masthmagaa.com:

ಕೊರೋನಾ ವೈರಸ್ ಮೊದಲು ಕಾಣಿಸಿಕೊಂಡ ಚೀನಾದಲ್ಲಿ ಮಹಾಮಾರಿ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿದೆ ಅಂತ ಚೀನಾ ಹೇಳ್ತಿದೆ. ಎಷ್ಟರಮಟ್ಟಿಗೆ ಅಂದ್ರೆ ಕಳೆದ 23 ದಿನಗಳಿಂದ ಒಂದೇ ಒಂದು ಸ್ಥಳೀಯ ಪ್ರಕರಣ ದೃಢಪಟ್ಟಿಲ್ಲ. ಈ ಅವಧಿಯಲ್ಲಿ ಪತ್ತೆಯಾಗಿರುವ ಎಲ್ಲಾ ಪ್ರಕರಣಗಳು ವಿದೇಶದಿಂದ ಬಂದವರು ಅಂತ ಚೀನಾ ಹೇಳಿಕೊಂಡಿದೆ. ಆದ್ರೆ ಕೊರೋನಾ ಸೋಂಕಿತರ ವಿಚಾರದಲ್ಲಿ ಚೀನಾ ಸುಳ್ಳು ಹೇಳ್ತಿದೆ ಅನ್ನೋದಕ್ಕೆ ಮತ್ತೊಂದು ಸಾಕ್ಷ್ಯ ಸಿಕ್ಕಿದಂತೆ ಕಾಣ್ತಿದೆ.

ಏನಾಗಿದೆ ಅಂದ್ರೆ, ಆಗಸ್ಟ್​ 16ರಿಂದ ಇಲ್ಲಿಯವರೆಗೆ ಚೀನಾದಿಂದ ದಕ್ಷಿಣ ಕೊರಿಯಾಗೆ ಬಂದ ಐವರು ಪ್ರಯಾಣಿಕರಿಗೆ ಕೊರೋನಾ ಪಾಸಿಟಿವ್ ಬಂದಿದೆ ದಕ್ಷಿಣ ಕೊರಿಯಾದ ಆರೋಗ್ಯ ಇಲಾಖೆ ತಿಳಿಸಿದೆ. ಇದರಲ್ಲಿ ಇಬ್ಬರು ದಕ್ಷಿಣ ಕೊರಿಯಾ ಪ್ರಜೆಗಳಾಗಿದ್ರೆ, ಮೂವರು ಚೀನಾ ಪ್ರಜೆಗಳಾಗಿದ್ದಾರೆ. ಈ ಮೂಲಕ ಕಳೆದ ಮೂರು ವಾರಗಳಿಂದ ಸ್ಥಳೀಯ ಪ್ರಕರಣಗಳೇ ದೃಢಪಟ್ಟಿಲ್ಲ, ವಿದೇಶದಿಂದ ಬಂದವರಲ್ಲಿ ಮಾತ್ರ ಸೋಂಕು ದೃಢಪಡುತ್ತಿದೆ ಅಂತಿದ್ದ ಚೀನಾದ ಕಳ್ಳಾಟ ಬಯಲಾಗಿದೆ.

ಮತ್ತೊಂದುಕಡೆ ಇವತ್ತು ಚೀನಾದ ಕೊರೋನಾ ವಾರಿಯರ್ಸ್​ಗೆ ಗೌರವಿಸುವ ಕಾರ್ಯಕ್ರಮವನ್ನು ಜಿನ್​ಪಿಂಗ್ ಆಯೋಜಿಸಿದ್ದರು. ಈ ವೇಳೆ ಮಾತನಾಡಿದ ಅವರು, ಕೊರೋನಾ ವಿರುದ್ಧ ನಾವು ಗೆದ್ದಿದ್ದೇವೆ ಅಂತ ಘೋಷಿಸಿದ್ದಾರೆ. ಜೊತೆಗೆ ಕೊರೋನಾ ವಿರುದ್ಧ ಚೀನಾ ಪಾರದರ್ಶಕವಾಗಿಯೇ ಕೆಲಸ ಮಾಡಿದೆ. ಯಾವುದನ್ನೂ ಮುಚ್ಚುಮರೆ ಮಾಡಿಲ್ಲ ಅಂತ ಹೇಳಿದ್ದಾರೆ. ಜಿನ್​ಪಿಂಗ್ ಹೀಗೆ ಹೇಳ್ತಿದ್ರೆ, ಅತ್ತ ಚೀನಾದಿಂದ ದಕ್ಷಿಣ ಕೊರಿಯಾಗೆ ಬಂದಿದ್ದ ಪ್ರಯಾಣಿಕರಿಗೆ ಸೋಂಕು ತಗುಲಿರೋದು ಚೀನಾವನ್ನು ಅನುಮಾನದ ಕಣ್ಣುಗಳಿಂದ ನೋಡುವಂತೆ ಮಾಡಿದೆ.

-masthmagaa.com

Contact Us for Advertisement

Leave a Reply