ಇಡಿ ವಿರುದ್ಧವೇ ಕೋರ್ಟ್ ಮೆಟ್ಟಿಲೇರಿದ ಫ್ಲಿಪ್​ಕಾರ್ಟ್ ಸಹ ಸಂಸ್ಥಾಪಕ!

masthmagaa.com:

ಫ್ಲಿಪ್​ಕಾರ್ಟ್​​ ಕೋ ಫೌಂಡರ್ ಸಚಿನ್ ಬನ್ಸಲ್ ಇಡಿ ಅಂದ್ರೆ ಜಾರಿ ನಿರ್ದೇಶನಾಲಯ ವಿರುದ್ಧವೇ ತಮಿಳುನಾಡು ಹೈಕೋರ್ಟ್​ ಮೆಟ್ಟಿಲೇರಿದ್ದಾರೆ. ಜುಲೈ ತಿಂಗಳಲ್ಲಿ ಫ್ಲಿಪ್​​ಕಾರ್ಟ್ ಸಂಸ್ಥೆಗೆ ನೋಟಿಸ್ ನೀಡಿದ್ದ ಇಡಿ, ಸಂಸ್ಥೆಯ ಸಂಸ್ಥಾಪಕರು ಮತ್ತು ಕೆಲ ಇನ್ವೆಸ್ಟರ್​​ಗಳು 2009ರಿಂದ 2015ರವರೆಗೆ ಫಾರಿನ್ ಇನ್ವೆಸ್ಟ್​ಮೆಂಟ್ ಲಾಗಳನ್ನು ಉಲ್ಲಂಘಿಸಿದ್ದೀವಿ. ನಿಮಗೆ ಯಾಕೆ 1.35 ಬಿಲಿಯನ್ ಡಾಲರ್ ದಂಡ ವಿಧಿಸಬಾರದು ಅಂತ ಪ್ರಶ್ನಿಸಿತ್ತು. ಅಂದಹಾಗೆ 1.35 ಬಿಲಿಯನ್ ಡಾಲರ್ ಅಂದ್ರೆ 9990 ಕೋಟಿ ರೂಪಾಯಿ ಆಗುತ್ತೆ. ಹೀಗಾಗಿ ಈಗ ಕೋರ್ಟ್​ ಮೆಟ್ಟಿಲೇರಿರೋ ಸಚಿನ್ ಬನ್ಸಲ್​​, ತುಂಬಾ ತಡವಾಗಿ ನೋಟಿಸ್ ನೀಡಲಾಗಿದೆ. ಹೀಗಾಗಿ ನೋಟಿಸ್ ರದ್ದುಪಡಿಸಬೇಕು ಅಂತ ಮನವಿ ಮಾಡಿದ್ಧಾರೆ. ಮತ್ತೊಂದ್ಕಡೆ ಮುಂದಿನ ಶುಕ್ರವಾರ ವಿಚಾರಣೆ ನಡೆಸೋದಾಗಿ ಹೇಳಿರೋ ಕೋರ್ಟ್​​, ಈ ಬಗ್ಗೆ ಪ್ರತಿಕ್ರಿಯಿಸಿ ಅಂತ ಇಡಿಗೆ ತಿಳಿಸಿದೆ. ಅಂದಹಾಗೆ ಈ ಹಿಂದೆ ಪ್ರತಿಕ್ರಿಯಿಸಿದ್ದ ಫ್ಲಿಪ್​ಕಾರ್ಟ್​, ನಾವು ಭಾರತದ ಕಾನೂನು ಪ್ರಕಾರವಾಗಿಯೇ ಎಲ್ಲಾ ವ್ಯವಹಾರ ನಡೆಸಿದ್ದೀವಿ ಅಂತ ಹೇಳಿತ್ತು. ‘

-masthmagaa.com

Contact Us for Advertisement

Leave a Reply