ಸಂತೋಷದಾಯಕ ರಾಷ್ಟ್ರಗಳ ಪಟ್ಟಿ: 7ನೇ ಬಾರಿ‌ ಫಿನ್‌ಲ್ಯಾಂಡ್‌ಗೆ ಅಗ್ರಸ್ಥಾನ!

masthmagaa.com:

2024ರ ವರ್ಲ್ಡ್‌ ಹ್ಯಾಪಿನೆಸ್‌ ರಿಪೋರ್ಟ್‌.. ವಿಶ್ವದ ಅತ್ಯಂತ ಸಂತೋಷದಾಯಕ ರಾಷ್ಟ್ರಗಳ ಪಟ್ಟಿ ರಿಲೀಸ್‌ ಆಗಿದೆ. ವಿಶ್ವಸಂಸ್ಥೆ ಸಹಯೋಗದಲ್ಲಿ ದ ಗಾಲಾಪ್‌ ವರ್ಲ್ಡ್‌ ಪೋಲ್‌ ಈ ರಿಪೋರ್ಟನ್ನ ರಿಲೀಸ್‌ ಮಾಡಿದೆ. ಇದ್ರಲ್ಲಿ ಸತತ 7ನೇ ಬಾರಿಗೆ ಫಿನ್‌ಲ್ಯಾಂಡ್‌ ವಿಶ್ವದ ಅತ್ಯಂತ ಸಂತೋಷದಾಯಕ ರಾಷ್ಟ್ರ ಅನ್ನೊ ಹೆಗ್ಗಳಿಕೆಗೆ ಪಾತ್ರವಾಗಿದೆ. ನಂತರ ಡೆನ್‌ಮಾರ್ಕ್‌, ಐಸ್‌ ಲ್ಯಾಂಡ್‌, ಸ್ವೀಡನ್..‌ ಪ್ರತಿ ವರ್ಷದಂತೆ ನೋರ್ಡಿಕ್‌ ದೇಶಗಳು, ಅಂದ್ರೆ ಉತ್ತರ ಯೂರೋಪ್..‌ ಉತ್ತರ ಅಟ್ಲಾಂಟಿಕ್‌ನಲ್ಲಿ ಬರೋ ದೇಶಗಳು ಟಾಪ್‌ 10 ಸ್ಥಾನಗಳಲ್ಲಿವೆ. ಇನ್ನು ಭಾರತ ಕಳೆದ ವರ್ಷದಂತೆ ಈ ವರ್ಷವೂ 126ನೇ ಸ್ಥಾನಕ್ಕೆ ತೃಪ್ತಿ ಪಟ್ಕೊಂಡಿದೆ. ಇನ್ನು ಇದೇ ಮೊದಲ ಬಾರಿಗೆ ಜನರೇಷನ್ ಆಧಾರದ ಮೇಲೆಯೂ ವಿವಿಧ ಪಟ್ಟಿಗಳನ್ನ ಪ್ರಕಟಿಸಲಾಗಿದ್ದು, 30 ವಯಸ್ಸಿನೊಳಗಿನ ಹ್ಯಾಪಿನೆಸ್ ರಾಷ್ಟ್ರಗಳ ಲಿಸ್ಟ್‌ನಲ್ಲಿ ಲಿಥುವೇನಿಯಾ ಅಗ್ರ ಸ್ಥಾನದಲ್ಲಿದೆ. 60 ವರ್ಷದೊಳಗಿನವ್ರ ಸಂತೋಷದಾಯಕ ದೇಶಗಳ ಲಿಸ್ಟ್‌ನಲ್ಲಿ ಡೆನ್ಮಾರ್ಕ್‌ ಮೊದಲ ಸ್ಥಾನದಲ್ಲಿದೆ. ಇನ್ನು ಈ 143 ರಾಷ್ಟ್ರಗಳ ಲಿಸ್ಟ್‌ನಲ್ಲಿ ತಾಲಿಬಾನ್‌ ಸರ್ಕಾರ ಇರೋ ಅಪ್ಘನಿಸ್ತಾನ ಕೊನೆಯ ಸ್ಥಾನದಲ್ಲಿದೆ. ಇನ್ನು 10 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಹ್ಯಾಪಿ ರಾಷ್ಟ್ರಗಳ ಟಾಪ್‌ 20 ಲಿಸ್ಟ್‌ನಿಂದ ಅಮೆರಿಕ ಹಾಗೂ ಜರ್ಮನಿ ಹೊರಬಿದ್ದಿದ್ದು, ಕ್ರಮವಾಗಿ 23 ಮತ್ತು 24ನೇ ಸ್ಥಾನದಲ್ಲಿವೆ. ಅಂತಿಮವಾಗಿ ಈ ರಿಪೋರ್ಟ್‌ನಲ್ಲಿ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಯುವ ಪೀಳಿಗೆಗಿಂತ ವಯಸ್ಕರು ಹೆಚ್ಚು ಸಂತೋಷವಾಗಿದ್ದಾರೆ ಅಂತೇಳಲಾಗಿದೆ.

-masthmagaa.com

Contact Us for Advertisement

Leave a Reply