಿ ಸಭೆ ನಡೆಸಿದೆ. ಮಾತುಕತೆ ಫಲಪ್ರದವಾಗುವ ಸಾಧ್ಯತೆಯಿದೆ ಅಂತ ಹೇಳಿದ್ರು.

-masthmagaa.com

Contact Us for Advertisement

Leave a Reply