ಚೀನಾದಲ್ಲಿ ಮುನುಷ್ಯನಿಗೆ ತಗುಲಿತು ಹಕ್ಕಿಜ್ವರದ H10N3 ತಳಿ!

masthmagaa.com:

ಕೊರೋನಾ ಹಾವಳಿ ನಡುವೆಯೇ ಚೀನಾದಲ್ಲಿ ಹಕ್ಕಿಜ್ವರದ ಹೆಚ್​10ಎನ್​3 ತಳಿ ಮನುಷ್ಯನಲ್ಲಿ ಕಾಣಿಸಿಕೊಂಡಿದೆ. ಮನುಷ್ಯನಲ್ಲಿ ಬರ್ಡ್​ ಫ್ಲೂನ ಹೆಚ್​10ಎನ್​3 ತಳಿಯ ಸೋಂಕು ಕಾಣಿಸಿಕೊಂಡಿರೋದು ಜಗತ್ತಿನಲ್ಲಿ ಇದೇ ಮೊದಲು ಅಂತ ಚೀನಾದ ನ್ಯಾಷನಲ್ ಹೆಲ್ತ್ ಕಮಿಷನ್ ಹೇಳಿದೆ. ಅಂದ್ಹಾಗೆ ಚೀನಾದ ಜಿಯಾಂಗ್ಸು ಪ್ರಾಂತ್ಯದ ಝೆನ್​ಜಿಯಾಂಗ್​ ನಗರದ 41 ವರ್ಷದ ವ್ಯಕ್ತಿಗೆ ಈ ವೈರಸ್​ ತಗುಲಿದೆ. ಸದ್ಯ ಆಸ್ಪತ್ರೆಯಲ್ಲಿರೋ ಈತನ ಆರೋಗ್ಯ ಸ್ಥಿರವಾಗಿದ್ದು ಡಿಸ್ಚಾರ್ಜ್​ಗೆ ರೆಡಿಯಾಗಿದ್ದಾನೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ. ಆದ್ರೆ ಈತನಿಗೆ ಸೋಂಕು ತಗುಲಿದ್ದು ಹೇಗೆ ಅನ್ನೋ ಬಗ್ಗೆ ಮಾಹಿತಿ ನೀಡಿಲ್ಲ. ಚೀನಾದಲ್ಲಿ ಹಕ್ಕಿಜ್ವರದ ವಿವಿಧ ತಳಿಗಳಿವೆ. ಅದರಲ್ಲಿ ಕೆಲವೊಂದು ತಳಿಗಳು ಪೌಲ್ಟ್ರಿಯಲ್ಲಿ ಕೆಲಸ ಮಾಡೋರಿಗೆ ತಗುಲುತ್ತಿರುತ್ತೆ. ಆದ್ರೆ ಈ ತಳಿ ತಗುಲಿರೋದು ಇದೇ ಫಸ್ಟ್ ಟೈಂ. ಈ ವೈರಸ್ ಕಡಿಮೆ ರೋಗಕಾರಕವಾಗಿದೆ. ಜೊತೆಗೆ ದೊಡ್ಡ ಪ್ರಮಾಣದ ಔಟ್​ಬ್ರೇಕ್​ಗೂ ಕಾರಣವಾಗಲ್ಲ ಅಂತಾನೂ ಚೀನಾ ಹೇಳಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ವಿಶ್ವ ಆರೋಗ್ಯ ಸಂಸ್ಥೆ, ರೋಗಿಗೆ ಈ ವೈರಸ್​ ತಗುಲಿದ್ದು ಹೇಗೆ, ಅದರ ಮೂಲ ಯಾವ್ದು ಅಂತ ಗೊತ್ತಾಗಿಲ್ಲ. ಜೊತೆಗೆ ಆ ಪ್ರದೇಶದಲ್ಲಿ ಬೇರೆ ಪ್ರಕರಣ ವರದಿಯಾಗಿಲ್ಲ. ಸದ್ಯ ಮನುಷ್ಯನಿಂದ ಮನುಷ್ಯನಿಗೆ ಈ ವೈರಸ್ ಹರಡುತ್ತೆ ಅನ್ನೋ ಸೂಚನೆಗಳಿಲ್ಲ ಅಂತ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

-masthmagaa.com

Contact Us for Advertisement

Leave a Reply